ಬಿಗ್ ಬಾಸ್ – 5 ವಿನ್ನರ್ ಯಾರು ಗೊತ್ತಾ.? 1 2 3 ಸ್ಥಾನ ಯಾರಿಗೆ.?

ಬಿಗ್ ಬಾಸ್ ಕನ್ನಡ ಸೀಸನ್ – 5 ಇನ್ನೇನು 4 ದಿನಗಳಲ್ಲಿ ಮುಗಿಯಲಿದೆ, ಈಗಿರುವ ಯಕ್ಷ ಪ್ರಶ್ನೆ, ವಿನ್ನರ್ ಯಾರಾಗಬಹುದು ಅನ್ನೋದು. ವೀಕ್ಷಕರ ಅಭಿಪ್ರಾಯವನ್ನು ಸಂಗ್ರಹಿಸಿ ಹಾಗು ಸರ್ವೆಯಿಂದ ಹೊರಬಂದ ಮಾಹಿತಿಯ ಪ್ರಕಾರ ಯಾರು ವಿನ್ನರ್ ಆಗಲಿದ್ದಾರೆ ಎಂದು ನೋಡೋಣ ಅಲ್ವಾ.

ಒಬ್ಬ ಸೇಲ್ಸ್ ಮ್ಯಾನ್ ಆಗಿ ಜೀವನ ನಡೆಸುತ್ತಿರುವ ದಿವಾಕರ್, ಬಿಗ್ ಬಾಸ್ ಪ್ರಾರಂಭದಲ್ಲಿ ಹೆಚ್ಚು ಜನರ ಮನಸ್ಸನ್ನು ಗೆದ್ದಿದ್ದರು. ಆದ್ರೆ ಬರ್ತಾ ಬರ್ತಾ ಅವರ ಸಂಖ್ಯೆ ಕಡಿಮೆಯಾಗುತ್ತಾ ಬಂದು, ಜನರಲ್ಲಿ ಮಿಶ್ರ ಪ್ರತಿಕ್ರಿಯೆ ಇದ್ದು, ದಿವಾಕರ್ 3 ನೇ ಸ್ಥಾನ ಗಳಿಸಲಿದ್ದಾರಂತೆ.

ತನ್ನಿಂದ ಸಾಧ್ಯವಾದಷ್ಟು ಮನರಂಜನೆ ಕೊಟ್ಟಿರುವ ಜೆ.ಕೆ. ಎಲ್ಲೋ ಎಲ್ಲಾ ರೀತಿಯ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವುದರಲ್ಲಿ ವಿಫಲರಾಗಿದ್ದು, ಬಿಗ್ ಬಾಸ್ ಸೀಸನ್ -5 ನ 2 ನೇ ಸ್ಥಾನವನ್ನು ಜೆ.ಕೆ.ಗಳಿಸಲಿದ್ದಾರೆ ಅನ್ನೋ ಸ್ಪಷ್ಟ ಮಾಹಿತಿ ಪ್ರೇಕ್ಷಕರಿಂದ ಬಂದಿದೆ.

ಮೊದಲನೆಯ ವಾರದಿಂದ ಜನರನ್ನು ಮನರಂಜಿಸುವುದರಲ್ಲಿ, ಯಾವುದೇ ವಿವಾದಗಳಿಗೆ ಸಿಲುಕದೆ, ಒಳ್ಳೆಯ ಆಟ ಆಡಿದ ಚಂದನ್ ಶೆಟ್ಟಿ ಬಿಗ್ ಬಾಸ್ – 5 ವಿನ್ನರ್ ಆಗಲಿದ್ದಾರೆ ಅನ್ನೋದು 70% ಕ್ಕೂ ಹೆಚ್ಚು ಜನರ ಅಭಿಪ್ರಾಯವಾಗಿದೆ. ನಿಮ್ಮ ಪ್ರಕಾರ ಟಾಪ್ 3 ಯಾರು.?

Leave a Reply