ಟೈಗರ್ ಪ್ರಭಾಕರ್ ಅವರ ಮೂವರು ಹೆಂಡತಿಯರನ್ನು ಮೊದಲ ಬಾರಿಗೆ ತೋರಿಸ್ತೀವಿ ನೋಡಿ

ಟೈಗರ್ ಪ್ರಭಾಕರ್ ಅವರ ಗತ್ತು, ಸ್ಟೈಲ್, ಡೈಲಾಗ್ ಮತ್ತು ಅವರ ಫೈಟಿಂಗ್ಸ್ ಅನ್ನು ಯಾರು ತಾನೇ ಮರೆಯಲು ಸಾಧ್ಯ ಹೇಳಿ.?

ಯಾವುದೇ ಬ್ಯಾಕ್ ಗ್ರೌಂಡ್ ಇಲ್ಲದೇ ಸ್ವಂತ ಪರಿಶ್ರಮದಿಂದ ಪ್ರಸಿದ್ಧಿ ಗಳಿಸಿದ ಶ್ರಮ ಜೀವಿ ಈ ಟೈಗರ್ ಪ್ರಭಾಕರ್. ತನ್ನ ಹದಿನಾಲ್ಕು ವರ್ಷದ ವಯಸ್ಸಿನಲ್ಲಿ ಇಬ್ಬರು ಬಾಕ್ಸರ್ ಗಳಿಗೆ ಮಣ್ಣುಮುಕ್ಕಿಸಿದ ಟೈಗರ್, ಸ್ಟಂಟ್ ಮ್ಯಾನ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಂತರ ಸ್ಟಂಟ್ ಮಾಸ್ಟರ್ ಆಗಿ ಆಕ್ಷನ್ ಸೀನ್ ಗಳನ್ನು ಡೈರೆಕ್ಟ್ ಮಾಡುತ್ತಿದ್ದರು. ಇವರ ಸ್ಟಂಟ್ ನೋಡುವ ಸಲುವಾಗಿಯೇ ಹೀರೋ ಯಾರು ಎಂದು ನೋಡದೇ ಜನ ಸಿನಿಮಾ ಥಿಯೇಟರ್ಗೆ ಹೋಗುತ್ತಿದ್ದ ಕಾಲ ಅದು. ಚಿಕ್ಕಪುಟ್ಟ ಪಾತ್ರ ಮಾಡುತ್ತಿದ್ದ ಟೈಗರ್ ಪ್ರಭಾಕರ್ ತನ್ನ ನೂರನೇ ಚಿತ್ರ ಮುತ್ತೈದೇ ಭಾಗ್ಯದಲ್ಲಿ ಫುಲ್ ಟೈಮ್ ಹೀರೋ ಆದ್ರು. ಟೈಗರ್ ಪ್ರಭಾಕರ್ ಅವರು ಮೊದಲು ಮದುವೆಯಾಗಿದ್ದು ಮೇರಿ ಅಲ್ಫೋನ್ಸ ಅವರನ್ನು. ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗು. ಆ ಗಂಡು ಮಗುನೇ ವಿನೋದ್ ಪ್ರಭಾಕರ್.

ಕಾಲಾಂತರದಲ್ಲಿ ಮೇರಿ ಅಲ್ಫೋನ್ಸ ಅವರಿಗೆ ವಿಚ್ಛೇದನ ಕೊಟ್ಟ ಟೈಗರ್ ಪ್ರಭಾಕರ್, ತನ್ನ ಜೊತೆ ಹಲವಾರು ಸಿನಿಮಾಗಳಲ್ಲಿ ನಟಿಸಿ ಲವ್ಲಿ ಫೇರ್ ಅನಿಸಿಕೊಂಡಿದ್ದ ನಟಿ ಜಯಮಾಲಾ ಅವರನ್ನು ಮದುವೆಯಾದರು.  ಇವರ ದಾಂಪತ್ಯ ಹಲವು ವರ್ಷ ಅನ್ಯೋನ್ಯವಾಗಿಯೇ ನಡೆಯಿತು. ನಂತರ ಇಬ್ಬರ ಮಧ್ಯೆ ವೈಮನಸ್ಸು ಉಂಟಾಗಿ ಜಯಮಾಲಾ ಅವರಿಗೆ ವಿಚ್ಛೇದನ ಕೊಟ್ಟರು ಟೈಗರ್ ಪ್ರಭಾಕರ್.

ತೆಲುಗು, ತಮಿಳು, ಮಲಯಾಳಂನಲ್ಲಿ ಸಖತ್ ಫೇಮಸ್ ಆಗಿದ್ದ ಟೈಗರ್ ಪ್ರಭಾಕರ್, ಮಲಯಾಳಂನ ಖ್ಯಾತ ನಟಿ ಅಂಜು ಅವರನ್ನು ಮೂರನೇ ಮದುವೆಯಾದರು. ಆದರೆ ಕೇವಲ ಒಂದೇ ವರ್ಷಕ್ಕೆ ನಟಿ ಅಂಜುಗೆ ವಿಚ್ಛೇದನ ಕೊಟ್ಟು ಒಂಟಿ ಜೀವನ ನಡೆಸಲು ಶುರು ಮಾಡಿದ್ರು.

1980 ರಲ್ಲಿ ನಡೆದ ಬೈಕ್ ಅಪಘಾತಕ್ಕೆ ತುತ್ತಾಗಿದ್ದ ಟೈಗರ್ ಪ್ರಭಾಕರ್, ಆಗ ಯವ್ವನದಲ್ಲಿದ್ದ ಕಾರಣ ಬೇಗ ಚೇತರಿಸಿಕೊಂಡಿದ್ದರು. ಆದ್ರೆ ವಯಸ್ಸಾಗುತ್ತಿದ್ದಂತೆ ಹಳೆಯ ಕಾಟಕೊಡಲು ಶುರು ಮಾಡಿತು. ಹಾಗಾಗಿಯೇ ಟೈಗರ್ ಪ್ರಭಾಕರ್ ಅವರ ಕೊನೆಯ ದಿನಗಳು ದೈಹಿಕ ನೋವುಗಳಿಂದಲೇ ಕಳೆದರು.

ಟೈಗರ್ ಪ್ರಭಾಕರ್ ಇಂತಹ ವ್ಯಕ್ತಿ ಎಂದರೆ, ‘ಅಣ್ಣಾ ಕಷ್ಟದಲ್ಲಿದ್ದೀನಿ, ಅಂತ ಯಾರೇ ಹೇಳಿದ್ರೂ ಜೇಬಲ್ಲಿದ್ದ ಎಲ್ಲಾ ಹಣವನ್ನ ಅವರಿಗೆ ಕೊಟ್ಟು ಬಿಡುತ್ತಿದ್ರು. ಟೈಗರ್ ಪ್ರಭಾಕರ್ ಅವರು ಮಾಡಿದ ದಾನ-ಧರ್ಮಗಳು ಲೆಕ್ಕಕ್ಕಿಲ್ಲ.ಹಾಗಾಗಿಯೇ ಉಳಿತಾಯ ಹೆಚ್ಚು ಮಾಡುತ್ತಿರಲಿಲ್ಲ. ಚಿತ್ರರಂಗ ಕಂಡ ನಿಸ್ವಾರ್ಥ ಮತ್ತು ಹೃದಯವಂತ ಈ ಟೈಗರ್ ಪ್ರಭಾಕರ್.

ಟೈಗರ್ ಪ್ರಭಾಕರ್ ಅವರ ಡೈಲಾಗ್ ಮತ್ತು ಫೈಟ್ಸ್ ನಿಮಗೆ ಇಷ್ಟವಾಗಿದ್ರೆ, ಅವರಿಗೆ ಒಂದು ಲೈಕ್ ಕೊಟ್ಟು, ಹಾಗೆಯೇ ಯಾರೆಲ್ಲಾ ಈ ಅಧ್ಭುತ ನಟನನ್ನು ಮಿಸ್ ಮಾಡಿಕೊಳ್ತಿದ್ದೀರಾ ಎಂದು ಕಾಮೆಂಟ್ ನಲ್ಲಿ ತಿಳಿಸಿ. ಹಾಗೇ ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

Leave a Reply