ಎಪ್ರಿಲ್ ಫೂಲ್ ಹೆಸರಲ್ಲಿ ಶುರುವಾದ ಹೊಸ ಟ್ರೆಂಡ್ ಇದು. ‘ಕಾಂಡೋಮ್ ಸ್ನೊರ್ಟಿಂಗ್ ಚಾಲೆಂಜ್’. 2013ರಲ್ಲಿ ಮೊದಲ ಬಾರಿಗೆ ಇದು ಪ್ರಚಲಿತಕ್ಕೆ ಬಂದಿತ್ತು. ಈಗ ಮತ್ತೆ ವೈರಲ್ ಆಗಿದೆ. ತುಂಬಾನೇ ಅಪಾಯಕಾರಿಯಾದ, ವಿಚಿತ್ರ ಸವಾಲು ಇದು ಅನ್ನೋದರಲ್ಲಿ ಅನುಮಾನವೇ ಇಲ್ಲ.
ಕಾಂಡೋಮ್ ಒಂದನ್ನು ಮೂಗಿನ ಹೊಳ್ಳೆಯ ಮೂಲಕ ಒಳಕ್ಕೆ ಎಳೆದುಕೊಂಡು ಬಾಯಿಯಿಂದ ಹೊರತೆಗೆಯುವ ಚಾಲೆಂಜ್ ಇದು. ಈ ಸವಾಲನ್ನು ಪೂರೈಸಿದವರೆಲ್ಲ ಅದನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡು, ಜಾಲತಾಣಗಳಲ್ಲಿ ಅಪ್ಲೋಡ್ ಮಾಡ್ತಾರೆ.
ಹೆಚ್ಹೆಚ್ಚು ಲೈಕ್ಸ್, ಸಬ್ ಸ್ಕ್ರೈಬ್ಸ್ ಹಾಗೂ ವ್ಯೂಸ್ ಬರಲಿ ಅನ್ನೋ ಕಾರಣಕ್ಕೆ ಯುವ ಜನತೆ ಇದನ್ನು ಮಾಡ್ತಿದ್ದಾರೆ. ಮಕ್ಕಳಿಗೂ ಈ ಹುಚ್ಚು ಸಾಹಸದ ಕ್ರೇಝ್ ಶುರುವಾಗಿದೆ. ಆದ್ರೆ ಈ ರೀತಿ ಮಾಡುವುದರಿಂದ ಇನ್ಫೆಕ್ಷನ್ ಆಗುವ ಸಾಧ್ಯತೆ ಇರುತ್ತದೆ.
ಕಾಂಡೋಮ್ ಏನಾದ್ರೂ ಮೂಗಿನಲ್ಲಿ ಸಿಕ್ಕಿಹಾಕಿಕೊಂಡ್ರೆ ಪ್ರಾಣಕ್ಕೇ ಅಪಾಯ ಉಂಟಾಗಬಹುದು. 27 ವರ್ಷದ ಮಹಿಳೆಯೊಬ್ಬಳು ಇದೇ ರೀತಿ ಮೂಗಿನ ಮೂಲಕ ಕಾಂಡೋಮ್ ಸೇದಿದ್ರಿಂದ ಅದು ಮಧ್ಯದಲ್ಲಿ ಸಿಕ್ಕಿಹಾಕಿಕೊಂಡು ಆಕೆಯ ಶ್ವಾಸಕೋಶಕ್ಕೆ ಹಾನಿಯಾಗಿದೆ.