ಇದು ಒಂದೇ ಕಾರಣಕ್ಕಾಗಿ ರಚಿತಾರಾಮ್ ಇನ್ನೂ ಚಿತ್ರರಂಗದಲ್ಲಿದ್ದಾರೆ ಎಂದ ದುನಿಯಾ ವಿಜಯ್ – ಕನ್ನಡ ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ರಾ ವಿಜಯ್

ಇತ್ತೀಚಿಗೆ ಡಿಂಪಲ್ ಕ್ವೀನ್ ರಚಿತಾರಾಮ್, ಡಾಲಿ ಧನಂಜಯ್ ಅಭಿನಯದ ‘ಮನ್ಸೂನ್ ರಾಗ’ ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗಿದ್ದು ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಂಡಿತ್ತು. ಸಿನಿಮಾದ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಚಿತ್ರತಂಡ ಅನೇಕ ಇಂಟ್ರಸ್ಟಿಂಗ್ ಸಂಗತಿಗಳನ್ನು ರಿವೀಲ್ ಮಾಡಿದ್ದಾರೆ. ಅಂದ ಹಾಗೆ ದುನಿಯಾ ಖ್ಯಾತಿಯ ವಿಜಯ್ ಈ ಪ್ರೀ ರಿಲೀಸ್ ಈವೆಂಟ್‍‌ಗೆ ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ದುನಿಯಾ ವಿಜಯ್ ಅವರು ರಚಿತಾ ರಾಮ್ ಅವರನ್ನು ಹಾಡಿ ಹೊಗಳಿದ್ದಾರೆ.

ಡಿಂಪಲ್ ಕ್ವೀನ್ ರಚಿತಾರಾಮ್ ಇಷ್ಟು ವರ್ಷ ಚಿತ್ರರಂಗದಲ್ಲಿ ಇದ್ದಾರೆ ಅಂದ್ರೆ ರಚಿತಾ ರಾಮ್ ಎದೆಯಲ್ಲಿ ಮೋಸ ಇಲ್ಲ ಹಾಗಾಗಿ ಎಂದು ಹೇಳಿದ್ದಾರೆ. ದುನಿಯಾ ವಿಜಯ್ ಮತ್ತು ಧನಂಜಯ್ ಇಬ್ಬರೂ ವೇದಿಕೆಯಲ್ಲಿ ಮಾತನಾಡುವಾಗ ರಚಿತಾ ಅವರನ್ನು ಹಾಡಿ ಹೊಗಳಿದರು. ರಚಿತಾ ರಾಮ್ ಎದೆಯಲ್ಲಿ ಮೋಸ ಇಲ್ಲ. ಅದಕ್ಕಾಗಿ ಅವರು ಇನ್ನೂ ಚಿತ್ರರಂಗದಲ್ಲಿದ್ದಾರೆ’ ಅಂತ ಹೇಳಿದರು. ರಚಿತಾರಾಮ್ ಕಣ್ಣುಗಳು ಪಳ ಪಳ ಅಂತ ಹೊಳೀತಾ ಇರುತ್ತೆ‌’ ಎಂದು ಸಹ ಹೇಳಿದ್ದಾರೆ.

WhatsApp Group Join Now
Telegram Group Join Now

ಇನ್ನು ನಟಿ ಸುಹಾಸಿನಿ ಅವರ ಬಗ್ಗೆಯು ದುನಿಯಾ ವಿಜಯ್ ಮಾತನಾಡಿದ್ದಾರೆ. ಸುಹಾಸಿನಿ ಅವರನ್ನು ಹಾಡಿ ಹೊಗಳಿದ್ದಾರೆ. ಭಗವಂತ ಮತ್ತೆ ನನಗೆ ಜನ್ಮ ಕೊಟ್ರೆ ಸುಹಾಸಿನಿ ಮೇಡಂ ಜೊತೆ ವಿಷ್ಣು ಸರ್ ಮಾಡಿದ ಬಂಧನ ಪಾತ್ರ ಮಾಡ್ತೀನಿ. ಸುಹಾಸಿನಿ ಮೇಡಂ ಜೊತೆ ಒಂದ್ ಫೋಟೋ ತಗೊಳ್ಬೇಕು’ ಅಂತ ದುನಿಯಾ‌ ವಿಜಯ್ ಹೇಳಿದರು. ಹಾಗೇ ಇನ್ನು ನಟ ಢಾಲಿ ಧನಂಜಯ್  ಮಾತನಾಡಿ ‘ಮಾನ್ಸೂನ್ ರಾಗ’ ತುಂಬಾ ನೆನಪುಗಳನ್ನ ಕೊಟ್ಟಿದೆ. ರಚಿತಾರಾಮ್ ಅವರ ಜೊತೆ ನಟಿಸಿದ್ದು ತುಂಬಾ ಖುಷಿಯಾಗಿದೆ. ರಚಿತಾರಾಮ್ ಮನೆ ಮುಂದೆ ನಾವೆಲ್ಲಾ ಬೀಟ್ ಹಾಕ್ತಿದ್ವಿ ಅವಾಗ. ಕತ್ರಿ ಗುಪ್ಪೆಯಲ್ಲಿ ರಚಿತಾರಾಮ್ ಇದ್ರು.

ಡಿಂಪಲ್ ಡಿಂಪಲ್‌ ಕಾಣುತ್ತಾ ಅಂತ ರಚಿತಾರಾಮ್ ಮನೆ ಮುಂದೆ ನಾವೆಲ್ಲಾ ಬೀಟ್ ಹಾಕ್ತಿದ್ವಿ’ ಎಂದು ಹೇಳಿದರು. ಇನ್ನು ನಟ ಢಾಲಿ ಧನಂಜಯ್, ಸುಹಾಸಿನಿ ಅವರಿಗಾಗಿ ಹಾಡು ಹಾಡಿದರು. ನಟ ಧನಂಜಯ್ ಅವರ ಕವಿತೆಗೆ ‘ನೂರೊಂದು ನೆನಪು ಎದೆಯಾಳದಿಂದ’ ಹಾಡನ್ನು ಸುಹಾಸಿನಿ ಅವರು ಹಾಡಿದ್ರು. ಧನಂಜಯ್ ಮತ್ತು ದುನಿಯಾ ವಿಜಯ್ ಅವರ ಹೊಗಳಿಕೆಗೆ ನಟಿ ರಚಿತಾರಾಮ್ ಎದ್ದು ಕೈ ಮುಗಿದರು. ಇನ್ನು ‘ಮಾನ್ಸೂನ್ ರಾಗ’ ಮೂಲಕ ನಟಿ ಸುಹಾಸಿನಿ ಮತ್ತೆ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕೂಡ ಕಂಡಿತ್ತು.

WhatsApp Group Join Now
Telegram Group Join Now

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ಜಸ್ಟ್ ಕನ್ನಡ (Just Kannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

Leave a Reply