Gruhalakshmi Scheme : ಭಾರತೀಯ ಅಂಚೆ ಪೇಮೆಂಟ್ ಬ್ಯಾಂಕ್ ಸಿಬ್ಬಂದಿ ಬಸವಾಪಟ್ಟಣಕ್ಕೆ ಭೇಟಿ ನೀಡಿ, ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಹಣ ಇದುವರೆಗೂ ಸಿಗದ ಅರ್ಹ ಫಲಾನುಭವಿ ಮಹಿಳೆಯರ ಖಾತೆಗಳನ್ನ ಪರಿಶೀಲಿಸಿ, ಹೊಸದಾಗಿ ಅಂಚೆ ಕಚೇರಿ ಖಾತೆಗಳನ್ನ ಮಾಡಿಕೊಟ್ಟರು.
ಹಾಗು ಈಗಾಗಲೇ ಅಂಚೆ ಕಚೇರಿ ಖಾತೆ ಹೊಂದಿದ್ದೂ, ಹಣ ಸಿಗದವರ ಖಾತೆಗಳಲ್ಲಿರುವ ಸಮಸ್ಯೆಗಳನ್ನ ಪರಿಶೀಲಿಸಿ, ಅದನ್ನ ಸರಿಪಡಿಸಿ ಗೃಹಲಕ್ಷ್ಮಿ ಹಣವು ಮುಂದಿನ ತಿಂಗಳಿನಿಂದ ಅರ್ಹ ಮಹಿಳೆಯರ ಖಾತೆಗೆ ವರ್ಗಾವಣೆಯಾಗುವಂತೆ ಸರಿಪಡಿಸಿದರು.
ಇದನ್ನೂ ಕೂಡ ಓದಿ : Drought Relief : ಬರಪೀಡಿತ ಜಿಲ್ಲೆಗಳ ರೈತರಿಗೆ ಸಿಎಂ ಸಿದ್ದರಾಮಯ್ಯ ಗುಡ್ ನ್ಯೂಸ್ – ಬರಪರಿಹಾರ 2ನೇ ಕಂತಿನ ಹಣ ಬಿಡುಗಡೆ
ಭಾರತೀಯ ಅಂಚೆ ಪೇಮೆಂಟ್ ಬ್ಯಾಂಕ್ ಸಿಬ್ಬಂದಿ ಜಿಲ್ಲೆಯಲ್ಲಿ ಇದುವರೆಗೂ ಸುಮಾರು 25 ಕ್ಕೂ ಅಧಿಕ ಗ್ರಾಮಗಳಿಗೆ ಭೇಟಿ ನೀಡಿ, ಗೃಹಲಕ್ಷ್ಮಿ ಯೋಜನೆಯ ಅರ್ಹ ಫಲಾನುಭವಿ ಮಹಿಳೆಯರ ಖಾತೆಗಳನ್ನ ಪರಿಶೀಲಿಸಿ, ಸಮಸ್ಯೆಗಳನ್ನ ಸರಿಪಡಿಸಲಾಗುತ್ತಿದೆ ಎಂದು ಅಂಚೆ ಇಲಾಖೆಯ ಅಧಿಕಾರಿ ಮನೋಜ್ ಕುಮಾರ್ ಮಾಹಿತಿ ನೀಡಿದ್ದಾರೆ.
ಒಂದು ಗ್ರಾಮದಲ್ಲಿ ಇದುವರೆಗೂ ಗೃಹಲಕ್ಷ್ಮಿ ಯೋಜನೆಯ ಹಣ ಒಮ್ಮೆಯೂ ಸಿಗದ 10ಕ್ಕಿಂತ ಹೆಚ್ಚು ಅರ್ಹ ಫಲಾನುಭವಿ ಮಹಿಳೆಯರಿದ್ದರೆ, ಕೂಡಲೇ 9743077935 ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದಲ್ಲಿ, ಭಾರತೀಯ ಅಂಚೆ ಪೇಮೆಂಟ್ ಬ್ಯಾಂಕ್ ಸಿಬ್ಬಂದಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿ ಸರಿಪಡಿಸಲಾಗುವುದು ಎಂದು ಹೇಳಿದರು.
ಇದನ್ನೂ ಕೂಡ ಓದಿ : Drought Relief : ಬರಪೀಡಿತ ಜಿಲ್ಲೆಗಳ ರೈತರಿಗೆ ಸಿಎಂ ಸಿದ್ದರಾಮಯ್ಯ ಗುಡ್ ನ್ಯೂಸ್ – ಬರಪರಿಹಾರ 2ನೇ ಕಂತಿನ ಹಣ ಬಿಡುಗಡೆ :
ಇನ್ನು ಚೆನ್ನಗಿರಿ ತಾಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ 80,000 ದಷ್ಟು ಮಹಿಳೆಯರು ಈ ಯೋಜನೆಯಲ್ಲಿ ಸೇರ್ಪಡೆಗೊಳ್ಳುವ ನಿರೀಕ್ಷೆ ಇತ್ತು, ಆದರೆ ಮೊದಲ ಹಂತದಲ್ಲಿ 72,000 ಅರ್ಹ ಮಹಿಳೆಯರು ಹಾಗು ಎರಡನೇ ಹಂತದಲ್ಲಿ 3,000 ಮಹಿಳೆಯರು ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ತಾಂತ್ರಿಕ ಸಮಸ್ಯೆಯಿಂದ ಗೃಹಲಕ್ಷ್ಮಿ ಯೋಜನೆಯ ಹಣ ಇದುವರೆಗೂ ಬಾರದ ಮಹಿಳೆಯರ ಖಾತೆಗಳನ್ನ ಪರಿಶೀಲಿಸಿ, ಅಂಚೆ ಇಲಾಖೆಯಲ್ಲಿ ಹೊಸ ಖಾತೆ ತೆರೆದು ಯೋಜನೆಯ ಹಣ ಸಿಗುವಂತೆ ಮಾಡಲಾಗುತ್ತಿದೆ ಎಂದು ಇಲಾಖೆಯ ಎಸ್.ಟಿ ಪ್ರವೀಣ್ ಮಾಹಿತಿ ನೀಡಿದ್ದಾರೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..