ಹಸಿವು, ಧೈರ್ಯ, ಛಲ ಮತ್ತು ಗುರಿ ಒಬ್ಬ ವ್ಯಕ್ತಿಯನ್ನು ಎಲ್ಲೆಲ್ಲಿಗೋ ಕರೆದುಕೊಂಡು ಹೋಗುತ್ತದೆ, ಇದಕ್ಕೆ ತಾಜಾ ಉದಾಹರಣೆ ಕನ್ನಡದ ನಟ. ಬೆಳಗ್ಗೆ ಎದ್ದು 15 ಬಸ್ ಗಳನ್ನು ಕ್ಲೀನ್ ಮಾಡಿ, ಕಸ ಗುಡಿಸುತ್ತಿದ್ದ ಹುಡುಗ ಈಗ ಅದ್ಭುತ ನಟನಾಗಿ ಬೆಳೆದಿದ್ದಾರೆ, ಅವರು ಯಾರು ಗೊತ್ತಾ.?
ಜೀವನದಲ್ಲಿ ಏನೋ ಒಂದು ಆಗಬೇಕು ಎಂದು ತನಗಿದ್ದ ಒಂದು ಸೈಕಲ್ ನ್ನು ಮಾರಿ ಬೆಂಗಳೂರಿಗೆ ಬಸ್ ಹತ್ತಿದ ಈ ಹುಡುಗ ಬಂದು ತಲುಪಿದ್ದು ಮೆಜೆಸ್ಟಿಕ್ ಗೆ, ಎಲ್ಲಿ ಹೋಗಬೇಕು, ಏನು ಮಾಡಬೇಕು ಎಂದು ಗೊತ್ತಿಲ್ಲ, ಮತ್ತೇ BMTC ಬಸ್ ಹತ್ತಿದ ಹುಡುಗ ಇಳಿದದ್ದು ಯಶವಂತಪುರ ಬಸ್ ಸ್ಟಾಂಡ್ ನಲ್ಲಿ.
ಅಲ್ಲಿ ಯಾರು ಗೊತ್ತಿಲ್ಲ, ಮಲಗೋದಕ್ಕೆ ಜಾಗ ಇಲ್ಲ, ಇದಕ್ಕೆಲ್ಲಾ ಹೆದರದ ಈ ಹುಡುಗ ಹಸಿವನ್ನು ನಿವಾರಿಸಿಕೊಳ್ಳುವುದಕ್ಕಾಗಿ ಸಿಕ್ಕ ಸಿಕ್ಕ ಕೆಲಸಗಳನ್ನು ಮಾಡಿದ, ಯಶವಂತಪುರ ಗೋಪಾಲ್ ಥಿಯೇಟರ್ ನಲ್ಲಿ ಲೈಟ್ ಬಾಯ್ ಆಗಿ, ಹೂವಿನ ಡೆಕೋರೇಟರ್ ಆಗಿ ಕೆಲಸ ಮಾಡುತ್ತಿದ್ದ.
ಅಷ್ಟೇ ಅಲ್ಲದೆ ಬೆಳಗ್ಗೆ ಎದ್ದು ಯಶವಂತಪುರ ಬಸ್ ಸ್ಟಾಂಡ್ ನಲ್ಲಿ 15 ಬಸ್ ಗಳನ್ನು ಕ್ಲೀನ್ ಮಾಡಿ ಕಸ ಗುಡಿಸುತ್ತಿದ್ದ. ಕೊನೆಗೆ ಈ ಹುಡುಗನಿಗೆ ಒಂದೊಳ್ಳೆ ದಿನ ಬಂತು, ನೀನಾಸಂ ನಲ್ಲಿ ಸೀಟ್ ಸಿಕ್ಕಿತು. ಅಲ್ಲಿ ಕಲೆಯನ್ನು ಕರಗತ ಮಾಡಿಕೊಂಡು ಚಿತ್ರರಂಗದಲ್ಲಿ ಚಿಕ್ಕ ಪುಟ್ಟ ಪಾತ್ರ ಮಾಡತೊಡಗಿದ.
ಕೊನೆಗೆ ಲೂಸಿಯಾ ಮೂಲಕ ನಟನಾಗಿ ಈಗ ಕನ್ನಡದ ಬೇಡಿಕೆಯ ಹೀರೋ ಆಗಿ ಬೆಳೆದಿರುವ ಅಪ್ರತಿಮ ಪ್ರತಿಭೆ ಯಾರು ಗೊತ್ತಾ.? ನೀನಾಸಂ ಸತೀಶ್, ಹಸಿವು ಸತೀಶ್ ಅವರನ್ನು ಇಲ್ಲಿಯವರೆಗೆ ತೆಗೆದುಕೊಂಡು ಬಂದಿದೆ, ಅವರ ಛಲಕ್ಕೆ, ದೈರ್ಯಕ್ಕೆ ಒಂದು ಸೆಲ್ಯೂಟ್ ಹೊಡಿಲೇಬೇಕು ಅಲ್ವಾ..