ಬಿ.ಜೆ.ಪಿ. ಟಿಕೆಟ್: ಘಟಾನುಘಟಿ ನಾಯಕರು, ಬೆಂಬಲಿಗರಿಗೆ ಶಾಕ್…! – ಕರ್ನಾಟಕ ನ್ಯೂಸ್

ವಿಧಾನಸಭೆ ಚುನಾವಣೆಗೆ ಬಿ.ಜೆ.ಪಿ. ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, 18 ಮಾಜಿ ಸಚಿವರು, ಇಬ್ಬರು ಸಂಸದರು, ಮೂವರು ವಿಧಾನಪರಿಷತ್ ಸದಸ್ಯರು ಸೇರಿ 72 ಮಂದಿಗೆ ಅವಕಾಶ ನೀಡಲಾಗಿದೆ.
ರಾಜ್ಯದ ನಾಯಕರ ಅಭಿಪ್ರಾಯ ಪಡೆದುಕೊಂಡ ಕೇಂದ್ರ ಬಿ.ಜೆ.ಪಿ. ನಾಯಕರು ತಮ್ಮದೇ ಮೂಲಗಳಿಂದ, ಸರ್ವೇ ಮಾಹಿತಿ ಆಧರಿಸಿ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಘಟಾನುಘಟಿ ನಾಯಕರಿಗೆ ಟಿಕೆಟ್ ಖಚಿತವಾಗಿದ್ದರೂ, ಅವರು ಹೇಳಿದವರಿಗೆ ಕೆಲವು ಕ್ಷೇತ್ರಗಳಲ್ಲಿ ಟಿಕೆಟ್ ಕೈ ತಪ್ಪಿದೆ.
ಬಿ.ಎಸ್. ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ ಮತ್ತು ಜಗದೀಶ್ ಶೆಟ್ಟರ್ ಅವರ ಬೆಂಬಲಿಗರಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್ ಕೈ ತಪ್ಪಿದೆ. ಶಿವಮೊಗ್ಗದ ನಗರ ಕ್ಷೇತ್ರದಲ್ಲಿ ಬಿ.ಎಸ್.ವೈ. ಆಪ್ತ ಎಸ್. ರುದ್ರೇಗೌಡರಿಗೆ ಅವಕಾಶ ಸಿಕ್ಕಿಲ್ಲ. ಕೆ.ಎಸ್. ಈಶ್ವರಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ.
ಈಶ್ವರಪ್ಪ ಅವರ ಬೆಂಬಲಿಗರಾದ ಸೋಮಣ್ಣ ಬೇವಿನ ಮರದ ಅವರಿಗೆ ಶಿಗ್ಗಾಂವಿಯಲ್ಲಿ ಅವಕಾಶ ತಪ್ಪಿದ್ದು, ಅವರು ಪಕ್ಷೇತರರಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ. ಜಗದೀಶ್ ಶೆಟ್ಟರ್ ಅವರ ಬೆಂಬಲಿಗರಾದ ಮಾಜಿ ಶಾಸಕಿ ಸೀಮಾ ಮಸೂತಿ ಅವರಿಗೆ ಟಿಕೆಟ್ ತಪ್ಪಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯ ನಾಯಕರು ಹೇಳಿದವರಿಗೆಲ್ಲಾ ಟಿಕೆಟ್ ನೀಡಿಲ್ಲ. ಘಟಾನುಘಟಿ ನಾಯಕರ ಬೆಂಬಲಿಗರಿಗೇ ಅನೇಕ ಕ್ಷೇತ್ರಗಳಲ್ಲಿ ಟಿಕೆಟ್ ತಪ್ಪಿದೆ.

Leave a Reply