ಶಾಸ್ತ್ರೀ ಚಿತ್ರದ ನಟಿ ಮಾನ್ಯ ಈಗ ಆಫೀಸ್ ನಲ್ಲಿ ಮಾಡುತ್ತಿರುವ ಕೆಲಸ ಏನು ಗೊತ್ತಾ.?

ವಿಷ್ಣುವರ್ಧನ್, ಅಂಬಿ ಮತ್ತು ದರ್ಶನ್ ಜೊತೆ ಶಾಸ್ತ್ರೀ ಚಿತ್ರ ಸೇರಿ ಸುಮಾರು 10 ಕನ್ನಡ ಚಿತ್ರಗಳಲ್ಲಿ ನಟಿಸಿದ ನಟಿ ಮಾನ್ಯ, ತನ್ನ ಮುಗ್ದ ಮಾತು ಮತ್ತು ನಟನೆಯಿಂದ ಕನ್ನಡಿಗರ ಮನದಲ್ಲಿ ನೆಲೆಸಿದ್ದರು. ಆದ್ರೆ, ಈಗ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಗೊತ್ತಾ.?

ನಟಿ ಮಾನ್ಯ ತಂದೆ ಇಂಗ್ಲೆಂಡ್ ನಲ್ಲಿ ಡಾಕ್ಟರ್ ಆಗಿದ್ದರು, ಹಾಗಾಗಿ ಬೆಳೆದದ್ದು ಇಂಗ್ಲೆಂಡ್ನಲ್ಲಿಯೇ, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಕೆಲವೊಂದು ವರ್ಷ ಬೇಡಿಕೆಯ ನಟಿಯಾಗಿದ್ದ ಮಾನ್ಯ, ನಂತರ ಚಿತ್ರರಂಗದಿಂದ ದೂರ ಸರಿದರು.

2008 ರಲ್ಲಿ ಸತ್ಯ ಭಟ್ ರನ್ನು ಮದುವೆಯಾದ ಮಾನ್ಯ. 2012 ರಲ್ಲಿ ಆತನಿಗೆ ವಿಚ್ಛೇದನ ಕೊಟ್ಟಳು, ನಂತರ ಉತ್ತರ ಭಾರತಕ್ಕೆ ಸೇರಿದ ವಿಕಾಸ್ ವಾಜಪೆಯ್ ರನ್ನು ಮದುವೆವದರು, ಇವರಿಗೆ ಒಂದು ಮಗು ಕೂಡ ಇದ್ದು, ಈಗ ಅಮೇರಿಕಾದಲ್ಲಿ ನೆಲೆಸಿದ್ದಾರೆ.

MBA ಮಾಡಿರುವ ಮಾನ್ಯ, JP morgan ಕಂಪನಿಯಲ್ಲಿ HR ವಿಭಾಗದಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. 40 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಈ ನಟಿ, ಈಗ ಬೆಳಗ್ಗೆಯಿಂದ ಸಾಯಂಕಾಲದ ವೆರೆಗೆ ಆಫೀಸ್ ಕೆಲಸ ಮಾಡುತ್ತಾ ಗಂಡನೊಂದಿಗೆ ಸಂತೋಷವಾಗಿದ್ದಾರೆ.

ವಿದ್ಯೆ ಅನ್ನೋದು ಬಹುಮುಖ್ಯ, ಚಿತ್ರರಂಗ ಜೀವನ ಪೂರ್ತಿ ಯಾರ ಕೈ ಹಿಡಿಯುವುದಿಲ್ಲ. ಆದ್ರೆ ವಿದ್ಯೆ? ಸಾಯುವವರೆಗೂ ನಮ್ಮ ಕೈ ಹಿಡಿಯುತ್ತದೆ. ಕಷ್ಟ ಆದರೂ ಆಫೀಸ್ ಕೆಲಸ ಮಾಡಿ ಬದುಕುತ್ತಿರುವ ಮಾನ್ಯ ಅವರ ಗುಣಕ್ಕೆ ಮೆಚ್ಚಲೇಬೇಕು ಅಲ್ವಾ.

Leave a Reply