Leelavathi : ಕೆಲ ದಿನಗಳ ಹಿಂದೆ ನಟಿ ಲೀಲಾವತಿ ಅವರ ಆರೋಗ್ಯ ಹದಗೆಟ್ಟಿದೆ. ಹಿರಿಯ ನಟಿ ಲೀಲಾವತಿ ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ತೋಟದ ಮನೆಯಲ್ಲಿ ಮಗ ವಿನೋದ್ ರಾಜ್ ಆರೈಕೆ ಮಾಡುತ್ತಿದ್ದಾರೆ. ಇದೀಗ ಲೀಲಾವತಿ ಅವರಿಗೆ ಈ ರೀತಿ ಆಗಿದೆ ಅಂತ ತಿಳಿದು ವಿನೋದ್ ರಾಜ್ ಅವರ ಮಗ ಚೆನ್ನೈನಿಂದ ಬಂದಿದ್ದಾರೆ.
ಇದನ್ನೂ ಕೂಡ ಓದಿ : ಅಪ್ಪುವಿನ ಈ ಒಂದು ಆಸೆ ಈಡೇರಲೇ ಇಲ್ಲ ಎಂದು ಬೇಜಾರು ಮಾಡಿಕೊಂಡ ಅಶ್ವಿನಿ ಪುನೀತ್ ರಾಜ್ ಕುಮಾರ್
ಕೆಲ ದಿನಗಳ ಹಿಂದೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಲೀಲಾವತಿ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಹಾಗೆಯೇ ದರ್ಶನ್ ತೂಗುದೀಪ, ಬಹುಭಾಷಾ ನಟ ಅರ್ಜುನ್ ಸರ್ಜಾ, ಅಭಿಷೇಕ್ ಅಂಬರೀಷ್ ಸಹ ಹಿರಿಯ ನಟಿಯ ಆರೋಗ್ಯ ವಿಚಾರಿಸಿದ್ದರು. ಇದೀಗ ಲೀಲಾವತಿಯವರ ಪರಿಸ್ಥಿತಿ ನೋಡಿ ಚೆನ್ನೈನಲ್ಲಿದ್ದ ವಿನೋದ್ ರಾಜ್ ಅವರ ಪತ್ನಿ ಹಾಗು ಮಗ ಕೂಡ ಬಂದಿದ್ದು, ಸೊಸೆ ಹಾಗೂ ಮೊಮ್ಮಗನನ್ನ ನೋಡಿ ಲೀಲಾವತಿ ಅವರು ಕಣ್ಣೀರು ಹಾಕಿದ್ದಾರೆ.
ಲೀಲಾವತಿ ಅವರ ಪರಿಸ್ಥಿತಿ ತುಂಬಾನೇ ಚಿಂತಾಜನಕ ವಾಗಿತ್ತು. ಊಟ, ನೀರು ಬಿಟ್ಟಿದ್ದಾರೆ. ಯಾರೊಂದಿಗೂ ಕೂಡ ಮಾತನಾಡುತ್ತಿಲ್ಲ, ಯಾರನ್ನು ಕೂಡ ಗುರುತಿಸುತ್ತಿಲ್ಲ. ಈ ಪರಿಸ್ಥಿತಿಯಲ್ಲಿ ತಾಯಿಯ ಕಷ್ಟ ನೋಡಲಾರದೇ ವಿನೋದ್ ರಾಜ್ ಅವರ ಪತ್ನಿ ಕೂಡ ಕಣ್ಣೀರು ಹಾಕುತ್ತಿದ್ದಾರೆ. ಇಷ್ಟು ದಿನ ಚೆನ್ನೈನಲ್ಲಿದ್ದ ಸೊಸೆ ಹಾಗೂ ಮೊಮ್ಮಗ ಇದೀಗ ಲೀಲಾವತಿ ಅವರ ಮನೆಗೆ ಬಂದಿದ್ದು, ಅತ್ತೆ ಲೀಲಾವತಿ ಅವರ ಪರಿಸ್ಥಿತಿ ನೋಡಲಾರದೇ ಸೊಸೆ ಕಣ್ಣೀರು ಹಾಕುತ್ತಿದ್ದಾರೆ.
ಇದನ್ನೂ ಕೂಡ ಓದಿ : 60 ವರ್ಷ ಮೇಲ್ಪಟ್ಟ ಅಜ್ಜ-ಅಜ್ಜಿಯರಿಗೆ / ಎಲ್ಲಾ ದೇವಸ್ಥಾನಗಳಲ್ಲಿ ಉಚಿತ ನೇರ ದರ್ಶನ / ಈ ಕಾರ್ಡ್ ಕಡ್ಡಾಯ.!
ಇದೀಗ ಲೀಲಾವತಿ ಅವರನ್ನು ನೋಡಲು ಬಂದ ಸೊಸೆ ಮತ್ತು ಮೊಮ್ಮಗನನ್ನು ಕೇವಲ ಧ್ವನಿಯ ಮೂಲಕ ಗುರುತು ಹಿಡಿದಿದ್ದಾರೆ ಹಾಗು ಕೊಂಚ ಕೈ ಮೇಲೆತ್ತಿ ಮೊಮ್ಮಗನ ಮುಖವನ್ನು ಸವರಿದ್ದಾರೆ. ಸೊಸೆ ಹಾಗೂ ಮಗನ ಕೈ ಹಿಡಿದು ಚೆನ್ನಾಗಿರಿ ಎಂದು ಆಶೀರ್ವಾದ ಮಾಡಿದ್ದಾರೆ. ಅಜ್ಜಿಯ ಪರಿಸ್ಥಿತಿ ನೋಡಿ ಮೊಮ್ಮಗ ಕೂಡ ಕಣ್ಣೀರು ಹಾಕಿದ್ದಾನೆ. ಇನ್ನು ಲೀಲಾವತಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಸೊಸೆ ಕೂಡ ಇಲ್ಲಿ ಬಂದು ಉಳಿದುಕೊಂಡಿದ್ದಾರೆ. ಅತ್ತೆಯ ಪರಿಸ್ಥಿತಿ ನೋಡಿ ಅವರನ್ನು ಮಾತನಾಡಿಸುವ ಪ್ರಯತ್ನ ಮಾಡಿದ್ದಾರೆ.