Aadhar Card Update : ನಮಸ್ಕಾರ ಸ್ನೇಹಿತರೇ, ಆಧಾರ್ ಕಾರ್ಡನ್ನ ಉಚಿತವಾಗಿ ನವೀಕರಿಸುವ ಕೊನೆಯ ದಿನಾಂಕವನ್ನ ವಿಸ್ತರಿಸಲಾಗಿದೆ. ಈ ಮೊದಲು ಇದನ್ನ ಉಚಿತವಾಗಿ ನವೀಕರಿಸಲು ಕೊನೆಯ ದಿನಾಂಕ ಜೂನ್ 14 ಆಗಿತ್ತು, ಅದನ್ನ ಸೆಪ್ಟೆಂಬರ್ 14 ರ ವರೆಗೆ ವಿಸ್ತರಿಸಲಾಗಿದೆ. ಕಳೆದ 10 ವರ್ಷಗಳಲ್ಲಿ ಒಮ್ಮೆಯೂ ನವೀಕರಿಸದಂತಹ ಜನರು ಆಧಾರ್ ಕಾರ್ಡನ್ನ ನವೀಕರಿಸುವುದನ್ನ ಆಧಾರ್ ಪ್ರಾಧಿಕಾರವು ಕಡ್ಡಾಯ ಗೊಳಿಸಿದೆ.
ಇದನ್ನೂ ಕೂಡ ಓದಿ : Crop Kharif Karnataka 23-24 : ಬೆಳೆ ವಿಮೆ ಆಪ್ ಬಿಡುಗಡೆ // ನೀವು ಕೂಡ ಬೆಳೆ ಸಹಾಯಧನ ಪಡೆಯಿರಿ
ಇದಕ್ಕಾಗಿ ಯುಐಡಿಎಐ ತನ್ನ ಉಚಿತ ನವೀಕರಣದ ಕೊನೆಯ ದಿನಾಂಕವನ್ನ ಮತ್ತೆ ವಿಸ್ತರಿಸಿದೆ. ಈಗ ಜನರು ತಮ್ಮ ಆಧಾರ್ ಕಾರ್ಡ್ ನಲ್ಲಿನ ವಿಷಯಗಳನ್ನ ನವೀಕರಿಸಲು 3 ತಿಂಗಳ ಸಾಕಷ್ಟು ಸಮಯವನ್ನ ಹೊಂದಿದ್ದಾರೆ. ಯಾವುದೇ ಆಧಾರ್ ಹೊಂದಿರುವವವರು ತಮ್ಮ ಆಧಾರ್ ಕಾರ್ಡನ್ನ ಆನ್ಲೈನ್ ನಲ್ಲಿ ಉಚಿತವಾಗಿ ನವೀಕರಿಸಬಹುದು. ಆಧಾರ್ ಪೋರ್ಟಲ್ ಮೂಲಕ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಯನ್ನ ಆನ್ಲೈನ್ ನಲ್ಲಿ ನವೀಕರಿಸಬಹುದು. ಇದಕ್ಕಾಗಿ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ.
ಇದನ್ನೂ ಕೂಡ ಓದಿ : SBI Bank Rules : ಎಸ್ ಬಿಐ ಬ್ಯಾಂಕ್ ಅಕೌಂಟ್ ಇದ್ದವರಿಗೆ // ಬ್ಯಾಂಕ್ ನಿಂದ ಹೊಸ ರೂಲ್ಸ್ ಜಾರಿಗೆ.!
ಅದೇ ಸಮಯದಲ್ಲಿ ನೀವು ನಿಮ್ಮ ಹತ್ತಿರದ ಆಧಾರ್ ಕೇಂದ್ರಕ್ಕೆ ಹೋಗಿ ಆಧಾರ್ ಕಾರ್ಡ್ ನಲ್ಲಿ ಕೆಲವು ನವೀಕರಣಗಳನ್ನ ಪಡೆದರೆ ಅದಕ್ಕಾಗಿ ನೀವು 50 ರೂಪಾಯಿ ಶುಲ್ಕವನ್ನ ಪಾವತಿಸಬೇಕಾಗುತ್ತದೆ. ಈ ಮೊದಲು ಆಧಾರ್ ಬಳಕೆದಾರರಿಗೆ ಜನ ಸಂಖ್ಯಾ ವಿವರಗಳನ್ನು ಅಂದರೆ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನ ಉಚಿತವಾಗಿ ನವೀಕರಿಸಲು ಮಾರ್ಚ್ 15 ರಿಂದ ಜೂನ್ 14 ರ ವರೆಗೆ ಸಮಯ ನೀಡಲಾಗಿತ್ತು. ಅದರ ಗಡುವು ಜೂನ್ 14 ರಂದು ಕೊನೆಗೊಂಡಿದ್ದು, ಆಧಾರ್ ಪ್ರಾಧಿಕಾರವು ಮತ್ತೊಮ್ಮೆ ಅದನ್ನ 3 ತಿಂಗಳವರೆಗೆ ವಿಸ್ತರಿಸಿದೆ. ಈಗ ಜನರು ತಮ್ಮ ಆಧಾರ್ ವಿವರಗಳನ್ನು 14 ಸೆಪ್ಟೆಂಬರ್ 2023 ಉಚಿತವಾಗಿ ನವೀಕರಿಸಬಹುದು.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ. ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..