‘ಹೆಬ್ಬುಲಿ’ ರಾಣಿ ಅಮಲಾ ಪಾಲ್‌ ಅರೆಸ್ಟ್‌, ಬಿಡುಗಡೆ… ಕಾರಣ ಏನು ಗೊತ್ತಾ.?

ಕಿಚ್ಚ ಸುದೀಪ್‌ ಅಭಿನಯದ ಹೆಬ್ಬುಲಿ ಚಿತ್ರದ ನಟಿ ಅಮಲಾ ಪಾಲ್‌ ತೆರಿಗೆ ತಪ್ಪಿಸಿಕೊಳ್ಳವ ಭರದಲ್ಲಿ ಪೊಲೀಸ್‌ ಅತಿಥಿ ಆಗಿದ್ದರು

ಹೆಬ್ಬುಲಿ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟ ಬಹುಬಾಷಾ ಬೆಡಗಿ ಅಮಲಾ ಪಾಲ್‌ ಕಳೆದ ಕೆಲ ದಿನಗಳ ಹಿಂದೆ ಕೋಟಿ ಕೊಟ್ಟು ಕಾರು ಖರೀದಿಸಿದ್ದರು. ಈ ವೇಳೆ ತಪ್ಪು ವಿಳಾಸ ನೀಡಿ ಪಾಂಡಿಚೇರಿಯಲ್ಲಿ ಕಾರನ್ನು ರಿಜಿಸ್ಟರ್‌ ಮಾಡಿಸಿದ್ದರು. ಇದರಿಂದಾಗಿ ಅವರು 20 ಲಕ್ಷ ತೆರಿಗೆ ಹಣ ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಎಂದು ಕೇರಳದಲ್ಲಿ ಅಮಲಾ ವಿರುದ್ಧ ಪ್ರಕರಣ ದಾಖಲಾಗಿತ್ತು.

WhatsApp Group Join Now
Telegram Group Join Now

ಅರೆಸ್ಟ್‌ ಆಗುವ ಮುನ್ನ ಅಮಲಾ ಪಾಲ್‌ ಕೇರಳ ಹೈಕೋರ್ಟ್‌ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದ್ರೆ ಕ್ರೈಂ ಬ್ರ್ಯಾಂಚ್‌ ಎದುರು ಹಾಜರಾಗಬೇಕು ಎಂದು ನ್ಯಾಯಾಲಯ ಆದೇಶಿಸಿತು. ಹೀಗಾಗಿ ಅಮಲಾ ತಿರುವನಂತಪುರಂನಲ್ಲಿರುವ ಕ್ರೈಂ ಬ್ರ್ಯಾಂಚ್‌ ಪೊಲೀಸರ ಮುಂದು ಹಾಜರಾಗಿ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಬಳಿಕ ನ್ಯಾಯಾಲಯ ಅಮಲಾಗೆ ಜಾಮೀನು ಮಂಜೂರು ಮಾಡಿದೆ. ಇನ್ನು ಪೊಲೀಸರ ಅತಿಥಿಯಾಗಿದ್ದ ನಟಿ ಅಮಲಾ ಪೌಲ್‌ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. 

Leave a Reply