ತೆಲಂಗಾಣ ಮತ್ತು ಆಂಧ್ರದಲ್ಲಿ ಹಬ್ಬಗಳ ಸಂದರ್ಭದಲ್ಲಿ ಬೇರೆ ಭಾಷೆಯ ಡಬ್ಬಿಂಗ್ ಚಿತ್ರಗಳ ಬಿಡುಗಡೆ ಮಾಡಬಾರದು ಎಂದು ಅಲ್ಲಿನ ನಿರ್ಮಾಪಕರ ಸಂಘ ತೀರ್ಮಾನಿಸಿದೆ. ಈ ನಿರ್ಧಾರ ಇವಾಗ ದೊಡ್ಡ ವಿವಾದ ಉಂಟು ಮಾಡಿದೆ. ಪ್ಯಾನ್ ಇಂಡಿಯಾ ಸಿನಿಮಾಗಳಿಂದಾಗಿ ಬೇರೆ ಬೇರೆ ಭಾಷೆಯ ಫಿಲಂ ಇಂಡಸ್ಟ್ರಿ ನಡುವೆ ಉತ್ತಮ ಭಾಂದವ್ಯ ಶುರುವಾಗಿದೆ.
ಆದರೆ, ಮುಂದಿನ ವರ್ಷದ (2023) ಆರಂಭದಲ್ಲಿ ಬೇರೆ ಬೇರೆ ಭಾಷೆಯ ಸಿನಿಮಾರಂಗಗಳ ನಡುವೆ ಬಿರುಕು ಮೂಡುವ ಸಾಧ್ಯತೆ ಗೋಚರಿಸುತ್ತಿದೆ. ಡಬ್ಬಿಂಗ್ ಚಿತ್ರಗಳ ವಿಷಯದಲ್ಲಿ ಟಾಲಿವುಡ್ನ ನಿರ್ಮಾಪಕರು ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ. 2023ರ ಸಂಕ್ರಾಂತಿಯಲ್ಲಿ ತೆಲಂಗಾಣ ಮತ್ತು ಆಂಧ್ರದಲ್ಲಿ ತೆಲುಗು ಸಿನಿಮಾಗಳನ್ನು ಹೊರತುಪಡಿಸಿ ಬೇರೆ ಭಾಷೆಯ ಡಬ್ಬಿಂಗ್ ಚಿತ್ರಗಳಿಗೆ ಥಿಯೇಟರ್ ನೀಡಬಾರದು ಎಂದು ತೆಲುಗು ನಿರ್ಮಾಪಕರ ಸಂಘವು ಎಲ್ಲ ವಿತರಕರಿಗೆ ಹಾಗೂ ಪ್ರದರ್ಶಕರಿಗೆ ಇಂತಹದ್ದೊಂದು ಸೂಚನೆ ನೀಡಿದೆ. ಇದು ದೊಡ್ಡ ಮಟ್ಟದಲ್ಲಿ ವಿವಾದ ಉಂಟು ಮಾಡಿದೆ.
ಡಬ್ಬಿಂಗ್ ಚಿತ್ರಗಳು ಇವಾಗ ಎಲ್ಲ ರಾಜ್ಯಗಳಲ್ಲಿ ರಾರಾಜಿಸುತ್ತಿವೆ. ರಿಷಬ್ ಶೆಟ್ಟಿ ಅಭಿನಯದ ಕನ್ನಡದ ‘ಕಾಂತಾರ’ ಚಿತ್ರ ತೆಲುಗಿಗೆ ಡಬ್ ಆಗಿ ಧೂಳೆಬ್ಬಿಸಿದೆ. ಹಲವು ತೆಲುಗು ಸಿನಿಮಾಗಳಿಗೆ ಗಲ್ಲಾಪೆಟ್ಟಿಗೆಯಲ್ಲಿ ರಿಷಬ್ ಶೆಟ್ಟಿಯ ‘ಕಾಂತಾರ’ ಕನ್ನಡ ಚಿತ್ರ ತೀವ್ರ ಪೈಪೋಟಿ ನೀಡಿದೆ. ಈಗ ತಮಿಳಿನ ‘ವಾರಿಸು’ ಚಿತ್ರ ಕೂಡ ತೆಲುಗು ಭಾಷೆಗೆ ಡಬ್ ಆಗಿ ತೆರೆಕಾಣಲು ಸಜ್ಜಾಗಿದೆ. ಆದರೆ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಡಬ್ಬಿಂಗ್ ಚಿತ್ರಗಳ ಬಿಡುಗಡೆಗೆ ತೆಲಂಗಾಣ ಹಾಗು ಆಂಧ್ರದಲ್ಲಿ ಹೆಚ್ಚು ಆದತ್ಯೆ ನೀಡಬಾರದೆಂದು ತೆಲುಗು ನಿರ್ಮಾಪಕರ ಸಂಘ ತೀರ್ಮಾನಿಸಿದೆ.
ಟಾಲಿವುಡ್ ಖ್ಯಾತ ನಿರ್ಮಾಪಕ ದಿಲ್ ರಾಜು, ತಮಿಳಿನ ‘ವಾರಿಸು’ ಸಿನಿಮಾದ ತೆಲುಗು ವರ್ಷನ್ ಅನ್ನು ಆಂಧ್ರ ಹಾಗೂ ತೆಲಂಗಾಣದಲ್ಲಿ ಬಿಡುಗಡೆ ಮಾಡಲು ರೆಡಿಯಾಗಿದ್ದಾರೆ. ಆದರೆ ಕೆಲವೇ ವರ್ಷಗಳ ಹಿಂದೆ ಇದೇ ದಿಲ್ ರಾಜು ಅವರು ಬೇರೆ ಭಾಷೆಯ ಡಬ್ಬಿಂಗ್ ಸಿನಿಮಾಗಳ ವಿರುದ್ಧ ಮಾತನಾಡಿದ್ದರು. ಅಂದಿನ ದಿಲ್ ರಾಜು ಅವರ ಹೇಳಿಕೆಯನ್ನು ಈಗ ಮತ್ತೆ ನೆನಪಿಸುವ ಕಾರ್ಯ ಆಗುತ್ತಿದೆ. ಒಟ್ಟಾರೆಯಾಗಿ ಈ ವಿಚಾರ ಭಾರತೀಯ ಚಿತ್ರರಂಗದಲ್ಲಿ ದೊಡ್ಡದೊಂದು ಚರ್ಚೆ ಹುಟ್ಟುಹಾಕಿರೋದು ಸುಳ್ಳಲ್ಲ.
ಒಂದು ವೇಳೆ ದಸರಾ, ಸಂಕ್ರಾಂತಿ ಮುಂತಾದ ಹಬ್ಬದ ಸಂದರ್ಭದಲ್ಲಿ ತೆಲಂಗಾಣ ಮತ್ತು ಆಂಧ್ರದ ಚಿತ್ರಮಂದಿರಗಳಲ್ಲಿ ತೆಲುಗು ಭಾಷೆಯ ಸಿನಿಮಾಗಳಿಗೆ ಮಾತ್ರ ಆದ್ಯತೆ ಕೊಡಬೇಕು ಎಂದು ಅಲ್ಲಿನ ನಿರ್ಮಾಪಕರು ಕಠಿಣವಾದ ತೀರ್ಮಾನ ಕೈಕೊಂಡರೆ, ಅದು ಬೇರೆ ಬೇರೆ ಭಾಷೆಯ ಸಿನಿಮಾಗಳಿಗೆ ತೊಂದರೆ ಆಗಲಿದೆ. ಅದೇ ರೀತಿ, ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಭಾರತದಲ್ಲೂ ಇಂತಹ ಪರಿಸ್ಥಿತಿ ನಿರ್ಮಾಣವಾದರೆ ಪ್ಯಾನ್ ಇಂಡಿಯಾ(Pan India) ಸಿನಿಮಾಗಳ ಮಾರುಕಟ್ಟೆಗೆ ದೊಡ್ಡ ಪೆಟ್ಟು ಬೀಳುವುದಂತೂ ಖಚಿತ.
ಬೇರೆ ಭಾಷೆಯ ಡಬ್ಬಿಂಗ್ ಚಿತ್ರಗಳಿಗೆ ತೆಲುಗು ಮಂದಿ ಕಡಿವಾಣ ಹಾಕುವುದು ನಿಜವೇ ಆದ್ರೆ, ಕರ್ನಾಟಕದಲ್ಲೂ ಕೂಡ ತೆಲುಗು ಚಿತ್ರಗಳ ಬಿಡುಗಡೆಗೆ ಅವಕಾಶ ನೀಡಲೇಬಾರದು ಎಂದು ಸಾಮಾಜಿಕ ಜಾಲತಾಣದಲ್ಲಿ ಕನ್ನಡದ ಪ್ರೇಕ್ಷಕರಿಂದ ಕೂಡ ಒತ್ತಾಯ ಕೇಳಿಬರುತ್ತಿದೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ’ (JustKannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.
- ಬ್ಯಾಂಕ್ ಖಾತೆ ಇದ್ದರೆ ಸಾಕು ನಿಮಗೆ ಸಿಗುತ್ತೆ 2 ಲಕ್ಷ.! – Suraksha Bima Yojana
- Gold Rate : ಇಂದಿನ ಗೋಲ್ಡ್ ರೇಟ್ ಇಳಿಕೆ ಕಂಡಿದೆಯಾ.? ಎಷ್ಟಾಗಿದೆ ನೋಡಿ ಇವತ್ತಿನ ಚಿನ್ನದ ಬೆಲೆ.?
- MGNREGA : ರೈತರಿಗೆ ನಿಮ್ಮ ಗ್ರಾಮ ಪಂಚಾಯಿತಿಗಳಲ್ಲಿ 2 ಲಕ್ಷ ಸಹಾಯಧನಕ್ಕಾಗಿ ಅರ್ಜಿ | ಗ್ರಾಮೀಣ ರೈತರಿಗೆ ಗುಡ್ ನ್ಯೂಸ್.!
- Electricity Meters : ಮನೆಯಲ್ಲಿರುವ ವಿದ್ಯುತ್ ಮೀಟರ್ ತಂದೆ ತಾತ ಮುತ್ತಾತನ ಹೆಸರಿನಲ್ಲಿ ಇದ್ದವರಿಗೆ ಗುಡ್ ನ್ಯೂಸ್.!
- ಹೆಣ್ಣಿಗೆ ಮಿಲನದಲ್ಲಿ ಸಂಪೂರ್ಣ ತೃಪ್ತಿ ಸಿಗದೇ ಇದ್ದರೆ, ಆಕೆಯ ಮೇಲಾಗುವ 6 ಆಶ್ಚರ್ಯಕರ ಪರಿಣಾಮಗಳು | ಆರೋಗ್ಯ ಸಲಹೆ