ಯಾರೇ ನೀನು ಚೆಲುವೆ, ಒಂದು ಕಾಲದಲ್ಲಿ ಸಂಚಲನ ಸೃಷ್ಟಿಸಿದ ಚಿತ್ರ, ಈ ಚಿತ್ರವನ್ನು ನೋಡಿ ತುಂಬಾ ಜನ ಪ್ರೀತಿ ಮಾಡಲು ಶುರು ಮಾಡಿದರು, ಅದರಲ್ಲೂ ನಟಿ ಸಂಗೀತರನ್ನು ಡ್ರೀಮ್ ಗರ್ಲ್ ಅಂತೆ ಊಹಿಸಿಕೊಂಡರು ಯುವಕರು.
ಹಾಗಾದ್ರೆ ನಟಿ ಸಂಗೀತಾ ಈಗ ಎಲ್ಲಿದ್ದಾರೆ? ಏನು ಮಾಡ್ತಿದ್ದಾರೆ ಅನ್ನೋ ಪ್ರಶ್ನೆಗಳು ಹುಟ್ಟುವುದು ಸಹಜ. ದಕ್ಷಿಣ ಭಾರತದ ನಾಲ್ಕೂ ಭಾಷೆಗಳಲ್ಲಿ ನಟಿಸಿದ ಈ ನಟಿ 2000 ರಲ್ಲಿ ಕ್ಯಾಮೆರಾ ಮೆನ್ ಸರವಣನ್ ರನ್ನು ಮದುವೆಯಾದರು.
ಮದುವೆಯಾಗಿದ್ದೆ ತಡ, ನಾನು ಇನ್ನು ಮುಂದೆ ಯಾವ ಚಿತ್ರಗಳಲ್ಲೂ ನಟಿಸಲ್ಲ ಎಂದು ಪ್ರಕಟಿಸಿದರು. ನಟಿ ಸಂಗೀತಾ ಸಿನಿಮಾದಲ್ಲೇ ಅಲ್ಲ , ನಿಜ ಜೀವನದಲ್ಲೂ ತುಂಬಾ ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿರುವ ಹುಡುಗಿ.
ಸಾಮಾನ್ಯ ಜೀವನವನ್ನು ನಡೆಸಲು ಇಚ್ಛಿಸುವ ಈ ನಟಿ, ಯಾವುದೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ತಾನಾಯಿತು ತನ್ನ ಕುಟುಂಬ ಆಯಿತು ಎಂದು ಬದುಕುತ್ತಿದ್ದು, ಆಕೆ ಮಾಡುವ ಕೆಲಸ ಏನು ಗೊತ್ತಾ.?
ಗಂಡ ಯಾವುದಾದರೂ ಸಿನಿಮಾದಲ್ಲಿ ಕ್ಯಾಮೆರಾ ಮೆನ್ ಆಗಿ ಕೆಲಸ ಮಾಡಿದರೆ, ಸಂಗೀತಾ ತನ್ನ ಗಂಡನ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಾರೆ. ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದ ಈ ನಟಿ ಈಗ ಕ್ಯಾಮೆರಾ ಹಿಂದೆ ನಿಂತು ಗಂಡನಿಗೆ ಸಹಾಯ ಮಾಡುತ್ತಾರೆ.
ಒಬ್ಬ ಸ್ಟಾರ್ ನಟಿಯಾಗಿ ಮಿಂಚಿದ ಸಂಗೀತಾ, ಅಸಿಸ್ಟೆಂಟ್ ಆಗಿ ಕೆಲಸ ಮಾಡುವುದಕ್ಕೆ ಯಾವುದೇ ಬೇಜಾರಿಲ್ವಂತೆ, ಕಾರಣ, ನಾನು ಕೆಲಸ ಮಾಡುತ್ತಿರುವುದು ನನ್ನ ಗಂಡನ ಅಡಿಯಲ್ಲಿ, ಅದು ನನಗೆ ತುಂಬಾ ಸಂತೋಷ ಕೊಡುತ್ತದೆ ಎನ್ನುತ್ತಾರೆ ಸಂಗೀತಾ.