ಯೋಗ ಡ್ರೆಸ್ ನಲ್ಲೂ ಸಖತ್ ಹಾಟ್ ಆಗಿ ಕಾಣಿಸುವ ಮಲೈಕಾ!

ಬಾಲಿವುಡ್ ನಲ್ಲಿ ಇತ್ತೀಚೆಗೆ ತಾಯಂದಿರು ಚಿರಯವ್ವೌನದಿಂದ ಮಿಂಚುತ್ತಿದ್ದಾರೆ. ಶಿಲ್ಪಾ ಶೆಟ್ಟಿ, ಐಶ್ವರ್ಯಾ, ಟ್ವಿಂಕಲ್ ಖನ್ನಾ, ರವೀನಾ ಟಂಡನ್, ಜೆನಿಲಿಯಾ ಇವರೆಲ್ಲರೂ ಮಕ್ಕಳ ತಾಯಂದಿರಾಗಿದ್ದರೂ ಇಂದಿಗೂ ತಮ್ಮ ಸೌಂದರ್ಯವನ್ನು ಹಾಗೇ ಇಟ್ಟುಕೊಂಡಿದ್ದಾರೆ. ಇದೀಗ ಈ ನಟಿಯರ ಸಾಲಿಗೆ ನಟಿ ಮಲೈಕಾ ಅರೋರಾ ಖಾನ್ ಕೂಡ ಸೇರಿದ್ದಾರೆ.
ಮಲೈಕಾ ಅರೋರಾ ಅವರು ಫಿಟ್‌ನೆಸ್ ವಿಷಯಕ್ಕೆ ಬಂದರೆ, ಹೆಚ್ಚು ಕಟ್ಟುನಿಟ್ಟು. ಆ ಶಿಸ್ತಿನಿಂದಲೇ ಅವರ ದೇಹಸಿರಿ ಇನ್ನು ಕಡೆದಿಟ್ಟ ಶಿಲ್ಪದಂತಿದೆ. ಯೋಗ ತರಗತಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಮಲೈಕಾ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದರು. ರೇಸರ್ ಬ್ಯಾಕ್ ಕ್ರಾಪ್ ಟಾಪ್ ಮತ್ತು ಸ್ಕಿನ್ ಟೈಟ್ ಫುಲ್ ಪ್ಯಾಂಟ್‌ ಧರಿಸಿದ್ದ ಮಲೈಕಾ ಈ ಉಡುಗೆಯಲ್ಲಿ ಸಖತ್ ಸೆಕ್ಸಿಯಾಗಿ ಕಾಣುತ್ತಿದ್ದರು.

Leave a Reply