ಸಲ್ಮಾನ್ ದೋಷಿ: ತಲೆ ಮೇಲೆ ಕೈಹೊತ್ತು ಕುಳಿತ ನಿರ್ಮಾಪಕರು – ಬಾಲಿವುಡ್ ನ್ಯೂಸ್

ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂದಿಸಿದಂತೆ ಸಲ್ಮಾನ್ ಖಾನ್ ದೋಷಿ ಎಂದು ಜೋದ್ಪುರ ಸಿಜೆಎಂ ಕೋರ್ಟ್ ಮಹತ್ವದ ತೀರ್ಪಿತ್ತಿದೆ. ವನ್ಯಜೀವಿ ಕಾಯ್ದೆ 51ರಡಿ ನ್ಯಾಯಮೂರ್ತಿ ದೇವಕುಮಾರ್ ಈ ತೀರ್ಪು ನೀಡಿದ್ದಾರೆ. ಸಲ್ಮಾನ್ ಖಾನ್ ಗೆ ಜೈಲು ಶಿಕ್ಷೆ ಪ್ರಮಾಣ ಪ್ರಕಟವಾಗಿಲ್ಲ. ಸದ್ಯ ಸಲ್ಮಾನ್ ಖಾನ್ ಗೆ ಜಾಮೀನು ಸಿಗುವ ಸಾಧ್ಯತೆ ಕಡಿಮೆಯಿದೆ. ಇಂದು ಸಲ್ಮಾನ್ ಜೈಲಿನಲ್ಲಿಯೇ ಕಾಲ ಕಳೆಯಬೇಕಾಗುತ್ತದೆ. ನಂತ್ರ ಸಲ್ಮಾನ್ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.
ಸಲ್ಮಾನ್ ದೋಷಿ ಎಂಬ ತೀರ್ಪು ಸಲ್ಮಾನ್ ಖಾನ್ ವೈಯಕ್ತಿಕ ಜೀವನದ ಮೇಲೊಂದೇ ಅಲ್ಲ ವೃತ್ತಿ ಬದುಕಿನ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ. ಸಲ್ಮಾನ್ ನಂಬಿ ಅನೇಕ ನಿರ್ಮಾಪಕರು ಕೋಟ್ಯಾಂತರ ರೂಪಾಯಿ ಹಣ ತೊಡಗಿಸಿ ಚಿತ್ರ ಮಾಡ್ತಿದ್ದಾರೆ. ಇದೆಲ್ಲದಕ್ಕೂ ಈಗ ಫುಲ್ ಸ್ಟಾಪ್ ಬೀಳಲಿದೆ.
ಸಲ್ಮಾನ್ ಖಾನ್ ಸದ್ಯ ‘ರೇಸ್ 3’ ಚಿತ್ರದ ಶೂಟಿಂಗ್ ಮಾಡ್ತಿದ್ದರು. ರೆಮೋ ಡಿಸೋಜಾ ನಿರ್ದೇಶನದಲ್ಲಿ ನಡೆಯುತ್ತಿದ್ದ ಈ ಚಿತ್ರಕ್ಕೆ 100 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ. ಸಲ್ಮಾನ್ ಶಿಕ್ಷೆ ನಿರ್ಮಾಪಕರಿಗೆ ಸಂಕಟ ತಂದಿದೆ. ಚಿತ್ರದ ಚಿತ್ರೀಕರಣ ಶೇಕಡಾ 90ರಷ್ಟು ಮುಗಿದಿತ್ತು.
‘ರೇಸ್ 3’ ಜೊತೆ ಸಲ್ಮಾನ್ ‘ಭಾರತ್’ ಹೆಸರಿನ ಚಿತ್ರವೊಂದರಲ್ಲಿ ನಟಿಸ್ತಿದ್ದಾರೆ. ಕೊರಿಯನ್ ಚಿತ್ರದ ಹಿಂದಿ ರಿಮೇಕ್ ಇದಾಗಿದೆ. ಸಲ್ಮಾನ್ ಜೈಲಿಗೆ ಹೋಗೋದ್ರಿಂದ ಈ ಚಿತ್ರದ ಚಿತ್ರೀಕರಣ ಕೂಡ ನಡೆಯೋದಿಲ್ಲ. ‘ಏಕ್ತಾ ಟೈಗರ್ 2’ ಹಾಗೂ ‘ದಸ್ ಕಾ ಧಮ್’ ಚಿತ್ರದ ಶೂಟಿಂಗ್ ಕೂಡ ನಡೆಯುತ್ತಿದೆ. ಸಲ್ಲು ಜೈಲಿಗೆ ಹೋದ್ರೆ ಈ ಚಿತ್ರದ ಚಿತ್ರೀಕರಣ ಸಂಪೂರ್ಣ ಬಂದ್ ಆಗಲಿದ್ದು, ನಿರ್ಮಾಪಕರಿಗೆ ನಷ್ಟವಾಗಲಿದೆ.
‘ದಬಾಂಗ್ 3’ ಚಿತ್ರದಲ್ಲೂ ಸಲ್ಮಾನ್ ನಟಿಸಬೇಕಿತ್ತು. ವರ್ಷದ ಕೊನೆಯಲ್ಲಿ ಸಲ್ಮಾನ್ ಚಿತ್ರದ ಶೂಟಿಂಗ್ ಶುರು ಮಾಡುವವರಿದ್ದರು. ಇದಕ್ಕೂ ಬ್ರೇಕ್ ಬೀಳಲಿದೆ. ಸಲ್ಮಾನ್ ಖಾನ್ ‘ಬಿಗ್ ಬಾಸ್ 12’ ರಲ್ಲಿ ಕಾಣಿಸಿಕೊಳ್ಳುವುದಿಲ್ಲ. ಹಾಗಾಗಿ ಬಿಗ್ ಬಾಸ್ 12ಗೆ ಬೇರೆ ನಟರ ಹುಡುಕಾಟ ನಡೆಸಬೇಕು,

Leave a Reply