ಸ್ವಂತ ಮ್ಯಾನೇಜರ್ ನಿಂದ ದಾರುಣವಾಗಿ ಮೋಸ ಹೋದ ಈ ಟಾಪ್ ನಟಿ ಯಾರು ಗೊತ್ತಾ.?

ಸಿನಿಮಾ ನಟಿಯರು ಅಂದ್ರೆ ಅವರಿಗೆ ತುಂಬಾ ಪ್ರಪಂಚ ಜ್ಞಾನ ಇರುತ್ತದೆ ಎಂದು ನಾವು ಭಾವಿಸುತ್ತೇವೆ. ಆದ್ರೆ, ಅವರೂ ತುಂಬಾ ಮೋಸ ಹೋಗುತ್ತಾರೆ ಅನ್ನೋದು ನಟಿ ತಮನ್ನಾ ವಿಷಯದಲ್ಲಿ ಸಾಬೀತಾಗಿದೆ.

ಚಿಕ್ಕ ವಯಸ್ಸಿಗೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ತಮನ್ನಾಗೆ ಇಲ್ಲಿನ ವಿಷಯಗಳ ಬಗ್ಗೆ ಜ್ಞಾನ ಇರಲಿಲ್ಲ, ಆಗ ಎಲ್ಲರಂತೆ ಈ ನಟಿ ಕೂಡ ಒಬ್ಬ ಮ್ಯಾನೇಜರ್ ನನ್ನು ಇಟ್ಕೊಂಡಳು. ತಮನ್ನಾ ಅಮಾಯಕತೆಯನ್ನು ಅರಿತ ಮ್ಯಾನೇಜರ್ ಒಂದು ಮಾಸ್ಟರ್ ಪ್ಲಾನ್ ಮಾಡಿದ.

WhatsApp Group Join Now
Telegram Group Join Now

‘ನಿನಗೆ ಅವಕಾಶ ಬಂದರು, ಬರದೇ ಇದ್ದರೂ ಸಹ ನನಗೆ ಸಂಬಳ ಕೊಡಬೇಕು, ಹಾಗೆ ಐದು ವರ್ಷಗಳ ಕಾಲ ನೀನು ಯಾವುದೇ ಸಿನಿಮಾ ಮಾಡಿದರೂ ನನಗೆ ಕಮಿಷನ್ ಕೊಡಬೇಕು’ ಎಂದು ಅಗ್ರಿಮೆಂಟ್ ಮಾಡಿ ಅದಕ್ಕೆ ತಮನ್ನಾ ಕೈಯಿಂದ ಸಹಿ ಮಾಡಿಸಿಕೊಂಡ ಮ್ಯಾನೇಜರ್.

ಚಿತ್ರರಂಗದ ಬಗ್ಗೆ ಜ್ಞಾನ ಇಲ್ಲದ ತಮನ್ನಾ, ಮ್ಯಾನೇಜರ್ ಹೇಳಿದಂತೆ ಒಪ್ಪಿಕೊಂಡು ಸೈನ್ ಹಾಕಿದರು, ಭೂಪ ಮ್ಯಾನೇಜರ್ ಯಾವ ಅವಕಾಶವನ್ನು ಈ ನಟಿಗೆ ಕೊಡಿಸಲಿಲ್ಲ, ತಮನ್ನಾ ಫೋಟೋ ನೋಡಿದ ನಿರ್ದೇಶಕರು ಆಕೆಯನ್ನು ಆಯ್ಕೆ ಮಾಡಿಕೊಂಡರು.

WhatsApp Group Join Now
Telegram Group Join Now

ಎರಡು ಸಿನಿಮಾ ಮಾಡಿದ ತಮನ್ನಾ, ಟಾಪ್ ನಟಿಯಾದರು. ಆದ್ರೆ, ಅಗ್ರಿಮೆಂಟ್ ಪ್ರಕಾರ ಮ್ಯಾನೇಜರ್ ಗೆ ಕಮಿಷನ್ ಕೊಡಬೇಕು. ಆಗ ತಾನು ಮ್ಯಾನೇಜರ್ ನಿಂದ ಮೋಸ ಹೋಗಿದ್ದೇನೆ ಎಂದು ತಮನ್ನಾಗೆ ಗೊತ್ತಾಯಿತು.

ಕಮಿಷನ್ ಕೊಡಲ್ಲ ಅಂದಿದ್ದಕ್ಕೆ, ಮ್ಯಾನೇಜರ್ ಕೋರ್ಟ್ ನಲ್ಲಿ ಕೇಸ್ ಹಾಕಿದ. ಆದ್ರೆ, ಕೋರ್ಟ್ ತೀರ್ಪು ತಮನ್ನಾ ಪರವಾಗಿಯೇ ಬಂತು. ಈ ಪ್ರಪಂಚದಲ್ಲಿ ಪ್ರತಿ ಹೆಜ್ಜೆಗೂ ಮೋಸ ಮಾಡುವವರು ಇರುತ್ತಾರೆ ಅನ್ನೋದು ಪ್ರತಿಯೊಬ್ಬರೂ ಗಮನಿಸಬೇಕಾದ ವಿಷಯ.

WhatsApp Group Join Now
Telegram Group Join Now

Leave a Reply