ಮಂಗಳೂರು ವಿವಿ ವಿಧ್ಯಾರ್ಥಿನಿಯರ ಶೌಚಾಲಯದಲ್ಲಿ ರಹಸ್ಯ ಮೊಬೈಲ್ ಕ್ಯಾಮರಾ ಪತ್ತೆಮಂಗಳೂರು : ಮಂಗಳಗಂಗೋತ್ರಿ ವಿಶ್ವವಿದ್ಯಾಲಯದ (ಮಂಗಳೂರು ವಿವಿ) ವಿಧ್ಯಾರ್ಥಿನಿಯರ ಶೌಚಾಲಯದಲ್ಲಿ ರಹಸ್ಯವಾಗಿ ಮೊಬೈಲ್ ಇಟ್ಟು ಚಿತ್ರೀಕರಿಸಿರುವ ವಿಡಿಯೋಗಳು ಹರಿದಾಡುತ್ತಿರುವ ಅತ್ಯಂತ ಹೇಯ ಮತ್ತು ಕಳವಳಕಾರಿ ವಿಚಾರ ಬೆಳಕಿಗೆ ಬಂದಿದೆ. ಶೌಚಾಲಯದಲ್ಲಿ ರಹಸ್ಯವಾಗಿಟ್ಟಿರುವ ಮೊಬೈಲನ್ನು ಆಗಸ್ಟ್ 24 ರಂದು ವಿಧ್ಯಾರ್ಥಿನಿಯೊಬ್ಬಳು ಪತ್ತೆ ಹಚ್ಚಿ ವಿಶ್ವವಿದ್ಯಾಲಯದ ಗಮನಕ್ಕೆ ತಂದಿದ್ದು, ಈ ಬಗ್ಗೆ ಆಂತರಿಕವಾಗಿ ವಿಶ್ವವಿದ್ಯಾಲಯ ತನಿಖೆ ನಡೆಸಿತ್ತು. ಇಂಟೆಕ್ಸ್ ಕಂಪನಿಗೆ ಸೇರಿದ ಮೊಬೈಲ್ ಇದಾಗಿದ್ದು, ಶೌಚಾಲಯದ ಮೇಲ್ಬಾಗದಲ್ಲಿ ಒಂದು ಹಲಗೆ ಇಟ್ಟು, ಅದಕ್ಕೆ ಮೊಬೈಲ್ ಕ್ಯಾಮರಾಕ್ಕೆ ಬೇಕಾಗುವಷ್ಟು ರಂಧ್ರ ಮಾಡಿ ಪೇಪರ್ ಸುತ್ತಲಾಗಿತ್ತು. ಮೊಬೈಲ್ ಸಿಮ್ ಇದ್ದಿರಲಿಲ್ಲ, ಮೊಬೈಲನ್ನು ವಿಡಿಯೋ ಮೋಡ್ ನಲ್ಲಿರಿಸಿದ ಕಾಮುಕರು ಬ್ಯಾಟರಿ ಪವರ್ ಬ್ಯಾಂಕ್ ಸಹ ಒದಗಿಸಿದ್ದರು.

ಈ ಮೊಬೈಲ್ ನಿಂದ ಆಗಸ್ಟ್ 7 ಮತ್ತು 11 ನೇ ತಾರೀಕಿನಂದು ವಿಡಿಯೋ ಕ್ಲಿಪ್ ಗಳು ಸೆಂಡ್ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕಾಮಾಂಧರು ಗೇಟ್ ಹಾರಿ ಬಂದು ಮೊಬೈಲ್ ಇರಿಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ವಿ ವಿ ಆಂತರಿಕ ತನಿಖೆ ನಡೆಸಿದ್ದು, ಪೊಲೀಸ್ ದೂರು ದಾಖಲಿಸಲಾಗಿಲ್ಲ. ತನಿಖೆಯ ಮಾಹಿತಿ ಪಡೆದು ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಸೈಬರ್ ಕ್ರೈಂ ವಿಭಾಗಕ್ಕೆ ಹಸ್ತಾಂತರಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಈ ವಿದ್ಯಮಾನದಿಂದ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ ನೂರಾರು ವಿಧ್ಯಾರ್ಥಿನಿಯರು ತೀವ್ರ ಕಳವಳಗೊಂಡಿದ್ದಾರೆ.

Leave a Reply