ಕಿಂಗ್ ‘ಕಾಂತಾರ’.. ಬಾಲಿವುಡ್ ನಲ್ಲಿ KGF-1 ಗಿಂತ ಮುಂದೆ.. ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು ಗೊತ್ತಾ.?

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಬ್ಲಾಕ್ ಬಸ್ಟರ್ ಚಿತ್ರ ‘ಕಾಂತಾರ’ ಬಾಕ್ಸಾಫೀಸ್ ನಾಗಾಲೋಟ ಸದ್ಯಕ್ಕೆ ನಿಲ್ಲೋ ಹಾಗೆ ಕಾಣ್ತಿಲ್ಲ. ‘ಕಾಂತಾರ’ ದ ರೆಕಾರ್ಡ್ಗಳನ್ನ ಹೇಳ್ತಾ ಹೋದ್ರೆ ದಿನಕ್ಕೊಂದು, ಗಂಟೆಗೊಂದು ಹೇಳಬಹುದು. ಕನ್ನಡದ ಚಿತ್ರವೊಂದು ಫಸ್ಟ್ ಟೈಮ್ ಬಾಲಿವುಡ್ ಅಂಗಳದಲ್ಲಿ ಟ್ರೇಡ್ಮಾರ್ಕ್ ಸೃಷ್ಟಿಸಿದ ದಾಖಲೆ. ಇವಾಗ ಆ ದಾಖಲೆನಾ ಕೂಡ ‘ಕಾಂತಾರ’ ಅಳಿಸಿ ಹಾಕಿದೆ.

ಭಾರತೀಯ ಚಿತ್ರರಂಗದಲ್ಲಿ ಎಲ್ಲೇ ನೋಡಿದರೂ ಕಾಂತಾರದ್ದೇ ಹವಾ. ‘ಕಾಂತಾರ’ದ ಮುಂದೆ ದೊಡ್ಡ ದೊಡ್ಡ ಸ್ಟಾರ್ಗಳ ಸಿನಿಮಾಗಳೇ ಮಕಾಡೆ ಮಲಗಿದೆ.

WhatsApp Group Join Now
Telegram Group Join Now

ದಕ್ಷಿಣದಿಂದ ಉತ್ತರದವರೆಗೂ ಯಾವುದೇ ರಾಜ್ಯ ನೋಡಿದರೂ ‘ಕಾಂತಾರ’ ಚಿತ್ರದ ದಾಖಲೆಗಳೇ ಮಾತಾಡ್ತಿದೆ. ಜಗತ್ತೇ ಮೆಚ್ಚುಗೆ ಪಡೆದುಕೊಂಡಿರೋ ‘ಕಾಂತಾರ’ ಸಿನಿಮಾ ಬಾಕ್ಸ್ ಆಫೀಸ್ ಭೇಟೆ ಐದನೇ ವಾರವೂ ಮುಂದುವರಿದಿದೆ. ವಿಶೇಷವಾಗಿ ಹಿಂದಿ, ತೆಲುಗು ರಾಜ್ಯಗಳಲ್ಲಿ ರಿಷಬ್ ಶೆಟ್ಟಿಯ ಸಿನಿಮಾ ಹೆಚ್ಚು ಮೋಡಿ ಮಾಡ್ತಿದ್ದು, ಗಳಿಕೆಯಲ್ಲಿ ಈ ಹಿಂದಿನ ಸಿನಿಮಾಗಳ ರೆಕಾರ್ಡ್ ಬ್ರೇಕ್ ಮಾಡಿ ಮುನ್ನುಗ್ಗುತಿದೆ.

300 ಕೋಟಿ ಕ್ಲಬ್ ಕಡೆ ಹೆಜ್ಜೆ ಹಾಕಿದ ‘ಕಾಂತಾರ’ ಸಿನಿಮಾ?

WhatsApp Group Join Now
Telegram Group Join Now

‘ಕಾಂತಾರ’ ಚಿತ್ರ 300 ಕೋಟಿ ಕ್ಲಬ್ ಸೇರಿತಾ? ಹೀಗೊಂದು ಪ್ರಶ್ನೆ ಇವಾಗ ಪ್ರತಿಯೊಬ್ಬ ಸಿನಿಮಾ ಪ್ರೇಮಿಯನ್ನ ಕಾಡ್ತಿದೆ. ಸುಮಾರು 15 ಕೋಟಿ ವೆಚ್ಚದಲ್ಲಿ ತಯಾರಾಗಿರೋ ‘ಕಾಂತಾರ’ ಚಿತ್ರ ಇದುವರೆಗೂ ಸುಮಾರು 270 ರಿಂದ 300 ಕೋಟಿವರೆಗೂ ವರ್ಲ್ಡ್ವೈಡ್ ಬ್ಯುಸಿನೆಸ್ ಮಾಡಿದೆಯಂತೆ. ಈ ಮೂಲಕ KGF-2 ಆದ್ಮೇಲೆ ಕನ್ನಡದಿಂದ 300 ಕೋಟಿ ಕ್ಲಬ್ ಸೇರ್ತಿರೋ ಎರಡನೇ ಚಿತ್ರ ಇದಾಗ್ತಿದೆ.

ಬಾಲಿವುಡ್ ನಲ್ಲಿ 50 ಕೋಟಿ ಕ್ಲಬ್ ಸೇರಿದ ‘ಕಾಂತಾರ’!
KGF-1 ಹಿಂದಿಕ್ಕಿದ ರಿಷಬ್ ಶೆಟ್ಟಿ.

WhatsApp Group Join Now
Telegram Group Join Now

‘ಕಾಂತಾರ’ ಸಿನಿಮಾಗೆ ಹಿಂದಿಯಲ್ಲಿ ಭರ್ಜರಿ ಓಪನಿಂಗ್ ಸಿಕ್ಕಿತ್ತು. ಕನ್ನಡದಲ್ಲಿ ಬಿಡುಗಡೆಯಾದ ಎರಡು ವಾರದ ಬಳಿಕ ಹಿಂದಿ ಭಾಷೆಯಲ್ಲಿ ‘ಕಾಂತಾರ’ ರಿಲೀಸ್ ಆದರೂ, ಬಾಕ್ಸ್ ಆಫೀಸ್ನಲ್ಲಿ ಮಾತ್ರ ಭರ್ಜರಿ ಬೇಟೆ ಮಾಡಿದೆ. ಸದ್ಯ ‘ಕಾಂತಾರ’ ಚಿತ್ರ ಬಾಲಿವುಡ್ ಮಾರುಕಟ್ಟೆಯಲ್ಲಿ 19 ದಿನಕ್ಕೆ 48 ಕೋಟಿ ಬಾಚಿಕೊಂಡಿದ್ದು, KGF-1 ಹೆಸರಿನಲ್ಲಿರೋ ಸಾರ್ವಕಾಲಿಕ ದಾಖಲೆಯೊಂದನ್ನ ಅಳಿಸಿಹಾಕಿದೆ. ವರ್ಲ್ಡ್ವೈಡ್ ಬಾಕ್ಸಾಫೀಸ್ನಲ್ಲಿ 250 ಕೋಟಿ ಗಳಿಸಿರೋ KGF-1 ಹಿಂದಿಯಲ್ಲಿ ಮಾತ್ರ 50 ಕೋಟಿ ಕಲೆಕ್ಷನ್ ಮಾಡಿ, ಕನ್ನಡದ ಚಿತ್ರವೊಂದು ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ಫಸ್ಟ್ ಟೈಂ 50 ಕೋಟಿ ಗಳಿಸಿದ ದಾಖಲೆ ತನ್ನ ಹೆಸರಿಗೆ ಬರೆದುಕೊಂಡಿತ್ತು. ಆದರೀಗ KGFನ ರೆಕಾರ್ಡ್ ಬ್ರೇಕ್ ಮಾಡಿರುವ ‘ಕಾಂತಾರ’ ಸಿನಿಮಾ ದಾಖಲೆಯ ಪುಟದಲ್ಲಿ ಹೊಸದಾಗಿ ತನ್ನ ಹೆಸರನ್ನು ನೊಂದಾಯಿಸಿಕೊಂಡಿದೆ.

ವಿಕ್ರಮ್, ಪುಷ್ಪ ದಾಖಲೆ ಮೇಲೆ ‘ಕಾಂತಾರ’ ಕಣ್ಣು.!

ಬರೀ ಕರ್ನಾಟಕದಲ್ಲೇ ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರೋ ‘ಕಾಂತಾರ’ ತಿಂಗಳ ಮುಕ್ತಾಯಕ್ಕೆ ಎಲ್ಲಾ ಭಾಷೆಯಲ್ಲೂ ಸೇರಿ 300 ಕೋಟಿ ಹತ್ರಾ ಗಳಿಸಿದೆ. ಹಾಗೆ ನೋಡಿದ್ರೆ, ಶೀಘ್ರದಲ್ಲೇ ‘ಪುಷ್ಪ’ ದಾಖಲೆಯನ್ನ ಉಡೀಸ್ ಮಾಡೋ ಎಲ್ಲಾ ಸಾಧ್ಯತೆ ಇದೆ. ಪ್ಯಾನ್ ಇಂಡಿಯಾ ರಿಲೀಸ್ ಆಗಿದ್ದ ‘ಪುಷ್ಪ’ 350 ಕೋಟಿ ಬ್ಯುಸಿನೆಸ್ ಮಾಡಿ, ಹಿಂದಿ ಭಾಷೆ ಒಂದರಲ್ಲೇ 100 ಕೋಟಿ ಬಾಚಿಕೊಂಡಿತ್ತು. ಇದೀಗ, ಈ ದಾಖಲೆಯನ್ನ ‘ಕಾಂತಾರ’ ಸಿನಿಮಾ ಮುರಿಯೋ ನಿರೀಕ್ಷೆ ಇದೆ. ‘ಪುಷ್ಪ’ ಸಿನಿಮಾ ಬಳಿಕ ಅಷ್ಟೇ ಸದ್ದು ಮಾಡಿದ ಸಿನಿಮಾ ‘ವಿಕ್ರಮ್’. ಪ್ಯಾನ್ ಇಂಡಿಯಾ ಭಾಷೆಗಳಲ್ಲಿ ರಿಲೀಸ್ ಆಗದಿದ್ದರೂ ಪ್ಯಾನ್ ಇಂಡಿಯಾ ಸಿನಿಮಾದಷ್ಟೇ ಅಬ್ಬರ ಮಾಡಿದ್ದ ‘ವಿಕ್ರಂ’ 350 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಭಾರೀ ಸಂಚಲನ ಸೃಷ್ಟಿಸಿತ್ತು. ಈ ದಾಖಲೆಯೂ ‘ಕಾಂತಾರ’ಕ್ಕೆ ಕಷ್ಟವೇನು ಅಲ್ಲ ಎನ್ನಲಾಗುತ್ತಿದೆ. ಒಟ್ಟಾರೆ ‘ಕಾಂತಾರ’ ಚಿತ್ರದ ಗೆಲುವಿನ ಮೆರವಣಿಗೆ ವಿಶ್ವಾದ್ಯಂತ ಸಾಗುತ್ತಿದ್ದು, ಮತ್ತಷ್ಟು ಮಗದಷ್ಟು ದಾಖಲೆಗಳನ್ನ ‘ಕಾಂತಾರ’ ತನ್ನ ಹೆಸರಿಗೆ ಬರೆದುಕೊಳ್ಳೋದಂತೂ ಪಕ್ಕಾ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ’ (JustKannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

Leave a Reply