ರಿಲಯನ್ಸ್ ಗೆ ಪ್ರಧಾನಿ ಮೋದಿ ಬಹಿರಂಗ ಬೆಂಬಲ : ಕೇಜ್ರಿವಾಲ್ ಟೀಕೆ

ನವದೆಹಲಿ : ರಿಲಯನ್ಸ್ ಕಂಪನಿಯ ಜಾಹಿರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಛಾಯಾಚಿತ್ರ ಪ್ರಕಟವಾಗಿರುವುದಕ್ಕೆ  ವ್ಯಂಗ್ಯವಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮೋದಿಯವರನ್ನು “ಮಿಸ್ಟರ್ ರಿಲಯನ್ಸ್” ಎಂದು ಕರೆದಿದ್ದಾರೆ.

ಜಿಯೋ ಫೋನ್ ಗಳಿಗೆ ಭಾರಿ ಭಾರಿ ಆಫರ್ ಪ್ರಕಟಿಸಿರುವ ರಿಲಯನ್ಸ್ ಇಂಡಸ್ಟ್ರೀಸ್ಗೆ ಪ್ರಧಾನಿ ಮೋದಿ ಬಹಿರಂಗವಾಗಿ ಬೆಂಬಲ ನೀಡಿದ್ದಾರೆ ಎಂದು ಆರೋಪಿಸಿರುವ ಕೇಜ್ರಿವಾಲ್ “ನೀವು ರಿಲಯನ್ಸ್ ಗೆ ರೂಪದರ್ಶಿಯಾಗಿಯೇ ಇರಿ” ಎಂದು ಪ್ರಧಾನಿಗೆ ಸಲಹೆ ನೀಡಿದ್ದಾರೆ.

ಅಂಬಾನಿಯ ರಿಲಯನ್ಸ್ ಕಂಪನಿಗೆ ರೂಪದರ್ಶಿಯಾದರೆ ನಿಮಗೆ 2019 ರ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ. ಮೋದಿಯವರು ಅಂಬಾನಿಯ ಕಿಸೆಯಲ್ಲಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕೇ? ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

* * * * * * *

Leave a Reply