ಮಗುವಿಗೆ ಹಾಲು ಕೊಂಡುಕೊಳ್ಳಲು ಹಣವಿಲ್ಲದೇ ಒದ್ದಾಡಿದ ಕನ್ನಡದ ದೊಡ್ಡ ನಟಿ !

ದಕ್ಷಿಣ ಭಾರತದಲ್ಲಿ ಮದುವೆಯಾದ ನಟಿಯರಿಗೆ ಅಷ್ಟೊಂದು ಅವಕಾಶಗಳು ಬರುವುದಿಲ್ಲ, ಮದುವೆಯಾದ ಮೇಲೆ ಅವರು ಪೋಷಕ ಪಾತ್ರಗಳಿಗೆ ಮಾತ್ರ ಹೆಚ್ಚಾಗಿ ಸೀಮಿತರಾಗುತ್ತಾರೆ, ಆದ್ರೆ ಈ ನಟಿ ಮದುವೆಯಾದ ಮೇಲೆಯೇ ಚಿತ್ರರಂಗಕ್ಕೆ ಬಂದರು.  
ಡಾ. ರಾಜ್ ಕುಮಾರ್ ರಿಂದ ಹಿಡಿದು ರವಿಚಂದ್ರನ್ ವರೆಗೂ ನಟಿಸಿದ ನಟಿ ಸಾವಕಾರ್ ಜಾನಕಿ, ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ನಟಿಸಿರುವ ಈ ಅದ್ಬುತ ನಟಿ, ಕನ್ನಡದಲ್ಲಿ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.  
1931ರಲ್ಲಿ ಜನಿಸಿದ ನಟಿ ಜಾನಕಿ, ತನ್ನ 17 ವರ್ಷ ವಯಸ್ಸಿನಲ್ಲಿದ್ದಾಗ ರೇಡಿಯೋದಲ್ಲಿ ಶೋ ಮಾಡಲು ಪ್ರಾರಂಭಿಸಿದರು. ಈಕೆಯ ಕಂಠ ಕೇಳಿ ಮೆಚ್ಚಿ ಕೊಂಡ BN ರೆಡ್ಡಿ, ನಿನಗೆ ಅವಕಾಶ ಕೊಡ್ತೀನಿ ನಟನೆ ಮಾಡ್ತಿಯಾ ಎಂದು ಕೇಳಿದರು.  
ಜಾನಕಿ ಅವರಿಗೆ ತುಂಬಾ ಇಷ್ಟ ಇತ್ತು, ಆದ್ರೆ ಮನೆಯಲ್ಲಿ ಒಪ್ಪಲಿಲ್ಲ, ಇದೇ ಕಾರಣಕ್ಕೆ ತನ್ನ 17 ನೇ ವಯಸ್ಸಿಗೆ ಜಾನಕಿಯವರಿಗೆ ಶ್ರೀನಿವಾಸ್ ರಾವ್ ಅನ್ನೋವ್ರ ಜೊತೆ ಮದುವೆ ಮಾಡಿದರು, ಗಂಡನ ಮನೆಯಲ್ಲಿ ಕಡು ಬಡತನ. 
ಜಾನಕಿಯವರಿಗೆ ಒಂದು ಮಗು ಹುಟ್ಟಿತು. ಆದ್ರೆ ಮಗುವಿಗೆ ಹಾಲು ಕೊಂಡುಕೊಳ್ಳಲು ಸಹ ಕೈಯಲ್ಲಿ ದುಡ್ಡಿರಲಿಲ್ಲ. ಇದರಿಂದ ಒಂದು ನಿರ್ದಾರಕ್ಕೆ ಬಂದ ಜಾನಕಿ, BN ರೆಡ್ಡಿಯವರ ಬಳಿ ಹೋಗಿ, ನನಗೆ ಮದುವೆಯಾಗಿ ಮಗು ಇದೆ, ನನ್ನ ಮಗುವನ್ನು ಪೋಷಣೆ ಮಾಡಬೇಕಿದೆ, ನನಗೆ ಒಂದು ಅವಕಾಶ ಕೊಡಿ ಎಂದರು. 
ಆದ್ರೆ, ಅಷ್ಟೊತ್ತಿಗೆ BN ರೆಡ್ಡಿ ಸಿನಿಮಾ ನಿರ್ಮಾಣವನ್ನು ನಿಲ್ಲಿಸಿದ್ದರು. ಆಗ ಜಾನಕೀ ಅವರಿಗೆ ಅವಕಾಶ ಕೊಟ್ಟಿದ್ದು LV ಪ್ರಸಾದ್, ಅದು ಸಾವಕರ್ ಚಿತ್ರಕ್ಕೆ, ಈ ಚಿತ್ರದ ನಂತರ ಜಾನಕಿ ಅವರು, ಸಾವಕಾರ್ ಜಾನಕಿ ಆದರು. ಅದಾದ ಮೇಲೆ ಸುಮಾರು 400 ಚಿತ್ರಗಳಲ್ಲಿ ನಟಿಸಿದ್ದರು.

Leave a Reply