Civil Service : ಇಡೀ ಭಾರತದಲ್ಲೇ ಅತ್ಯಂತ ಕಷ್ಟವಾದ ಪರೀಕ್ಷೆ ಏನಂದ್ರೆ ಅದು ಸಿವಿಲ್ ಸರ್ವಿಸ್ ಎಕ್ಸಾಮ್. ಅಂದರೆ ಐಎಎಸ್, ಐಪಿಎಸ್ ಹುದ್ದೆಗಳಿಗೆ ಬರೆಯುವ ಪರೀಕ್ಷೆ. ಈ ಎಕ್ಸಾಮ್ ನ ಇಂಟರ್ವ್ಯೂ ನಲ್ಲಿ ಈ ಮಹಿಳೆ ಕೊಟ್ಟ ಉತ್ತರ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಸಲಿಗೆ ಆ ಇಂಟರ್ವ್ಯೂ ನಲ್ಲಿ ಅವರು ಕೇಳಿದ ಪ್ರಶ್ನೆ ಏನು.? ಈಕೆ ಏನು ಉತ್ತರ ಕೊಟ್ಟಳು.? ಅಂತ ತಿಳಿದರೆ ನಿಮಗೂ ಕೂಡ ಆಶ್ಚರ್ಯವಾಗುತ್ತದೆ.
ಇದನ್ನೂ ಕೂಡ ಓದಿ : New Rules : ಸ್ಕೂಲ್ ಗೆ ಹೋಗುವ ಎಲ್ಲಾ ಮಕ್ಕಳಿಗೆ ಸರ್ಕಾರದ ಕಡೆಯಿಂದ 2 ಹೊಸ ನಿಯಮ ಜಾರಿಗೆ
ಸಿವಿಲ್ ಸರ್ವಿಸ್ ಪಾಸ್ ಆಗಬೇಕೆಂದರೆ ಕೇವಲ ಬುಕ್ ನಾಲೆಡ್ಜ್ ಮಾತ್ರವಲ್ಲದೇ, ಸಮಯಸ್ಫೂರ್ತಿ, ತಿಳುವಳಿಕೆಯಿರಬೇಕು. ಇಲ್ಲವಾದರೆ ಸ್ಟೇಟ್ ರಾಂಕ್ ಬಂದರೂ ಕೂಡ ನೀವು ಕೆಲಸಕ್ಕೆ ಅನರ್ಹರಾಗುತ್ತೀರಿ. ಅದೇ ರೀತಿ ನಮ್ಮ ಕನ್ನಡದ ಹುಡುಗಿ ಐಎಎಸ್ ಪಾಸ್ ಮಾಡಲು ಇಂಟರ್ವ್ಯೂ ರೌಂಡ್ ತಲುಪಿದರು. ಆ ಇಂಟರ್ವ್ಯೂ ನಲ್ಲಿ ಅವರು ಕೇಳಿದ ಪ್ರಶ್ನೆಗೆ ಮೊದಲು ಶಾಕ್ ಆದರೂ ಸಹ ನಂತರ ಯೋಚಿಸಿ ಕೊಟ್ಟ ಉತ್ತರಕ್ಕೆ ಅಲ್ಲಿನ ಇಂಟರ್ವ್ಯೂ ಪ್ಯಾನಲಿಸ್ಟ್ ಕೂಡ ಆಶ್ಚರ್ಯ ಪಟ್ಟರು.
ಆ ಪ್ರಶ್ನೆ ಏನೆಂದರೆ, ನಿಮ್ಮ ಗಂಡ ಸತ್ತು ಹೋಗುತ್ತಾರೆ, ನಂತರ ನೀವು ಎರಡನೇ ಮದುವೆಯಾಗುವಿರಿ. ಕೆಲವು ತಿಂಗಳು ಕಳೆದ ನಂತರ ಸತ್ತು ಹೋದ ನಿಮ್ಮ ಮೊದಲನೇ ಗಂಡ ಮನೆಗೆ ಹಿಂದಿರುಗಿ ಬಂದರೆ ನೀವು ಏನು ಮಾಡುವಿರಿ.? ಅಂತ ಪ್ರಶ್ನಿಸಿದರು. ಆಕೆಯ ಉತ್ತರ ಹೀಗಿತ್ತು – ನೀವು ಹೇಳಿದ ಹಾಗೆ ನನ್ನ ಗಂಡ ಹಿಂದಿರುಗಿ ಬಂದರೆ ನಮ್ಮ ಭಾರತದ ಕಾನೂನಿನ ಪ್ರಕಾರ ಎರಡನೇ ಮದುವೆಯಾಗಬೇಕಾದರೆ ಆ ಮಹಿಳೆ ಮೊದಲನೇ ಗಂಡನಿಂದ ವಿಚ್ಛೇದನ ಪಡೆದು ನಂತರ ಮದುವೆಯಾಗಬೇಕು. ಒಂದು ವೇಳೆ ಆ ಗಂಡ ಸತ್ತು ಹೋದರೆ, ಅದನ್ನು ಧೃಡೀಕರಿಸಿದ ಡಾಕ್ಟರ್ ನಿಂದ ಸಾವಿನ ಪ್ರಮಾಣಪತ್ರ ತೆಗೆದುಕೊಂಡು ಆ ಆಧಾರದಲ್ಲಿ ಎರಡನೇ ಮದುವೆಯಾಗಬಹುದು.
ಇದನ್ನೂ ಕೂಡ ಓದಿ : Gruhalakshmi scheme : ಗೃಹಲಕ್ಷ್ಮಿ ಯಲ್ಲಿ ದೊಡ್ಡ ಬದಲಾವಣೆ / ೧೮ ವರ್ಷ ಮೇಲ್ಪಟ್ಟ ಎಲ್ಲರಿಗೂ ಅನ್ವಯ
ನೀವು ಹೇಳಿದ ಹಾಗೆ ನನ್ನ ಮೊದಲನೇ ಗಂಡ ಹಿಂದಿರುಗಿದರೂ ಸಹ ಕಾನೂನಿನ ಪ್ರಕಾರ ನನ್ನ ಎರಡನೇ ಮದುವೆಗೆ ತೊಂದರೆಯಾಗುವುದಿಲ್ಲ. ಇನ್ನು ನಾನು ಯಾರ ಜೊತೆಗೆ ಇರುತ್ತೇನೆ ಎನ್ನುವುದು ನನ್ನ ವೈಯುಕ್ತಿಕ ವಿಚಾರ. ಇದನ್ನು ಕೇಳಿ, ಅಲ್ಲಿನ ಸೀನಿಯರ್ ಅಧಿಕಾರಿ ಚಪ್ಪಾಳೆ ಹೊಡೆದರು. ಈಕೆಗೆ ನಮ್ಮ ದೇಶದ ಕಾನೂನಿನ ಮೇಲೆ ಎಷ್ಟು ಅರಿವಿದೆ ಎಂದು ತಿಳಿಯುವುದಕ್ಕೆ ಈ ಪ್ರಶ್ನೆ ಕೇಳಿರುವುದು ಅಂದರು.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ. ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..