ಹೆಣ್ಣು ಹೆತ್ತವರಿಗೆ ಗೊತ್ತು ಅದರ ಕಷ್ಟ ಅನ್ನೋರು ಅನೇಕ ಮಂದಿ. ಮಕ್ಕಳು ಹುಡುಗರ ಬಗ್ಗೆ ಮಾತನಾಡಿದ್ರೆ ಪಾಲಕರಿಗೆ ಟೆನ್ಷನ್. ಎಲ್ಲಿ ಮಗಳು ಲವ್ ನಲ್ಲಿ ಬಿದ್ದಿದ್ದಾಳಾ ಎಂಬ ಆತಂಕ. ಹುಡುಗಿಯರು ಲವ್ ನಲ್ಲಿ ಬಿದ್ದರೆ ಕೆಲವೊಂದು ಬದಲಾವಣೆಗಳಾಗ್ತವೆ.
ಹುಡುಗಿಯರು ಬಾಯ್ ಫ್ರೆಂಡ್ ಹೊಂದಿದ್ದರೆ ಯಾವ ಯಾವ ಬದಲಾವಣೆ ಆಗುತ್ತೆ ಅಂತಾ ನಾವು ಹೇಳ್ತೇವೆ ಓದಿ.
ಕನ್ನಡಿಯ ಮುಂದೆ ನಗುವುದು : ಹುಡುಗಿಯರು ಹಾಗೂ ಕನ್ನಡಿಗೆ ನಂಟು. ಆದ್ರೆ ಕನ್ನಡಿ ನೋಡೋದೊಂದೆ ಅಲ್ಲ, ಗೆಳೆಯನನ್ನು ಹೊಂದಿರುವ ಹುಡುಗಿಯರು ಕನ್ನಡಿ ಮುಂದೆ ನಿಂತು ಒಬ್ಬೊಬ್ಬರೇ ನಗ್ತಾರೆ. ಸದಾ ಗೆಳೆಯನ ಗುಂಗಿನಲ್ಲಿರುವ ಅವರು ಆತನನ್ನು ನೆನಪಿಸಿಕೊಂಡು ನಗ್ತಾರೆ.
ನಿದ್ರೆ ಬರದಿರುವುದು : ಪ್ರೀತಿ ಮಾಡಿದ್ರೆ ರಾತ್ರಿ ಜಾಗರಣೆ ಗ್ಯಾರಂಟಿ. ಹುಡುಗಿಯರೂ ಇದರಿಂದ ಹೊರತಾಗಿಲ್ಲ. ಗೆಳೆಯನ ನೆನಪು ನಿದ್ರೆಯನ್ನು ಓಡಿಸಿ ಬಿಡುತ್ತೆ.
ಮೊಬೈಲ್ ನಲ್ಲಿ ಸದಾ ಗುಸುಗುಸು : ಗೆಳೆಯನ ಜೊತೆ ಮಾತನಾಡುವುದು, ಮೆಸ್ಸೇಜ್ ಮಾಡೋದೇ ಅವರ ಪ್ರಪಂಚ. ಅದರಲ್ಲಿಯೇ ಬ್ಯುಸಿಯಾಗಿ ಬಿಡ್ತಾರೆ ಹುಡುಗಿಯರು.
ರೋಮ್ಯಾಂಟಿಕ್ ಚಿತ್ರ ನೋಡುವುದು : ಮೊದಲೆಲ್ಲ ಫೈಟಿಂಗ್ ಚಿತ್ರ ನೋಡ್ತಾ ಇದ್ದ ಹುಡುಗಿಯರೂ ಪ್ರೀತಿ ಚಿಗುರೊಡೆದ ಮೇಲೆ ರೋಮ್ಯಾಂಟಿಕ್ ಆಗಿ ಬಿಡ್ತಾರೆ. ರೋಮ್ಯಾಂಟಿಕ್ ಹಾಡು, ಚಿತ್ರ ನೋಡಲು ಇಷ್ಟಪಡ್ತಾರೆ.
ಡ್ರೆಸ್ ನಲ್ಲಿ ಬದಲಾವಣೆ : ಚೆಂದ ಕಾಣೋಕೆ ಯಾರಿಗೆ ಇಷ್ಟ ಇಲ್ಲ. ಅದರಲ್ಲೂ ತನ್ನನ್ನು ನೋಡುವ, ಮೆಚ್ಚುಗೆ ವ್ಯಕ್ತಪಡಿಸುವ ಕಣ್ಣಿದೆ ಅಂದಾಗ ಡ್ರೆಸ್ ಮೇಲೆ ವಿಶೇಷ ಪ್ರೀತಿ ಬರೋದು ಸಹಜ. ಗೆಳೆಯನ ಕಣ್ಣಿಗೆ ಅಂದವಾಗಿ ಕಾಣಲು ಹುಡುಗಿಯರು ಇಚ್ಛಿಸುತ್ತಾರೆ.
ಗೆಳೆಯರಿಂದ ದೂರ : ಪ್ರೀತಿಯಲ್ಲಿ ಬಿದ್ದವರು ಗೆಳೆಯರ ಗುಂಪಿಂದ ದೂರ ಇರ್ತಾರೆ. ಗೆಳೆಯನ ಜೊತೆ ಮಾತು, ಆತನ ಜೊತೆ ಸುತ್ತಾಡಲು ಬಯಸುವ ಅವರು ಗೆಳೆಯರ ಗುಂಪಿನಿಂದ ಬೇರೆಯಾಗ್ತಾರೆ.
ಅಸೂಯೆ: ಮೊದಲೆಲ್ಲ ನಮಗ್ಯಾಕೆ ಎನ್ನುವಂತೆ ಇದ್ದವರು ಗೆಳೆಯ ಸಿಕ್ಕ ನಂತರ ತಲೆ ಕೆಡಿಸಿಕೊಳ್ಳುತ್ತಾರೆ. ತಮ್ಮ ಗೆಳೆಯನ ಜೊತೆ ಬೇರೆ ಹುಡುಗಿ ಮಾತನಾಡಿದ್ರೆ ಅಸೂಯೆ ಪಟ್ಟುಕೊಳ್ಳುತ್ತಾರೆ.