
ಮೂತ್ರ ವಿಸರ್ಜನೆ ಮಾಡುವಾಗ ನೊರೆಯಂತೆ ಬರುವುದನ್ನು ನೀವು ಹಲವಾರು ಬಾರಿ ಗಮನಿಸಿರಬಹುದು. ನಾವು ಇದನ್ನು ಸಾಮಾನ್ಯ ಎಂದು ಇಗ್ನೋರ್ ಮಾಡುತ್ತೇವೆ. ಆದರೆ ಈ ರೀತಿ ಗುಳ್ಳೆ ಗುಳ್ಳೆ ಏಳುವುದು ಸಾಮಾನ್ಯ ಅಲ್ಲ. ಇದರ ಹಿಂದೆ ಬಹು ದೊಡ್ಡ ಕಾರಣ ಇದೆ. ಅದನ್ನು ನೀವು ತಿಳಿದುಕೊಂಡು ಆರೋಗ್ಯ ಕಾಪಾಡಿಕೊಂಡರೆ ನೀವು ಹೆಲ್ತಿಯಾಗಿರಲು ಸಾಧ್ಯ. ಇಲ್ಲವಾದರೆ ಗಂಭೀರ ಕಾಯಿಲೆ ಉಂಟಾಗೋದು ಖಂಡಿತಾ.

ಗರ್ಭಾವಸ್ಥೆಯ ದಿನಗಳಲ್ಲಿ : ಸಾಮಾನ್ಯವಾಗಿ ಮಹಿಳೆಯರು ಗರ್ಭಿಣಿಯಾಗುತ್ತಿದ್ದಂತೆ ಅವರ ಕಿಡ್ನಿಯ ಆಕಾರ ಹೆಚ್ಚಾಗುತ್ತದೆ. ವೈದ್ಯರು ತಿಳಿಸುವಂತೆ ಪ್ರೆಗ್ನೆನ್ಸಿಯ ದಿನಗಳಲ್ಲಿ ಮಹಿಳೆಯರ ಕಿಡ್ನಿಯಲ್ಲಿ ಬೇಗನೆ ಅಮಿನೊ ಆಸಿಡ್ ಫಿಲ್ಟರ್ ಆಗುತ್ತದೆ. ಈ ಕಾರಣದಿಂದಾಗಿ ಮೂತ್ರ ವಿಸರ್ಜನೆ ಮಾಡುವ ಸಂದರ್ಭದಲ್ಲಿ ನೊರೆಯಂತೆ ಕಂಡು ಬರುತ್ತದೆ.

ಡೀಹೈಡ್ರೇಶನ್ : ಡೀಹೈಡ್ರೇಶನ್‌ನಿಂದಾಗಿ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತ ಬರುತ್ತದೆ. ಇದರಿಂದಾಗಿ ಮೂತ್ರ ಡಾರ್ಕ್ ಬಣ್ಣಕ್ಕೆ ತಿರುಗುತ್ತದೆ. ಈ ಸಮಯದಲ್ಲೂ ಮೂತ್ರ ಮಾಡುವಾಗ ಗುಳ್ಳೆಗಳು ಮೂಡುತ್ತವೆ. ನಿಮಗೂ ಈ ಸಮಸ್ಯೆ ಕಂಡುಬಂದರೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಿ.

ಮತ್ತೆ ಮತ್ತೆ ಮೂತ್ರ ವಿಸರ್ಜನೆ : ಒಂದು ವೇಳೆ ಒಬ್ಬ ವ್ಯಕ್ತಿ ಮತ್ತೆ ಮತ್ತೆ ಮೂತ್ರ ವಿಸರ್ಜನೆ ಮಾಡುತ್ತಿದ್ದರೆ ನೊರೆ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಇದಕ್ಕಾಗಿ ಹೆದರುವ ಅಗತ್ಯ ಇಲ್ಲ.
ಪ್ರೊಟೀನ್ ಹೆಚ್ಚಾದರೆ : ಪ್ರೊಟೀನ್ ಅಗತ್ಯಕ್ಕಿಂತ ಹೆಚ್ಚು ಸೇವನೆ ಮಾಡಿದರೆ ದೇಹದಲ್ಲಿ ಪ್ರೊಟೀನ್ ಪ್ರಮಾಣ ಹೆಚ್ಚುತ್ತದೆ. ನಾವು ಆರೋಗ್ಯವಾಗಿದ್ದು, ದೇಹದಲ್ಲಿ ಹೆಚ್ಚು ಪ್ರೊಟೀನ್ ಇದ್ದರೆ ಅದು ಮೂತ್ರದ ಮೂಲಕ ಹೊರ ಹೋಗುತ್ತದೆ. ಈ ಸಮಯದಲ್ಲೂ ನೊರೆ ಕಾಣಿಸಿಕೊಳ್ಳುತ್ತದೆ.
ಅನಾವಶ್ಯಕ ವಸ್ತುಗಳು ಕಿಡ್ನಿಯ ಮೂಲಕ ಪಾಸ್ ಆಗುವುದು : ಯಾವಾಗ ಕಿಡ್ನಿಯ ಮೂಲಕ ದೇಹಕ್ಕೆ ಬೇಡವಾದ ವಸ್ತು ಸಾಗುತ್ತದೆ ಆ ಸಮಯದಲ್ಲಿ ಮೂತ್ರ ಮಾಡುವಾಗ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ.

ಯೂರಿನ್ ಇನ್‌ಫೆಕ್ಷನ್ : ಯೂರಿನ್‌ನಲ್ಲಿ ಇನ್‌ಫೆಕ್ಷನ್ ಆಗುವ ಸಂದರ್ಭದಲ್ಲಿ ರೋಗಾಣುಗಳು ಮೂತ್ರದ ಮೂಲಕ ದೇಹದಿಂದ ಹೊರಗೆ ಬರುತ್ತವೆ. ಈ ಸಂದರ್ಭದಲ್ಲಿ ಮೂತ್ರದಲ್ಲಿ ಗುಳ್ಳೆಗಳು ಏಳುತ್ತವೆ. ಈ ಸಂದರ್ಭದಲ್ಲಿ ಆ್ಯಂಟಿಬಯೋಟಿಕ್ ಔಷಧಿ ಸೇವನೆ ಮಾಡಬೇಕು.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ’Just Kannada’ ಪೇಜ್ ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.
- Fixed Deposits : ಹೆಚ್ಚು ಬಡ್ದಿ ದುಡ್ಡು ಕೊಡುವ ಪ್ರಮುಖ 7 ಬ್ಯಾಂಕ್ಗಳು, ಎಷ್ಟಿದೆ ಬಡ್ಡಿ ದರ.? ಸಂಪೂರ್ಣ ಮಾಹಿತಿ
- BSNL Freedom Plan : ಕೇವಲ 1 ರೂಪಾಯಿಗೆ 60GB ಡೇಟಾ ಮತ್ತು ಅನ್ಲಿಮಿಟೆಡ್ ಕರೆ ನೀಡುತ್ತಿರುವ ಬಿಎಸ್ಎನ್ಎಲ್!
- ಕೊಪ್ಪಳದಲ್ಲಿ ಅನ್ಯಧರ್ಮೀಯಳನ್ನು ಪ್ರೀತ್ಸಿದ್ದಕ್ಕೆ ಅನಾಹುತ – ಮಸೀದಿ ಎದುರೇ ಕೊಚ್ಚಿ ಕೊ*ಲೆ!
- Pension Scheme : ಪ್ರತಿ ತಿಂಗಳು ನಿಮಗೆ ₹5,000/- ರೂಪಾಯಿ ಪೆನ್ಷನ್ ಹಣ ಬೇಕಾ.? ಕೂಡಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿ
- PM KUSUM Scheme : 80% ಸಬ್ಸಿಡಿ ಸೋಲಾರ್ ಪಂಪ್ ಸೆಟ್ ಗೆ ಅರ್ಜಿ ಸಲ್ಲಿಸಿ – ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ