ವಿಪಕ್ಷಗಳ ಒಗ್ಗಟ್ಟಿಗೆ ಮೋದಿ ಸರ್ಕಾರ ಇಂದೇ ಉರುಳುತ್ತಾ?! – ರಾಷ್ಟ್ರೀಯ ಸುದ್ದಿ

ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ವೈಎಸ್ ಆರ್ ಕಾಂಗ್ರೆಸ್ ನೇತೃತ್ವದಲ್ಲಿ ಮಂಡಿಸಲಿರುವ ಅವಿಶ್ವಾಸ ಮತಕ್ಕೆ ಎಲ್ಲಾ ವಿಪಕ್ಷಗಳು ಒಗ್ಗಟ್ಟಾಗಿವೆ.

ವೈಎಸ್ ಆರ್ ಅವಿಶ್ವಾಸ ನಿರ್ಣಯಕ್ಕೆ ಟಿಡಿಪಿ, ಎಸ್ ಪಿ, ಟಿಎಂಸಿ, ಆರ್ ಜೆಡಿ, ಕಾಂಗ್ರೆಸ್ ಸೇರಿದಂತೆ ಬಹುತೇಕ ವಿಪಕ್ಷಗಳು ಬೆಂಬಲ ಸೂಚಿಸಿವೆ. ಈ ಎಲ್ಲಾ ಪಕ್ಷಗಳು ತಮ್ಮ ಸಂಸದರಿಗೆ ವಿಪ್ ಜಾರಿ ಮಾಡಿದ್ದು, ಕೇಂದ್ರ ಸರ್ಕಾರದ ವಿರುದ್ಧ ಮತ ಚಲಾಯಿಸಲಿವೆ.

ಆದರೆ ಅತ್ತ ಬಿಜೆಪಿ ಸರ್ಕಾರಕ್ಕೆ ಯಾವುದೇ ಭಯವಿಲ್ಲ ಎಂದಿದ್ದಾರೆ. ಎನ್ ಡಿಎ ಮೈತ್ರಿಕೂಟದಲ್ಲಿ ಬಿಜೆಪಿ ಸಂಸದರ ಸಂಖ್ಯೆಯೇ 273 ರಷ್ಟಿದೆ. ಇದಲ್ಲದೆ, ಶಿವಸೇನೆ ತಟಸ್ಥವಾಗಿರಲು ತೀರ್ಮಾನಿಸಿದೆ. ಅಕಾಲಿದಳ, ಜೆಡಿಯು ಅವಿಶ್ವಾಸ ಮತ ಬೆಂಬಲಿಸದೇ ಇರಲು ತೀರ್ಮಾನಿಸಿದೆ. ಅಂತೂ ಕೇಂದ್ರ ಸರ್ಕಾರಕ್ಕೆ ಇಂದು ಅಗ್ನಿ ಪರೀಕ್ಷೆ ಖಚಿತ.

Leave a Reply