ಈ ಪ್ರದೇಶದಲ್ಲಿ ಇನ್ನೂ ಇದೆ ಸ್ವಯಂವರ ! ಆಚರಣೆ ಹೀಗೆ ಬಹಳ ವಿಚಿತ್ರವಾಗಿದೆ

ಭಾರತೀಯ ಸಂಸ್ಕೃತಿಯಲ್ಲಿ ಬಹಳ ಹಿಂದಿನಿಂದಲೂ ಯುವತಿಯರಿಗೆ ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಇದೆ. ಹಿಂದಿನ ಕಾಲದಲ್ಲಿ ಸ್ವಯಂವರ ಇದ್ದ ಹಾಗೇ ಈಗಿನ ಕಾಲದಲ್ಲೂ ಈ ನಗರದಲ್ಲಿ ಸ್ವಯಂವರವಿದೆ! ಈ ಆಚರಣೆ ಬಹಳ ವಿಚಿತ್ರವಾಗಿದೆ‌.

ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ಅಂತಹ ಒಂದು ಸಂಪ್ರದಾಯದ ಇನ್ನೂ ಜೀವಂತ ಇದೆ. ಪೂರ್ಣಿಮಾ ಜಿಲ್ಲೆಯಲ್ಲಿ ಪ್ರತಿ ವರ್ಷ ಜಾತ್ರೆ ನಡೆಯುತ್ತದೆ ಇದನ್ನು ಪಟ್ಟ ಮೇಳ ಎಂದು ಕರೆಯಲಾಗುತ್ತದೆ, ಇದರಲ್ಲಿ ಹುಡುಗಿಯರು ತಮ್ಮ ಇಷ್ಟದ ವರನನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

WhatsApp Group Join Now
Telegram Group Join Now

ಸ್ವಯಂವರದಲ್ಲಿ ಯುವತಿ ಯುವಕನೋರ್ವನನ್ನು ನೋಡಿ ಪಾನ್ (ಎಲೆ) ತಿಂದರೆ ಸಂಬಂಧ ನಿಶ್ಚಯವಾದಂತೆ. ಮಾಲಿನಿ ಗ್ರಾಮದಲ್ಲಿ ಪಟ್ಟಾ ಹೆಸರಿನಲ್ಲಿ ಈ ಜಾತ್ರೆ ನಡೆಯುತ್ತದೆ.

ಹುಡುಗ ಹುಡುಗಿಯನ್ನು ಇಷ್ಟಪಟ್ಟರೆ, ಅವನು ಯುವತಿಗೆ ತಿನ್ನಲು ಪಾನ್ ನೀಡುವ ಮೂಲಕ ಮದುವೆ ಆಗುವಂತೆ ತನ್ನ ಪ್ರಸ್ತಾಪನೆ ಸಲ್ಲಿಸುತ್ತಾನೆ. ಒಂದು ವೇಳೆ ಯುವತಿ ಆತ ನೀಡಿದ ಪಾನ್ ತಿಂದ್ರೆ ಮದುವೆಗೆ ಒಪ್ಪಿಗೆ ಸೂಚಿಸದಂತೆ. ಅಲ್ಲಿಯೇ  ಎಲ್ಲರ ಒಪ್ಪಿಗೆ ಪಡೆದು ಯುವಕ ಯುವತಿಯನ್ನು ತನ್ನ ಜೊತೆಗೆ ಕರೆದುಕೊಂಡು ಹೋಗಬಹುದು.

WhatsApp Group Join Now
Telegram Group Join Now

ಅಂದಿನ ಕಾಲದಲ್ಲಿಯೂ ಇಲ್ಲಿನ ಮಹಿಳೆಯರು ತಮ್ಮ ಸಂಗಾತಿಯನ್ನ ತಾವೇ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಇಂದಿಗೂ ಪ್ರತಿವರ್ಷ ನಡೆಯುವ ಜಾತ್ರೆಯಲ್ಲಿ  ಸ್ವಯಂವರ ನಡೆಯುತ್ತದೆ.

WhatsApp Group Join Now
Telegram Group Join Now

Leave a Reply