ಸಂಪ್ರದಾಯದಡಿ ಹೆಣ್ಣಿನ ಜನನಾಂಗಕ್ಕೆ ಕತ್ತರಿ – ಜೀವನಶೈಲಿ

ವಿಶ್ವದಾದ್ಯಂತ ಚಿತ್ರ-ವಿಚಿತ್ರ ಪದ್ಧತಿ, ಸಂಪ್ರದಾಯಗಳು ಜಾರಿಯಲ್ಲಿವೆ. ಕೆಲ ಪದ್ಧತಿಗಳು ಆಶ್ಚರ್ಯ ಹುಟ್ಟಿಸಿದ್ರೆ ಮತ್ತೆ ಕೆಲ ಪದ್ಧತಿಗಳು ದಂಗಾಗಿಸುತ್ತವೆ. ಭಯ ಹುಟ್ಟಿಸುವಂತಹ ಪದ್ಧತಿಯೊಂದು ವಿಶ್ವದ ಅನೇಕ ಕಡೆಗಳಲ್ಲಿದೆ. ಆಶ್ಚರ್ಯವೆಂದ್ರೆ ಭಾರತದ ಅನೇಕ ಕಡೆಯೂ ಮಹಿಳೆಯರ ಜನನಾಂಗ ಕತ್ತರಿಸುವ ಪದ್ಧತಿಯಿದೆ.

ಮಹಿಳೆಯರು ಮದುವೆ ನಂತ್ರ ಗಂಡನಿಗೆ ನಿಷ್ಠೆಯಿಂದ ಇರ್ತಾಳೆ. ಮನೆಯಿಂದ ಹೊರಗೆ ಹೋಗಲ್ಲ ಎಂದು ನಂಬಲಾಗಿದೆ. ರೇಸರ್ ಬ್ಲೇಡ್ ನಿಂದ ಮಹಿಳೆ ಜನನಾಂಗ ಕತ್ತರಿಸುವ ಪದ್ಧತಿ ಈಗ್ಲೂ ಚಾಲ್ತಿಯಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಇದ್ರಿಂದ ನಾಲ್ಕು ರೀತಿಯ ಅಪಾಯ ಕಾಡುವ ಸಾಧ್ಯತೆಯಿರುತ್ತದೆ.

WhatsApp Group Join Now
Telegram Group Join Now

ರೇಸರ್ ಬ್ಲೇಡ್ ಬಳಸಿ ಈ ಕೆಲಸ ಮಾಡುವುದ್ರಿಂದ ಜನನಾಂಗ ಪೂರ್ತಿ ಕತ್ತರಿಸುವ ಸಾಧ್ಯತೆಯಿರುತ್ತದೆ. ಸ್ವಲ್ಪ ಕತ್ತರಿಸುವುದು, ಯೋನಿ ಹೊಲಿಗೆ ಹಾಗೂ ಚುಚ್ಚುವಿಕೆ ತೀವ್ರ ನೋವನ್ನುಂಟು ಮಾಡುತ್ತದೆ. ಕೆಲ ಯುವತಿಯರು ಸೋಂಕಿಗೊಳಗಾಗಿ ಜೀವನವನ್ನು ಅಪಾಯಕ್ಕೆ ದೂಡುತ್ತಾರೆ.

ವಿಶ್ವದ ಅನೇಕ ಕಡೆ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಬಹುತೇಕ ಭಾಗಗಳಲ್ಲಿ ಜನನಾಂಗ ಕತ್ತರಿಸುವ ಪದ್ಧತಿಗೆ ಬ್ರೇಕ್ ಬಿದ್ದಿದೆ. ಭಾರತದ dawoodi bohra ಜನಾಂಗದ ಮಹಿಳೆಯರು ಈ ಪದ್ಧತಿಗೆ ಕಡಿವಾಣ ಹಾಕುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ. ಈ ಪದ್ಧತಿಗೆ ಯಾವುದೇ ಕಾನೂನಿಲ್ಲ. dawoodi bohra ಜನಾಂಗದಲ್ಲಿ ಈಗ್ಲೂ ಈ ಪದ್ಧತಿ ಜಾರಿಯಲ್ಲಿದೆ.

WhatsApp Group Join Now
Telegram Group Join Now

Leave a Reply