ವಾಟ್ಸಪ್ ಬಳಕೆ




ಇತ್ತೀಚೆಗೆ ಸ್ಮಾರ್ಟ್ ಪೋನ್ ಬಳಕೆದಾರರ ಸಂಖ್ಯೆ ಹೆಚ್ಚಿದಂತೆಲ್ಲಾ, ಸಾಮಾಜಿಕ ಜಾಲತಾಣಗಳನ್ನು ಬಳಸುವವರ ಸಂಖ್ಯೆಯೂ ಹೆಚ್ಚಾಗಿದೆ. ಈ ಜಾಲತಾಣಗಳಲ್ಲಿ ವಾಟ್ಸಾಪ್ ಬಳಕೆದಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿದೆ.
ವಾಟ್ಸಾಪ್ ಅನ್ನು ಇನ್ ಸ್ಟಾಲ್ ಮಾಡಿಕೊಂಡ ಸಂದರ್ಭದಲ್ಲಿ ನೀವು ಕಳುಹಿಸಿದ ಸಂದೇಶಗಳು ನಿಮ್ಮ ಸ್ನೇಹಿತರಿಗೆ ಸುರಕ್ಷಿತವಾಗಿ ರವಾನೆಯಾಗುತ್ತವೆ. ಡೇಟಾ ಬೇಸ್ ಗೆ ಬರುವುದಿಲ್ಲ. ನೀವು ಮಾಡಿದ ಚಾಟ್ ಸುರಕ್ಷಿತವಾಗಿರುತ್ತವೆ. ಡೇಟಾ ಬೇಸ್ ನಲ್ಲಿ ಯಾರೂ ನೋಡುವ ಸಾ

ಧ್ಯತೆ ಇಲ್ಲ ಎಂದು ಆಂಡ್ರಾಯಿಡ್ ಫೋನ್ ಗಳಲ್ಲಿ ಇನ್ ಸ್ಟಾಲ್ ಮಾಡಿಕೊಂಡ ಸಂದರ್ಭದಲ್ಲಿ ಸಂದೇಶ ಬರುತ್ತದೆ. ಆದರೆ, ಇದೆಲ್ಲಾ ಸುಳ್ಳು ಎನ್ನಲಾಗಿದೆ.

ಆಂಡ್ರಾಯಿಡ್ ಮತ್ತು ಐಫೋನ್ ಗಳನ್ನು ಬಳಸುವವರು ವಾಟ್ಸಾಪ್ ನಲ್ಲಿ ಸಂದೇಶ ಡಿಲಿಟ್ ಮಾಡಿದರೂ, ಅವು ಡೇಟಾ ಬೇಸ್ ನಲ್ಲಿ ಉಳಿದುಕೊಳ್ಳುತ್ತವೆ. 

ಚಾಟ್ ಕ್ಲಿಯರ್ ಮಾಡಿ, ಡಿಲಿಟ್ ಮಾಡಿದರೂ, ಡೇಟಾ ಬೇಸ್ ನಲ್ಲಿ ಉಳಿಯುತ್ತವೆ. ಹಾಗಾಗಿ, ವಾಟ್ಸಾಪ್ ಸುರಕ್ಷಿತವಲ್ಲ ಎಂದು ಸಾಫ್ಟ್ ವೇರ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಾಟ್ಸಾಪ್ ಚಾಟ್ ಗಳನ್ನು ಸಂಪೂರ್ಣವಾಗಿ ಅಳಿಸಿ ಹಾಕಲು ಮೊಬೈಲ್ ನಿಂದ ವಾಟ್ಸಾಪ್ ಅನ್ ಇನ್ ಸ್ಟಾಲ್ ಮಾಡಿ ಫೋಲ್ಡರ್ ಗಳಲ್ಲಿರುವ ಕುಕೀಸ್ ಗಳನ್ನು ಡಿಲಿಟ್ ಮಾಡಬಹುದಾಗಿದೆ ಎಂದು ಐ ಫೋನ್ ಸುರಕ್ಷತೆ ತಜ್ಞರಾದ ಜೊನಾಥನ್ ಹೇಳಿದ್ದಾರೆ.

* * * * * * *

Leave a Reply