‘ಗಂಧದ ಗುಡಿ’ ಚಿತ್ರದ ಟಿಕೆಟ್ ಬೆಲೆ ಇಳಿಸಿದ ಅಶ್ವಿನಿ ಮೇಡಂ – ಅಭಿಮಾನಿಗಳು ಫುಲ್ ಖುಷ್

ಅಕ್ಟೋಬರ್ 28 ರಂದು ಬಿಡುಗಡೆಯಾದ ಅಪ್ಪು ಅಭಿನಯದ ‘ಗಂಧದ ಗುಡಿ’ ಚಿತ್ರ ರಾಜ್ಯಾದ್ಯಂತ ಅದ್ಭುತವಾಗಿ ರೆಸ್ಪಾನ್ಸ್ ಪಡೆದುಕೊಂಡಿದೆ. ಅಪ್ಪುರನ್ನು ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ.

ಅಪ್ಪು ಅವರ ನಗು, ಮಾತು ಕೇಳಿ ಅಪ್ಪು(ಪುನೀತ್ ರಾಜ್ ಕುಮಾರ್) ನಮ್ಮ ಜೊತೆ ನಿಜವಾಗಿಯೂ ಇರಬೇಕಿತ್ತು ಎಂದು ಮತ್ತೆ ವಿಧಿಯನ್ನು ಶಪಿಸಿದ್ದಾರೆ. ಅರಣ್ಯ ಸಂಪತ್ತನ್ನು ನೋಡಿ ಅಭಿಮಾನಿಗಳು ವಾವ್, ಈ ಜಾಗ ಇಷ್ಟು ಅದ್ಭುತವಾಗಿದೆಯಾ ಎನಿಸಿದೆ. ಅಷ್ಟು ಬ್ಯೂಟಿಫುಲ್ ಜಗತ್ತನ್ನು ‘ಗಂಧದ ಗುಡಿ’ ಸಿನಿಮಾದಲ್ಲಿ ತೋರಿಸಲಾಗಿದೆ.

ಇನ್ನು ಕೂಡ ಹಲವಾರು ಜನ ‘ಗಂಧದ ಗುಡಿ’ ಚಿತ್ರ ನೋಡಿಲ್ಲ. ಒಂದು ಇಡೀ ಫ್ಯಾಮಿಲಿ ಕರೆದುಕೊಂಡು ಸಿನಿಮಾಗೆ ಹೋಗುವುದಕ್ಕೆ ದುಬಾರಿ ಅನಿಸಿರಬಹುದು. ಹಾಗೇ ಇನ್ನೂ ಕೆಲವರಿಗೆ ಸಮಯದ ತೊಂದರೆ ಇರಬಹುದು. ಆದರೆ ಇಂದಿನಿಂದ ಗುರುವಾರದವರೆಗೆ ‘ಗಂಧದ ಗುಡಿ’ ಸಿನಿಮಾ ನೋಡುತ್ತೀವಿ ಅನ್ನುವವರಿಗೆ ದೊಡ್ಮನೆಯಿಂದ ಭರ್ಜರಿ ಗಿಫ್ಟ್ ವೊಂದು ಸಿಕ್ಕಿದೆ.

ನಮ್ಮ ಅರಣ್ಯ ಸಂಪತ್ತನ್ನು ಉಳಿಸಿ, ಬೆಳೆಸುವಂತಹ ಉತ್ತಮ ವಿಚಾರವನ್ನು ಹೊಂದಿರುವ ‘ಗಂಧದ ಗುಡಿ’ ಚಿತ್ರವನ್ನು ಮಕ್ಕಳೆಲ್ಲಾ ನೋಡಲೇಬೇಕು ಅನ್ನೋದು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಆಸೆಯಾಗಿದೆ. ಹಾಗಾಗಿ ಟಿಕೆಟ್ ಬೆಲೆಯನ್ನು ಕಡಿಮೆ ಮಾಡಲಾಗಿದೆ.

ಇದರ ಬಗ್ಗೆ ತಮ್ಮ ಪಿಆರ್ ಕೆ ಅಧೀಕೃತ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿಯನ್ನ ಹಂಚಿಕೊಂಡಿರುವ ಅಶ್ವಿನಿ ಮೇಡಂ, ನಾನು ಮತ್ತು ಸಿನಿಮಾತಂಡ ಎಲ್ಲರೊಂದಿಗೆ ಚರ್ಚಿಸಿ, ಪ್ರದರ್ಶಕರ ಹಾಗೂ ವಿತರಕರ ಸಹಕಾರದೊಂದಿಗೆ ನಮ್ಮ ಸಿನಿಮಾ ಅಪ್ಪು ಅಭಿನಯದ ‘ಗಂಧದ ಗುಡಿ’ಯನ್ನು 07-11-2022 ರಿಂದ 10-11-2022 ರವರೆಗೂ ಸಿಂಗಲ್ ಸ್ಕ್ರೀನ್ಗಳಲ್ಲಿ(Single screen) 56/- ರೂಪಾಯಿ ಹಾಗೇ ಮಲ್ಟಿಪ್ಲೆಕ್ಸ್ನಲ್ಲಿ 112/- ರೂಪಾಯಿಗಳಿಗೆ ರಾಜ್ಯಾದ್ಯಂತ ದಿನದ ಎಲ್ಲಾ ಆಟಗಳು ಪ್ರದರ್ಶನ ಮಾಡಬೇಕೆಂದು ನಾವೆಲ್ಲಾ ಸೇರಿ ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ಜಸ್ಟ್ ಕನ್ನಡ (Just Kannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

Leave a Reply