Vinod Raj : ಕಳೆದ ಕೆಲ ದಿನಗಳಿಂದ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು ನಟ ವಿನೋದ್ ರಾಜ್ ಮದುವೆ ವಿಚಾರ. ವಿನೋದ್ ರಾಜ್ ಗೆ ಮದುವೆಯಾಗಿದೆ, ಎದೆಯೆತ್ತರಕ್ಕೆ ಬೆಳೆದ ಮಗನೂ ಇದ್ದಾನೆ ಅನ್ನುವ ಸತ್ಯ ಬಯಲಾಗಿದೆ. ಇದೀಗ ಇದೆಲ್ಲಾ ಸುದ್ಧಿಗಳಿಗೆ ಹಿರಿಯ ನಟಿ ಲೀಲಾವತಿ ಯವರೇ ಪ್ರತಿಕ್ರಿಯೆ ನೀಡಿದ್ದಾರೆ. ಸೊಸೆ ಬಗ್ಗೆ ಅಚ್ಚರಿಯ ವಿಷಯವೊಂದನ್ನ ಹಂಚಿಕೊಂಡಿದ್ದಾರೆ.
ಇದನ್ನೂ ಕೂಡ ಓದಿ : SBI ಅಕೌಂಟ್ ಹೊಂದಿರುವ ದೇಶದ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ // 25,000 ರಿಂದ 50,000 ಸ್ಕಾಲರ್ ಶಿಪ್
ಪ್ಯಾಲೇಸ್ ನಲ್ಲಿ ಮದುವೆ ಮಾಡಿಕೊಡುವಷ್ಟು ನನಗೆ ಚೈತನ್ಯ ಇರಲಿಲ್ಲ. ಹಾಗಾಗಿ ರಹಸ್ಯವಾಗಿಡುವುದೇ ಒಳಿತು ಎನಿಸಿತು. ಅವನೇನು ಹೆಣ್ಣು ಹುಡುಗಿಯಲ್ಲ, ಒಂಬತ್ತು ತಿಂಗಳು ಕದ್ದು ಬಸುರಿಯಾಗಿ ಅವನ ಮದುವೆ ಮಾಡಿಲ್ಲ. ಅವನು ಪವಿತ್ರವಾಗಿದ್ದಾನೆ, ಒಳ್ಳೆಯ ಮಗನಾಗಿದ್ದಾನೆ. ತಿರುಪತಿ ಬೆಟ್ಟದ ಮೇಲೆ ಮದುವೆ ಮಾಡಿಸಿದ್ದೇನೆ. ಎಲ್ಲರಿಗು ಗೊತ್ತಾಗಿ ಕೊಂಕು ಮಾತನ್ನು ಕೇಳುವ ಬದಲು, ಪರಿಶುದ್ಧವಾದ ಜಾಗದಲ್ಲಿ ಮದುವೆ ಮಾಡಿಸಿದ್ದೇನೆ. ಕೇವಲ ಎಳೇ ಜನ ಕನ್ನಡಿಗರು ಈ ಮದುವೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಕೂಡ ಓದಿ : Parihara Payment : ಎಲ್ಲಾ ರೈತರ ಅಕೌಂಟ್ ಗೆ 6,000/- ಬೆಳೆ ಪರಿಹಾರ ಹಣ ಬಿಡುಗಡೆ.!
ಯಾಕೆ ನಿಮಗೆ ಇಷ್ಟೇ ಜನ ಸಿಕ್ಕರೆ? ಎನ್ನುವ ಮಾತು ಕೇಳಿ ಬಂದರೂ ನಾನು ಮಾತನಾಡಿರಲಿಲ್ಲ. ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು, ಆ ವಿಚಾರದಲ್ಲಿ ನನಗೆ ತುಂಬಾ ಭಯ. ಸೊಸೆ, ಮೊಮ್ಮಕ್ಕಳು ಚಿನ್ನದ ಹಾಗಿದ್ದಾರೆ. ನಮ್ಮ ಅಂತರಂಗ ಸುದ್ಧಿಯನ್ನೆಲ್ಲಾ ಯಾಕೆ ಕೇಳ್ತಿದ್ದಾರೆ? ಆದರೆ ಯಾರು ಏನೇ ಹೇಳಿದರೂ ನನ್ನ ಆತ್ಮ ಸಾಕ್ಷಿಗೆ ನಾನು ಸರಿಯಾಗಿಯೇ ಇದ್ದೇನೆ. ಕಡು ಬಡವಳು ನಾನು, ಜಾಮೀನು ತೆಗೆದುಕೊಂಡಿದ್ದು ಮೂವತ್ತು ಸಾವಿರಕ್ಕೆ, ಸೊಸೆಗೆ ಒಳ್ಳೆಯ ಬಂಗಲೆ ಇದೆ. ಸೊಸೆ, ಮೊಮ್ಮಗ ಚೆನ್ನೈ ನಲ್ಲಿದ್ದಾರೆ. ನನಗೆ ನೋವುಂಟು ಮಾಡುವವರು ನರಕದಲ್ಲಿ ಬೀಳ್ತಾರೆ ಅನ್ನುತ್ತಾ ಕಣ್ಣೀರು ಹಾಕಿದ್ದಾರೆ ಹಿರಿಯ ನಟಿ ಲೀಲಾವತಿ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನ ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ. ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..