ಉದ್ಯಮಿ ಮುಖೇಶ್ ಅಂಬಾನಿ ಹಿರಿಯ ಪುತ್ರ ಆಕಾಶ್ ಅಂಬಾನಿ ಸದ್ಯವೇ ಶ್ಲೋಕಾ ಮೆಹ್ತಾ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಮಾರ್ಚ್ 24ರಂದು ಗೋವಾದಲ್ಲಿ ಪ್ರೋ ಎಂಗೇಜ್ಮೆಂಟ್ ಕಾರ್ಯಕ್ರಮ ನಡೆಯಿತು. ಮುಖೇಶ್ ಅಂಬಾನಿ ಕುಟುಂಬ ನಿಶ್ಚಿತಾರ್ಥಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ತಿದೆ.
ಆಕಾಶ್ ಅಂಬಾನಿ ಕೈ ಹಿಡಿಯಲಿರುವ ಶ್ಲೋಕಾ ಮೆಹ್ತಾ ಜುಲೈ 11, 1990ರಲ್ಲಿ ಜನಿಸಿದ್ದು, ಮುಂಬೈನ ಮಲಬಾರ್ ನಿವಾಸಿಯಾಗಿದ್ದಾರೆ. ಉದ್ಯಮಿ ರಸೆಲ್ ಮೆಹ್ತಾ ಚಿಕ್ಕ ಮಗಳು ಶ್ಲೋಕಾ. ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲಿನಲ್ಲಿ ಆಕಾಶ್ ಹಾಗೂ ಶ್ಲೋಕಾ ಒಟ್ಟಿಗೆ ವಿದ್ಯಾಭ್ಯಾಸ ಮಾಡಿದ್ದರು.
ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತ್ರ ಶ್ಲೋಕಾ 2009ರಲ್ಲಿ ನ್ಯೂಜೆರ್ಸಿಯ ಪ್ರಿನ್ಸ್ಟನ್ ವಿಶ್ವವಿದ್ಯಾನಿಲಯದಲ್ಲಿ ಮುಂದಿನ ವಿದ್ಯಾಭ್ಯಾಸ ಮುಗಿಸಿದ್ರು. ಇದಾದ ನಂತ್ರ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಪಾಲಿಟಿಕ್ಸ್ ಸೈನ್ಸ್ ನಲ್ಲಿ ಕಾನೂನು ವಿಭಾಗದಲ್ಲಿ ಮಾಸ್ಟರ್ ಡಿಗ್ರಿ ಪಡೆದ್ರು. 2014ರಿಂದ ಶ್ಲೋಕಾ ಮೆಹ್ತಾ ರೋಜಿ ಬ್ಲೂ ಫೌಂಡೇಶನ್ ನಿರ್ದೇಶಕರಾಗಿದ್ದಾರೆ.
ಶ್ಲೋಕಾ ConnectFor ಸಹ ಸಂಸ್ಥಾಪಕರೂ ಹೌದು. ಎನ್ ಜಿ ಒ ಜೊತೆ ಒಂದಾಗಿ ಕಂಪನಿ ಕೆಲಸ ಮಾಡ್ತಿದೆ. ಈ ವರ್ಷದ ಕೊನೆಯಲ್ಲಿ ಮದುವೆ ನಡೆಯಲಿದೆ ಎನ್ನಲಾಗ್ತಿದೆ. ಮುಂಬೈನಲ್ಲಿ ಅದ್ಧೂರಿಯಾಗಿ ಮದುವೆ ನಡೆಯಲಿದೆ.