ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಹಾಸ್ಟೆಲ್ ವಾರ್ಡನ್, ಕಾರಣ ಗೊತ್ತಾ?

ಹಾಸ್ಟೆಲ್ ಕಾರಿಡಾರ್ ನಲ್ಲಿ ಬಳಸಿ ಬಿಸಾಡಿದ ಸ್ಯಾನಿಟರಿ ನ್ಯಾಪ್ಕಿನ್ ಪತ್ತೆಯಾಗಿದ್ದಕ್ಕೆ ಹಾಸ್ಟೆಲ್  ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿ ಪರಿಶೀಲನೆ ನಡೆಸಲಾಗಿದೆ. ಸಾಗರ್ ನಲ್ಲಿರೋ ಡಾ.ಎಚ್.ಎಸ್.ಗೌರ್ ಸೆಂಟ್ರಲ್ ಯೂನಿವರ್ಸಿಟಿ ಹಾಸ್ಟೆಲ್ ನಲ್ಲಿ ಈ ಕೃತ್ಯ ನಡೆದಿದೆ.

ಈ ಬಗ್ಗೆ ವಿದ್ಯಾರ್ಥಿನಿಯರು ದೂರು ನೀಡಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಲಾಗಿದೆ. ಕಾರಿಡಾರ್ ನಲ್ಲಿ ನ್ಯಾಪ್ಕಿನ್ ಎಸೆದವರು ಯಾರು ಅನ್ನೋದನ್ನು ಪತ್ತೆ ಮಾಡಲು ಮುಂದಾದ ವಾರ್ಡನ್, ಯಾರಿಗೆ ಋತುಸ್ರಾವ ಆಗಿದೆ ಅಂತಾ ಪರಿಶೀಲಿಸಲು ವಿದ್ಯಾರ್ಥಿನಿಯರನ್ನು ವಿವಸ್ತ್ರಗೊಳಿಸಿದ್ದಾರೆ.

ಸುಮಾರು 50 ವಿದ್ಯಾರ್ಥಿನಿಯರು ಈ ಬಗ್ಗೆ ವಿಸಿಗೆ ದೂರು ನೀಡಿದ್ದಾರೆ. ಆದ್ರೆ ವಾರ್ಡನ್ ಈ ಆರೋಪವನ್ನು ಅಲ್ಲಗಳೆಯುತ್ತಿದ್ದಾರೆ. ಈ ಘಟನೆ ಬಗ್ಗೆ ತನಗೆ ಮಾಹಿತಿಯೇ ಇಲ್ಲ ಅಂತಾ ಹೇಳಿದ್ದಾರೆ.

Leave a Reply