Solar Pumpset : ತೋಟಗಾರಿಕೆ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಹಾಗು ತೋಟಗಾರಿಕೆ ಇಲಾಖೆ ವತಿಯಿಂದ ವಿನೂತನ ತಂತ್ರಜ್ಞಾನ ಯಂತ್ರೋಪಕರಣಗಳ ಸಹಾಯಧನ ಯೋಜನೆಯ ಅಡಿಯಲ್ಲಿ ಸೋಲಾರ್ ಪಂಪ್ ಸೆಟ್(Solar Pumpset) ಅಳವಡಿಸಲು ರೈತರಿಗೆ ಸಹಾಯಧನವನ್ನು ನೀಡಲಾಗುತ್ತಿದೆ. ಬಡ ರೈತರಿಗೆ ಇದೊಂದು ಉತ್ತಮ ಅವಕಾಶ. ಹಾಗಾದರೆ ಅರ್ಹ ಫಲಾನುಭವಿ ರೈತರು ಈ ಸೋಲಾರ್ ಪಂಪ್ ಸೆಟ್ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು.? ಏನೆಲ್ಲಾ ಅರ್ಹತೆಗಳಿರಬೇಕು.? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.
ಸೋಲಾರ್ ಪಂಪ್ ಸೆಟ್(Solar Pumpset) ಅಳವಡಿಸಲು ಸಬ್ಸಿಡಿ :
ಬಡ ರೈತರ ಏಳಿಗೆಗಾಗಿ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಈಗಿನ ಕಾಲದಲ್ಲಿಯೂ ಕೃಷಿಯು ಸಹ ಭಾರತದ ಆರ್ಥಿಕತೆಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಕಾರ್ಯನಿರ್ವಹಿಸುತ್ತಿದ್ದು, ಕೃಷಿಯನ್ನ ದೇಶದ ಬಹುಮುಖ್ಯ ವೃತ್ತಿಯಾಗಿ ನೋಡಬಹುದು. ಹಾಗಾಗಿ ಸಾಮಾನ್ಯ ವರ್ಗದ ರೈತರು ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅರ್ಹ ಫಲಾನುಭವಿ ರೈತರಿಗೆ 50% ರಷ್ಟು ಸಹಾಯಧನವನ್ನು ಈ ಯೋಜನೆಯ ಅಡಿಯಲ್ಲಿ ನೀಡಲಾಗುತ್ತಿದೆ.
ಇದನ್ನೂ ಕೂಡ ಓದಿ : ಆಧಾರ್ ಕಾರ್ಡ್ ಇದ್ದವರಿಗೆ ಬಿಗ್ ಶಾಕ್ – ಮಾರ್ಚ್ 14ರ ಒಳಗಾಗಿ ಈ ಕೆಲಸ ಕಡ್ಡಾಯ – ಇಲ್ಲಾಂದ್ರೆ ಆಧಾರ್ ಕಾರ್ಡ್ ಬಂದ್!
ಹಾಗಾಗಿ ಸರ್ಕಾರ ರೈತರಿಗೆ ಜಾರಿಗೆ ತರುವ ಇಂತಹ ಉತ್ತಮ ಯೋಜನೆಗಳ ಲಾಭವನ್ನು ರೈತರು ಸದುಪಯೋಗ ಪಡಿಸಿಕೊಂಡು ತಮ್ಮ ಕೃಷಿಯಲ್ಲಿ ಅಭಿವೃದ್ಧಿಯನ್ನು ಸಾಧಿಸಬಹುದಾಗಿದೆ. ಬರಗಾಲ ಸಮಯದಲ್ಲಿ ಬೆಳೆ ನಾಶ ತಡೆಗಟ್ಟುವ ಉದ್ದೇಶದಿಂದ ಹಾಗು ರೈತರ ನೀರಾವರಿ ಸೌಲಭ್ಯವನ್ನು ಹೆಚ್ಚಿಸಲು ದೇಶದಲ್ಲಿ ಈ ಸೋಲಾರ್ ಪಂಪ್ ಸೆಟ್(Solar Pumpset) ಯೋಜನೆಯನ್ನು ಜಾರಿಗೆ ತಂದಿದ್ದು, ದೇಶದಲ್ಲಿ ಕೃಷಿಯ ಮಹತ್ವವನ್ನು ಹೆಚ್ಚಿಸಲು ಮತ್ತು ಬಡ ರೈತರ ಕೃಷಿ ಆದಾಯವನ್ನು ಅಭಿವೃದ್ಧಿಪಡಿಸಲು ಸಲುವಾಗಿ ಸರ್ಕಾರವು ಈ ಮಹತ್ವದ ಯೋಜನೆಯನ್ನ ಜಾರಿಗೆ ತಂದಿದೆ.
ಸೋಲಾರ್ ಪಂಪ್ ಸೆಟ್(Solar Pumpset) ಯೋಜನೆಗೆ ಸಹಾಯಧನ ಸೌಲಭ್ಯ :
ಕೇಂದ್ರ ಸರ್ಕಾರವು ಈ ಸೋಲಾರ್ ಪಂಪ್ ಸೆಟ್(Solar Pumpset) ಯೋಜನೆಯ ಅಡಿಯಲ್ಲಿ ರೈತರ ನೀರಾವರಿಗಾಗಿ ಸೌರಚಾಲಿತ ಪಂಪ್ ಸೆಟ್ ಗಳನ್ನು ಒದಗಿಸುತ್ತಿದೆ. ಆದ್ದರಿಂದ ರೈತರಿಗೆ ಈ ಯೋಜನೆಯ ಅಡಿಯಲ್ಲಿ ಎಷ್ಟು ಸಹಾಯಧನ ಸಿಗಲಿದೆ.? ಎಂದು ನೋಡೋಣ.. 3 ಎಚ್ ಪಿ ಸೋಲಾರ್ ಪಂಪ್ ಸೆಟ್ ಗೆ 1 ಲಕ್ಷ. 5 ಎಚ್ ಪಿ ಸೋಲಾರ್ ಪಂಪ್ ಸೆಟ್ ಗೆ 1.50 ಲಕ್ಷ ಹಾಗೂ ಇನ್ನೂ ಹೆಚ್ಚಿನ ಸಾಮರ್ಥ್ಯದ ಸೋಲಾರ್ ಪಂಪ್ ಸೆಟ್ ಗಳಿಗೆ ಕೂಡ ಸಹಾಯಧನ ಸಿಗಲಿದೆ.1.9 ಲಕ್ಷ ರೂಪಾಯಿಗಳವರಿಗೆ 50% ರಂತೆ 3 ಎಚ್ ಪಿ ಸೋಲಾರ್ ಪಂಪ್ ಸೆಟ್ ಗಳಿಗೆ ಘಟಕ ವೆಚ್ಚವಾಗಿ 0.99 ಲಕ್ಷಕ್ಕೆ ಮಿತಿಗೊಳಿಸಿ ಸಬ್ಸಿಡಿ ಸಹಾಯಧನವನ್ನು ನೀಡಲಾಗುತ್ತದೆ. ಹೀಗೆ ಇದರ ಜೊತೆಗೆ ವಿಮೆ ಮಾಡಿಸುವುದು ಕೂಡ ಕಂಪನಿಯ ಜವಾಬ್ದಾರಿಯಾಗಿದ್ದು, ಸೂಕ್ತ ದಾಖಲೆಯನ್ನು ಪಡೆದು ಸೋಲಾರ್ ಪಂಪ್ ಸೆಟ್(Solar Pumpset)ಗಳಿಗೆ ವಿಮೆ(Insurance) ಮಾಡಿಸಬೇಕಾಗುತ್ತದೆ.
ಇದನ್ನೂ ಕೂಡ ಓದಿ : Ration Card Updates : ಹೊಸ ರೇಷನ್ ಕಾರ್ಡ್ ಗಾಗಿ ಕಾಯುತ್ತಿದ್ದೀರಾ.? ಅರ್ಜಿ ಸಲ್ಲಿಸಲು ಅವಕಾಶ ನೀಡಿದೆಯಾ ಸರ್ಕಾರ.? ಹೇಗೆ ಅರ್ಜಿ ಸಲ್ಲಿಸುವುದು.?
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳೇನು.?
ಸೋಲಾರ್ ಪಂಪ್ ಸೆಟ್(Solar Pumpset)ಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಬೆಳೆ ದೃಢೀಕರಣ ಪತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, 20 ರೂಪಾಯಿ ಬಾಂಡ್ ಪೇಪರ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಅರ್ಜಿದಾರರ ಭಾವಚಿತ್ರ ಸೇರಿದಂತೆ ಕೆಲವು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ಸೋಲಾರ್ ಪಂಪ್ ಸೆಟ್(Solar Pumpset)ಗೆ ಅರ್ಜಿ ಸಲ್ಲಿಸುವ ವಿಧಾನ :
ಸೋಲಾರ್ ಪಂಪ್ ಸೆಟ್(Solar Pumpset)ಗೆ ಸಬ್ಸಿಡಿ ಸಹಾಯಧನವನ್ನು ಪಡೆಯಲು ಅರ್ಹ ಫಲಾನುಭವಿ ರೈತರು ತಮ್ಮ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ, ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿಯನ್ನು ಆಫ್ ಲೈನ್ ಮೂಲಕ ಸಲ್ಲಿಸಬಹುದಾಗಿದೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..