ರಾಜ್ ಗೆ ಶಾಕ್ ಕೊಟ್ಟ ರಮ್ಯಾ.? ಪದ್ಮಾವತಿ ಸ್ವಾತಿ ಮುತ್ತಿನಿಂದ ಔಟ್!

ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾವನ್ನು ಮೋಹಕ ತಾರೆ ರಮ್ಯಾ ನಿರ್ಮಿಸುತ್ತಿದ್ದಾರೆ. ಆದರೆ ಅವರು ಈ ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂಬ ಸುದ್ದಿ ಅಧಿಕೃತವಾಗಿದೆ. ಮೋಹಕ ತಾರೆ ರಮ್ಯಾ ಅವರು ಅಭಿನಯದಿಂದ ದೂರವಾಗಿ ಹಲವು ವರ್ಷಗಳೇ ಕಳೆದಿದ್ದರೂ ಕೂಡ ಅವರ ಅಭಿಮಾನಿ ಬಳಗ ಕಿರಿದಾಗಿಲ್ಲ.

ಆದಷ್ಟು ಬೇಗ ರಮ್ಯಾ ಅವರನ್ನು ದೊಡ್ಡ ಸ್ಕ್ರೀನ್ ಮೇಲೆ ನೋಡಬೇಕು ಎನ್ನೋದು ಫ್ಯಾನ್ಸ್ ಬಯಕೆ. ಅಂಥವರಿಗೆಲ್ಲ ಕೆಲವೇ ಕೆಲವು ದಿನಗಳ ಹಿಂದೆಯಷ್ಟೇ ಒಂದು ಸಿಹಿಸುದ್ಧಿ​ ಕೇಳಿಬಂದಿತ್ತು. ರಾಜ್ ಬಿ ಶೆಟ್ಟಿ ನಟಿಸಿ, ನಿರ್ದೇಶಿಸಲಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಲ್ಲಿ ರಮ್ಯಾ ಅವರು ನಾಯಕಿಯಾಗಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು. ಆದ್ರೆ ಈಗ ಆ ನಿರ್ಧಾರದಲ್ಲಿ ಬದಲಾವಣೆ ಮಾಡಲಾಗಿದೆ. ರಮ್ಯಾ ಬದಲು ಹೊಸ ನಟಿ ಸಿರಿ ರವಿಕುಮಾರ್​ ಅವರನ್ನು ಆಯ್ಕೆ ಮಾಡಿದ್ದಾರೆ. ಈ ಸುದ್ದಿ ಕೇಳಿ ರಮ್ಯಾ ಅಭಿಮಾನಿಗಳಿಗೆ ಬೇಸರ ಆಗಿದೆ.

WhatsApp Group Join Now
Telegram Group Join Now

ಮೋಹಕ ತಾರೆ ರಮ್ಯಾ ಅವರು ನಿರ್ಮಾಪಕಿ ಆಗುವ ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳಿರುವುದು ಸಂತೋಷದ ವಿಚಾರ. ‘ಆಪಲ್ ಬಾಕ್ಸ್ ಸ್ಟುಡಿಯೋಸ್’ (Apple Box Studieos) ಬ್ಯಾನರ್ ಮೂಲಕ ರಮ್ಯಾ ಅವರು ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾವನ್ನು ಅನೌನ್ಸ್ ಮಾಡಿದಾಗ ಅವರ ಅಭಿಮಾನಿಗಳಿಗೆ ಆದ ಸಂತಸ ಅಷ್ಟಿಷ್ಟಲ್ಲ. ರಮ್ಯಾ ನಾಯಕಿಯಾಗಿ ನಟಿಸುತ್ತಾರೆ ಅಂದಾಗ ಆ ಖುಷಿ ಡಬಲ್ ಆಗಿತ್ತು. ಆದ್ರೆ ಕಾರಣಾಂತರಗಳಿಂದ ರಮ್ಯಾ ಈ ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂಬ ಸುದ್ದಿ ಅಧಿಕೃತ ಆಗಿದೆ. ‘ಆಪಲ್ ಬಾಕ್ಸ್ ಸ್ಟುಡಿಯೋಸ್’ (Apple Box Studieos) ಮೂಲಕ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ.

ಹೀರೋಯಿನ್ (ರಮ್ಯಾ) ಬದಲಾಗಿದ್ದಕ್ಕೆ ಕಾರಣ ಏನು?

WhatsApp Group Join Now
Telegram Group Join Now

‘ಆಪಲ್ ಬಾಕ್ಸ್ ಸ್ಟುಡಿಯೋಸ್ ಮತ್ತು ಲೈಟರ್ ಬುದ್ಧ ಫಿಲ್ಮ್ಸ್’ ಸಹಯೋಗದೊಂದಿಗೆ ಹೊರ ಬರುತ್ತಿರುವ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದಲ್ಲಿ ಹೊಸ ನಟಿ ‘ಸಿರಿ ರವಿಕುಮಾರ್’ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕೆ ಹೊಸ ಮುಖ ಪರಿಚಯ ಮಾಡಬೇಕೆಂದು ನಿರ್ಮಾಪಕಿ ಮೋಹಕ ತಾರೆ ರಮ್ಯಾ ಅವರೇ ಅಪೇಕ್ಷೆ ಪಟ್ಟರು. ಉದಯೋನ್ಮುಖ ಪ್ರತಿಭೆಗಳನ್ನು ಬೆಳಕಿಗೆ ತರುವ ಮುಖ್ಯ ಗುರಿಯನ್ನು ಇಟ್ಟುಕೊಂಡು ಪ್ರಾರಂಭಿಸಿದಂತಹ ಸಂಸ್ಥೆ ಆಪಲ್ ಬಾಕ್ಸ್ ಸ್ಟುಡಿಯೋಸ್ (Apple Box Studieos). ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಒಂದು ಅಮೋಘವಾದ ಸಿನಿಮಾವಾಗಿ ನಿಮ್ಮ ಮುಂದೆ ಪ್ರಸ್ತುತ ಪಡಿಸಲು ನಾವೆಲ್ಲಾ ಕಾತುರರಾಗಿದ್ದೇವೆ’ ಎಂದು ತಿಳಿಸಲಾಗಿದೆ.

ಶೀಘ್ರದಲ್ಲೇ ಕಮ್ ಬ್ಯಾಕ್ ಮಾಡ್ತಾರೆ ಮೋಹಕ ತಾರೆ ರಮ್ಯಾ:

WhatsApp Group Join Now
Telegram Group Join Now

‘ನಮ್ಮ ಚಿತ್ರತಂಡ ಸೇರುತ್ತಿರುವ ಎಲ್ಲಾ ನಟರು ಮತ್ತು ತಂತ್ರಜ್ಞರಿಗೂ ಹೃದಯಪೂರ್ವಕ ಸ್ವಾಗತವನ್ನು ಕೋರುತ್ತೇವೆ. ವಿಶೇಷ ಸೂಚನೆ : ರಮ್ಯಾ ಅವರು ಇನ್ನು ಕೆಲವೇ ದಿನಗಳಲ್ಲಿ ಮತ್ತೆ ಬೆಳ್ಳಿಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ನೀವೆಲ್ಲರೂ ಕಾಯುತ್ತಿದ್ದೀರೆಂದು ನಮಗೆ ಅರಿವಿದೆ’ ಎಂದು ‘ಆಪಲ್​ ಬಾಕ್ಸ್​ ಸ್ಟುಡಿಯೋಸ್’ (Apple Box Studieos) ಸಂಸ್ಥೆಯ ಸೋಶಿಯಲ್​ ಮೀಡಿಯಾ ಖಾತೆ ಮೂಲಕ ಈ ಮಾಹಿತಿ ನೀಡಲಾಗಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ಪೇಜ್ ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

Leave a Reply