ಜಸ್ಟ್ ಕನ್ನಡ : ಸ್ವಾಮಿ ಕೊರಗಜ್ಜನಲ್ಲಿ ಸಂಕಷ್ಟ ನಿವಾರಣೆ ಮಾಡುವಂತೆ ಪ್ರಾರ್ಥನೆ ಸಲ್ಲಿಸುತ್ತಿರುವವರ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಿದೆ. ಕಳೆದ ತಿಂಗಳಷ್ಟೇ ಖ್ಯಾತ ನಟ ಶಿವರಾಜ್ ಕುಮಾರ್ – ಗೀತಾ ದಂಪತಿಗಳು ಕುಟುಂಬ ಸಮೇತರಾಗಿ ಸ್ವಾಮಿ ಕೊರಗಜ್ಜನ ಆದಿ ಸ್ಥಳ ಕುತ್ತಾರು ಪದವಿಗೆ ಭೇಟಿ ನೀಡಿ ಕೆಲಕಾಲ ಪ್ರಾರ್ಥನೆ ಸಲ್ಲಿಸಿದ್ದರು. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿದ್ದ ಪ್ರೇಮಾ ಕೂಡ ಇದೀಗ ಕಾಪುವಿನಲ್ಲಿರುವ ಸ್ವಾಮಿ ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿ ಪ್ರಾರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ :- ಈ ರೀತಿ ಮಾಡಿದ್ರೆ ನಿಮ್ಮ ಮೂಳೆಗಳ ಆರೋಗ್ಯವು 100% ಹೆಚ್ಚುವುದು ಖಂಡಿತ
ನಿನ್ನೆ ಬೆಳಿಗ್ಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಉಡುಪಿಗೆ ಭೇಟಿ ನೀಡಿದ್ದ ಪ್ರೇಮಾ ಅವರು, ಕಾಪುವಿನ ಕೊರಗಜ್ಜನ ಸನ್ನಿಧಿಗೆ ಬಂದಿದ್ದಾರೆ. ಸ್ವಾಮಿ ಕೊರಗಜ್ಜನಲ್ಲಿ ಪ್ರಾರ್ಥಿಸುತ್ತಾ, ಮದುವೆಯಾಗಲು ವರನನ್ನ ಈಗಾಗಲೇ ನೋಡಿದ್ದು, ಅದೇ ವರನೊಂದಿಗೆ ಮದುವೆ ಮಾಡಿಸುವಂತೆ ಕೊರಗಜ್ಜನಲ್ಲಿ ನಟಿ ಪ್ರೇಮಾ ಕೇಳಿಕೊಂಡಿದ್ದಾರೆ.
ಸ್ವಾಮಿ ಕೊರಗಜ್ಜನಿಗೆ ಪೂಜೆ ಸಲ್ಲಿಸಿ, ಆದಷ್ಟು ಬೇಗ ಕಂಕಣ ಭಾಗ್ಯ ಕರುಣಿಸುವಂತೆ ನಟಿ ಪ್ರೇಮಾ ಪ್ರಾರ್ಥಿಸಿಕೊಂಡರು. ನಂತರ ಅಯ್ಯಪ್ಪ ದೇವಸ್ಥಾನ ಹಾಗೂ ಉಡುಪಿಯಲ್ಲಿರುವ ಇತರೆ ದೈವಸ್ಥಾನಗಳಿಗೆ ಭೇಟಿ ನೀಡಿದ್ದಾರೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ’ (JustKannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.
- Fixed Deposits : ಹೆಚ್ಚು ಬಡ್ದಿ ದುಡ್ಡು ಕೊಡುವ ಪ್ರಮುಖ 7 ಬ್ಯಾಂಕ್ಗಳು, ಎಷ್ಟಿದೆ ಬಡ್ಡಿ ದರ.? ಸಂಪೂರ್ಣ ಮಾಹಿತಿ
- BSNL Freedom Plan : ಕೇವಲ 1 ರೂಪಾಯಿಗೆ 60GB ಡೇಟಾ ಮತ್ತು ಅನ್ಲಿಮಿಟೆಡ್ ಕರೆ ನೀಡುತ್ತಿರುವ ಬಿಎಸ್ಎನ್ಎಲ್!
- ಕೊಪ್ಪಳದಲ್ಲಿ ಅನ್ಯಧರ್ಮೀಯಳನ್ನು ಪ್ರೀತ್ಸಿದ್ದಕ್ಕೆ ಅನಾಹುತ – ಮಸೀದಿ ಎದುರೇ ಕೊಚ್ಚಿ ಕೊ*ಲೆ!
- Pension Scheme : ಪ್ರತಿ ತಿಂಗಳು ನಿಮಗೆ ₹5,000/- ರೂಪಾಯಿ ಪೆನ್ಷನ್ ಹಣ ಬೇಕಾ.? ಕೂಡಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿ
- PM KUSUM Scheme : 80% ಸಬ್ಸಿಡಿ ಸೋಲಾರ್ ಪಂಪ್ ಸೆಟ್ ಗೆ ಅರ್ಜಿ ಸಲ್ಲಿಸಿ – ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ. ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..