ಮನೆಗಳನ್ನು ಬಾಡಿಗೆಗೆ ಕೊಟ್ಟ ಓನರ್ ಬೆಡ್ ರೂಮ್ ಗಳಲ್ಲಿ ಯಾರಿಗೂ ಗೊತ್ತಿಲ್ಲದಂತೆ ಸೀಕ್ರೆಟ್ ಕ್ಯಾಮೆರಾ ಫಿಕ್ಸ್ ಮಾಡಿ, ಮಾಡಿದ್ದೇನು. ?

ಆಂಧ್ರಪ್ರದೇಶದ ನೆಲ್ಲೂರು ನಗರದಲ್ಲಿ ವಾಸಿಸುವ ವಿಜಯಾನಂದ್ ಅನ್ನೋ ವ್ಯಕ್ತಿ ಮೂರು ಅಂತಸ್ತಿನ ಮನೆಯನ್ನು ಕಟ್ಟಿ, ಅದರಲ್ಲಿ ಮೂರು ಮನೆಗಳನ್ನು ಮಾಡಿ, ಬಾಡಿಗೆಗೆ ಕೊಟ್ಟ. ಆದ್ರೆ, ಇಲ್ಲಿ ಒಂದು ನೀಚ ಕೆಲಸವನ್ನು ಮಾಡಿದ್ದ.

ಬಾಡಿಗೆಗೆ ಬಂದವರಿಗೆ ಗೊತ್ತಿಲ್ಲದಂತೆ ಮೂರು ಮನೆಗಳಲ್ಲೂ ಬೆಡ್ ರೂಮ್ ನಲ್ಲಿ ಸೀಕ್ರೆಟ್ CCTV ಕ್ಯಾಮೆರಾ ಫಿಕ್ಸ್ ಮಾಡಿದ್ದ. ಆ ಮನೆಗಳಿಗೆ ಬಾಡಿಗೆಗೆ ಬರುವ ದಂಪತಿಗಳ ಶೃಂಗಾರಗಳನ್ನು ರೆಕಾರ್ಡ್ ಮಾಡಿ, ಆ ವೀಡಿಯೋಗಳನ್ನು ನೋಡಿ ಸಂತೋಷ ಪಡುತ್ತಿದ್ದ.

WhatsApp Group Join Now
Telegram Group Join Now

ಒಂದು ದಿನ ಬಾಡಿಗೆ ಮನೆಯಲ್ಲಿರುವ ವ್ಯಕ್ತಿ, ಬಾಡಿಗೆ ಹಣ ಕಟ್ಟುವ ಸಲುವಾಗಿ ಓನರ್ ಮನೆಗೆ ಹೋದ, ಮನೆಯ ಬಾಗಿಲು ಓಪನ್ ಇದ್ದ ಕಾರಣ ಸೀದಾ ಮನೆಯೊಳಗೇ ಹೋದಾಗ ಶಾಕ್, ಓನರ್ ಲ್ಯಾಪ್ ಟಾಪ್ ನಲ್ಲಿ ಬಾಡಿಗೆ ಮನೆಯಲ್ಲಿರುವವರ ಬೆಡ್ ರೂಮ್ ದೃಶ್ಯಗಳು ಕಾಣಿಸುತ್ತಿದ್ದವು.

ಇದನ್ನು ನೋಡಿ ಬೆಚ್ಚಿ ಬಿದ್ದ ಆ ವ್ಯಕ್ತಿ, ವಿಷಯವನ್ನು ತನ್ನಂತೆ ಬಾಡಿಗೆಗೆ ಇರುವ ಇತರರಿಗೆ ತಿಳಿಸಿದ, ಎಲ್ಲರು ಸೇರಿ ಪೊಲೀಸ್ ಕಂಪ್ಲೇಂಟ್ ಕೊಟ್ಟರು, ಪೋಲಿಸ್ ಬಂದು ಎಲ್ಲವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ 3 ಸೇಕ್ರೆಟ್ CCTV ಕ್ಯಾಮೆರಾ ಸಿಕ್ಕಿತು.

WhatsApp Group Join Now
Telegram Group Join Now

ಆತನನ್ನು ಅರೆಸ್ಟ್ ಮಡಿದ ಪೊಲೀಸರು, ಆತನಿಂದ ಲ್ಯಾಪ್ ಟಾಪ್, ಹಾರ್ಡ್ ಡಿಸ್ಕ್ ಎಲ್ಲವನ್ನು ಸ್ವಾಧೀನ ಪಡಿಸಿಕೊಂಡರು. ಸುಮಾರು 6 ತಿಂಗಳಿನಿಂದ ಓನರ್ ಹೀಗೆ ಮಾಡ್ತಿದ್ದು, ತನ್ನ ಸ್ನೇಹಿತರಿಗೂ ವೀಡಿಯೋಗಳನ್ನೂ ತೋರಿಸಿದ್ದ ಎಂದು ಪೊಲೀಸರು ಮಾಹಿತಿ ಕೊಟ್ಟರು.

Leave a Reply