ಮೂಗುತಿ ಸುಂದರಿಯಾದ ನಟಿ ರಚಿತಾ ರಾಮ್

ಕೆಲವು ನಟಿಯರ ಮೂಗಿಗೆ ಚಂದದ ಮೂಗುತಿ ಇದ್ದರೆ, ಅವರ ಸೌಂದರ್ಯ ಇನ್ನಷ್ಟು ಹೆಚ್ಚಾಗುತ್ತಿದೆ. ಕನ್ನಡದ ಅನೇಕ ನಟಿಯರು ಮೂಗುತಿ ಧರಿಸಿ ಮೂಗುತಿ ಸುಂದರಿಯರಾಗಿ ಮಿಂಚಿದ್ದಾರೆ.
ಇದೀಗ ನಟಿ ರಚಿತಾ ರಾಮ್ ಕೂಡ ಈಗ ಮೂಗುತಿ ಸುಂದರಿಯಾಗಿದ್ದಾರೆ. ಮುದ್ದಾದ ಮೂಗುತಿ ಜೊತೆಗೆ ರಚಿತಾ ಒಂದು ಫೋಟೋ ತಗೆದುಕೊಂಡಿದ್ದಾರೆ. ರಚಿತಾ ಅವರ ಈ ಹೊಸ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅವರ ಅಭಿಮಾನಿಗಳು ಹಂಚಿಕೊಂಡಿದ್ದಾರೆ.

ರಚಿತಾ ಆಗಾಗ ಬೇರೆ ಬೇರೆ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಈಗ ಮೂಗುತಿ ಅವರಿಗೆ ಹೊಸ ಲುಕ್ ನೀಡಿದೆ. ರಚಿತಾ ಸೌಂದರ್ಯ ಮತ್ತಷ್ಟು ಜಾಸ್ತಿಯಾಗಿದೆ.
ಈ ಹಿಂದೆ ಶ್ರದ್ಧಾ ಶ್ರೀನಾಥ್, ರಶ್ಮಿಕಾ ಮಂದಣ್ಣ, ಶ್ರುತಿ ಹರಿಹರನ್ ಸೇರಿದಂತೆ ಅನೇಕ ನಟಿಯರು ಡಿಫರೆಂಟ್ ಮೂಗುತಿಗಳ ಮೂಲಕ ಗಮನ ಸೆಳೆದಿದ್ದರು. ಅಂದಹಾಗೆ, ರಚಿತಾ ರಾಮ್ ‘ಐ ಲವ್ ಯು’ ಸಿನಿಮಾದ ಬಳಿಕ ‘ರುಸ್ತುಂ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ರುಸ್ತುಂ’ ಸಿನಿಮಾದ ಅವರ ಪಾತ್ರಕ್ಕೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿದೆ.

Leave a Reply