ವಿವಿಧ ಬ್ಯಾಂಕ್ ಗಳಲ್ಲಿ ಸಾವಿರಾರು ಕೋಟಿ ರೂ. ಸಾಲ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಸಾಲದ ದೊರೆ ವಿಜಯ್ ಮಲ್ಯ ಲಂಡನ್ ನಲ್ಲಿ ನೆಲೆಸಿದ್ದಾರೆ.
ಲಂಡನ್ ನಲ್ಲಿಯೇ ವಿಜಯ್ ಮಲ್ಯ 3 ನೇ ಮದುವೆಯಾಗಿದ್ದಾರೆ. ತಮ್ಮ ಬಹುಕಾಲದ ಗೆಳತಿ, ಮಾಜಿ ಗಗನಸಖಿ ಪಿಂಕಿ ಲಾಲ್ವಾನಿ ಅವರನ್ನು ಮಲ್ಯ ಮದುವೆಯಾಗಿದ್ದಾರೆ. ಮಲ್ಯ ಅವರ 2 ನೇ ಪತ್ನಿ ರೇಖಾ ಮಲ್ಯ ಕರ್ನಾಟಕದವರು. ಮಲ್ಯ ಅವರೀಗ ಪಿಂಕಿ ಲಾಲ್ವಾನಿ ಅವರನ್ನು ವರಿಸಿದ್ದಾರೆ.
ಕಿಂಗ್ ಫಿಶರ್ ಏರ್ ಲೈನ್ಸ್ ನಲ್ಲಿ ಗಗನಸಖಿಯಾಗಿದ್ದ ಪಿಂಕಿ ಲಾಲ್ವಾನಿ ಬಹು ಕಾಲದಿಂದ ಮಲ್ಯ ಅವರೊಂದಿಗೆ ವಾಸವಾಗಿದ್ದಾರೆ. ವಿಜಯ್ ಮಲ್ಯ ಬ್ಯಾಂಕ್ ಗಳಿಗೆ ವಂಚಿಸಿದ ಕುರಿತಾಗಿ ತನಿಖಾ ಸಂಸ್ಥೆಗಳು ಕೇಸ್ ದಾಖಲಿಸಿದ್ದು, ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತಾಗಿ ಲಂಡನ್ ಕೋರ್ಟ್ ನಲ್ಲಿ ವಿಚಾರಣೆ ನಡೆಸಲಾಗಿದೆ.