ಬಿಗ್ ಬಾಸ್ ಮನೆಯಲ್ಲಿರುವ ಚಂದನ್ ಶೆಟ್ಟಿ ಗೆ ಎಷ್ಟು ಕಡಿಮೆ ಸಂಭಾವನೆ ಕೊಡ್ತಿದ್ದಾರೆ ಗೊತ್ತಾ.?

ಜನರ ಅಭಿಪ್ರಾಯಗಳನ್ನು ನೋಡಿದರೆ ಚಂದನ್ ಶೆಟ್ಟಿ ಬಿಗ್ ಬಾಸ್ ವಿನ್ನರ್ ಆಗುವ ಎಲ್ಲಾ ಅವಕಾಶಗಳೂ ಕಾಣಿಸುತ್ತಿವೆ. ತಾನೇ ಸಾಂಗ್ ಬರೆದು ಅದ್ಭುತವಾಗಿ ರಾಂಪ್ ಮೂಲಕ ಇಂಪಾಗಿ ಹಾಡುವ ಚಂದನ್ ಗೆ ಬಿಗ್ ಬಾಸ್ ಮನೆಯಲ್ಲಿ ಸಿಗುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

ತುಂಬಾ ವಿಶೇಷ ಪ್ರತಿಭೆ ಹೊಂದಿರುವ ಚಂದನ್, ಕೂತಲ್ಲೇ ಹಾಡನ್ನು ಬರೆದು ರಾಂಪ್ ಮಾಡ್ತಾರೆ. ಇವರ ಒಂದು ಹಾಡಿಗೆ ಏನಿಲ್ಲಾ ಅಂದ್ರು ಸುಮಾರು 1 ಲಕ್ಷ ಸಂಭಾವನೆ ಸಿಗುತ್ತದೆ. ಇನ್ನು ಅವರೇ ಹಾಡನ್ನು ಬರೆದರೆ ಇನ್ನೆಷ್ಟು ಸಂಭಾವನೆ ಸಿಗುತ್ತೆ ಅಲ್ವಾ.

ಆದ್ರೆ, ಬಿಗ್ ಬಾಸ್ ಮನೆಯಲ್ಲಿ ಚಂದನ್ ಶೆಟ್ಟಿ ಗೆ ಸಿಗುತ್ತಿರುವ ಸಂಭಾವನೆ, ವಾರಕ್ಕೆ 60-70 ಸಾವಿರ ಅಷ್ಟೇ ಎಂದು ಕೇಳಿ ಬಂದಿದೆ. ವೀಕ್ಷಕರನ್ನು ತನ್ನ ಹಾಡುಗಳ ಮೂಲಕ ಹೆಚ್ಚು ಮನರಂಜಿಸುತ್ತಿರುವ ಚಂದನ್ ಗೆ ಇಷ್ಟು ಸಂಭಾವನೆ ಸಾಕೆ?

ಬಿಗ್ ಬಾಸ್ ಮೂಲಕ ರೆಕಗ್ ನೈಸ್ ಸಿಗುತ್ತೆ ಅನ್ನೋದು ಸತ್ಯ. ಆದ್ರೆ, ಇಂತಹ ಅದ್ಬುತ ಕಲಾವಿದರು ತಮ್ಮ ಅಮೂಲ್ಯವಾದ 100 ದಿನಗಳನ್ನು ಬಿಗ್ ಬಾಸ್ ಮನೆಯಲ್ಲಿ ಕಳೆಯೋದ್ರಿಂದ, ಅವರಿಗೆ ಹೆಚ್ಚು ಸಂಭಾವನೆ ಕೊಟ್ಟರೆ ಒಳ್ಳೆಯದು ಅನ್ನೋದೇ ನಮ್ಮ ಆಶಯ.

Leave a Reply