ಯಶ್ ಬಿಟ್ಟು ಪತ್ನಿ ರಾಧಿಕಾ ಪಂಡಿತ್ ಏಕಾಂಗಿಯಾಗಿ ವಿದೇಶಕ್ಕೆ ಹಾರಿದ್ದೇಕೆ?!

ನಟಿ ರಾಧಿಕಾ ಪಂಡಿತ್ ಮದುವೆಯಾದ ಮೇಲೆ ಇದೇ ಮೊದಲ ಬಾರಿಗೆ ಪತಿ ಯಶ್ ರಿಂದ ತುಂಬಾ ದಿನ ಒಂಟಿಯಾಗಲಿದ್ದಾರೆ! ಯಶ್ ರನ್ನು ಬಿಟ್ಟು ರಾಧಿಕಾ ಒಬ್ಬರೇ ಅಮೆರಿಕಾಗೆ ಹಾರಿದ್ದಾರೆ! 

ಅದಕ್ಕೆ ಕಾರಣ ಅಮ್ಮ! ರಾಧಿಕಾ ಸಹೋದರ ಅಮೆರಿಕಾದಲ್ಲೇ ನೆಲೆಸಿದ್ದಾರೆ. ಅವರ ಜತೆಗಿರುವ ಅಮ್ಮನನ್ನು ನೋಡಲು ರಾಧಿಕಾ ಕೂಡಾ ಕೆಲ ದಿನಗಳ ಮಟ್ಟಿಗೆ ವಿದೇಶಕ್ಕೆ ಹಾರಿದ್ದಾರೆ.   ಚಿಕಾಗೋ ವಿಮಾನ ನಿಲ್ದಾಣದಲ್ಲಿ ಒಬ್ಬರೇ ನಿಂತಿರುವ ಫೋಟೋವನ್ನು ಹಾಕಿರುವ ರಾಧಿಕಾ, 22 ದಿನ ಅಲ್ಲಿಯೇ ಕಾಲ ಕಳೆಯಲಿದ್ದಾರಂತೆ.

ನನ್ನ ಜೀವನದ ಉಳಿದ ಭಾಗವನ್ನು ಕೊನೆಗೂ ಕಂಡುಕೊಂಡೆ. ಆದರೂ ನನ್ನ ಪತಿಯನ್ನು 22 ದಿನ ಮಿಸ್ ಮಾಡಿಕೊಳ್ಳಲಿದ್ದೇನೆ ಎಂದು ರಾಧಿಕಾ ಬರೆದುಕೊಂಡಿದ್ದಾರೆ. ಅಂತೂ ರಾಧಿಕಾ ಇಲ್ಲದೇ ಯಶ್ ಗೆ ಈಗ ವಿರಹಾ… ನೋವು ನೂರು ತರಹಾ…! 

Leave a Reply