ವಿವಾಹಕ್ಕೂ ಮುನ್ನ ಗರ್ಭಿಣಿಯಾದ ಬಾಲಿವುಡ್ ತಾರೆಯರು.

ಬಾಲಿವುಡ್ ಚಿತ್ರರಂಗದ ಬಹಳಷ್ಟು ನಟಿಯರು ಅಫೇರ್ ಗಳನ್ನಿಟ್ಟುಕೊಳ್ಳುವುದು ಹೊಸದೇನಲ್ಲ. ಕೆಲ ಅಫೇರ್ ಗಳು ಅಷ್ಟೇ ಬೇಗನೆ ಅಂತ್ಯಗೊಳ್ಳುತ್ತದೆ. ಅನೇಕ ತಾರೆಯರು ತಾವು ಪ್ರೀತಿಸಿದವರೊಂದಿಗೆ ಸಂಬಂಧವನ್ನಿಟ್ಟುಕೊಂಡು ಗರ್ಭಿಣಿಯಾದ ಬಳಿಕ ತರಾತುರಿಯಲ್ಲಿ ವಿವಾಹವಾಗಿರುವ ಬಹಳಷ್ಟು ಉದಾಹರಣೆಗಳಿದ್ದು, ಅವುಗಳಲ್ಲಿ ಕೆಲ ಸೆಲೆಬ್ರಿಟಿಗಳ ವಿವರ ಇಲ್ಲಿದೆ ನೋಡಿ.

ಬಾಲಿವುಡ್ ನಲ್ಲಿ ಮದುವೆಗೂ ಮುನ್ನ ತಾನು ಗರ್ಭಿಣಿಯಾಗಿದ್ದೇನೆ ಎಂದು ಪ್ರಥಮವಾಗಿ ಬಹಿರಂಗವಾಗಿ ಘೋಷಿಸಿದ್ದು ನಟಿ ಶ್ರೀದೇವಿ. ಅದಾಗಲೇ ವಿವಾಹವಾಗಿದ್ದ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ನೊಂದಿಗೆ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದ ಶ್ರೀದೇವಿ ಮದುವೆಯಾಗುವ ವೇಳೆ 7 ತಿಂಗಳ ಗರ್ಭಿಣಿಯಾಗಿದ್ದರು.

ಇವರ ವಿವಾಹದ ಕೆಲವೇ ತಿಂಗಳಲ್ಲಿ ಮಗಳು ಜಾಹ್ನವಿ ಜನಿಸಿದಳು.

ಕೊಂಕಣ ಸೇನ್ ಕೂಡ ತಾನು ಗರ್ಭಿಣಿಯಾಗಿರುವುದನ್ನು ಮೊದಲು ಘೋಷಣೆ ಮಾಡಿ ನಂತರ ತಾನು ಪ್ರೀತಿಸಿದ್ದ ರಣವೀರ್ ಶೋರೆ ಜೊತೆ ವಿವಾಹವಾದರು. ಇನ್ನು ಕಮಲ್ ಹಾಸನ್ ಮಾಜಿ ಪತ್ನಿ ಸಾರಿಕಾ ಮಗಳು ಜನಿಸಿದ ನಂತರ ಕಮಲ್ ಹಾಸನ್ ಅವರೊಂದಿಗೆ ವಿವಾಹವಾದರು. ಹಾಗೆಯೇ ಅನುಷ್ಕಾ ಶಂಕರ್ ತಾನು ಪ್ರೀತಿಸಿದ್ದ ಜೋ ರೈಟ್ ಜೊತೆ ಮಗು ಜನಿಸಿದ ತಿಂಗಳ ಬಳಿಕ ವಿವಾಹ ಬಂಧನಕ್ಕೊಳಗಾದರು.

ಬಾಲಿವುಡ್ ನಲ್ಲಿ ಆಶ್ಚರ್ಯ ಹುಟ್ಟಿಸಿದ್ದ ಮದುವೆಯೆಂದರೇ ನಟಿ ಅಮೃತಾ ಆರೋರರದ್ದು. ಬಾಲಿವುಡ್ ನ ತನ್ನ ಅತ್ಯಂತ ಆತ್ಮೀಯರಿಗೂ ಸುಳಿವು ಕೊಡದೆ ತರಾತುರಿಯಲ್ಲಿ ಶಕೀಲ್ ಜೊತೆ ಮದುವೆಯಾಗಿದ್ದು ಆಮೇಲೆ ತಿಳಿದುಬಂದ ಸಂಗಾತಿಯೆಂದರೇ ಅಮೃತಾ ಗರ್ಭವತಿಯಾಗಿದ್ದ ಕಾರಣ ಇಷ್ಟು ತರಾತುರಿ ಮಾಡಬೇಕಾಯಿತೆಂದು.

ಈ ಪಟ್ಟಿಯಲ್ಲಿ ಸೆಲಿನಾ ಜೇಟ್ಲಿ, ಮಹಿಮಾ ಚೌಧರಿ ಮೊದಲಾದವರಿದ್ದು ಮುಂದೆಯೂ ಈ ಪಟ್ಟಿ ಬೆಳೆಯುತ್ತಾ ಹೋಗುವುದರಲ್ಲೇನು ಆಶ್ಚರ್ಯವಿಲ್ಲ. ಬಾಲಿವುಡ್ ನಲ್ಲಿ ಈಗ ಲಿವಿಂಗ್ ಟುಗೆದರ್ ಸಂಸ್ಕೃತಿಯೂ ಆರಂಭವಾಗಿದ್ದು, ಆದರೆ ಕೆಲ ಸಂಬಂಧಗಳು ದೀರ್ಘ ಕಾಲದ ಜೊತೆಯ ಬಳಿಕವೂ ಅಂತ್ಯಗೊಂಡಿದೆ.

Leave a Reply