ಸಾಮಾನ್ಯವಾಗಿ ಸೆಲೆಬ್ರಿಟಿಗಳು ಹಾಗು ಉದ್ಯಮಿಗಳು 40-50 ವರ್ಷ ವಯಸ್ಸು ದಾಟುತ್ತಿದ್ದಂತೆ ‘ಆಸ್ತಿಯ ವಿಲ್’ ಬರೆದಿಡುತ್ತಾರೆ. ಯಾಕಂದ್ರೆ ಅವರು ತೀರಿಕೊಂಡ ನಂತರ ಮಕ್ಕಳು ಮತ್ತು ಸಂಬಂಧಿಗಳ ಮದ್ಯೆ ಗಲಾಟೆ-ಮನಸ್ತಾಪ ಆಗದಿರಲಿ ಎಂದು, ಹಾಗೆ ಶ್ರೀದೇವಿ ಕೂಡ.
ಶ್ರೀದೇವಿಯವರ ತಾಯಿ ಮಾನಸಿಕವಾಗಿ ಅಸ್ವಸ್ಥರಾಗಿದ್ದಾಗ ಎಲ್ಲಾ ಆಸ್ತಿಯನ್ನು ಶ್ರೀದೇವಿಗೆ ಬರೆದಿದ್ದರು, ಆದ್ರೆ ಕೋರ್ಟ್ ಗೆ ಹೋದ ಶ್ರೀದೇವಿ ತಂಗಿ, ನಮ್ಮ ತಾಯಿಗೆ ಮಾನಸಿಕ ಸಮಸ್ಯೆಯಿದ್ದಾಗ ವಿಲ್ ಬರೆಸಲಾಗಿದೆ ಎಂದು ಕೇಸ್ ಹಾಕಿದರು. ಅದರಿಂದ ಶ್ರೀದೇವಿ ತುಂಬಾ ಕಷ್ಟ ಅನುಭವಿಸಿದ್ದರು.
ಅಂತಹ ಸ್ಥಿತಿ ಮಕ್ಕಳಿಗೆ ಬರದಿರಲಿ ಎಂದು ಕೆಲವು ವರ್ಷಗಳ ಹಿಂದೇನೆ ಶ್ರೀದೇವಿ ವಿಲ್ ಬರೆದಿದ್ದು ಅದು ಈಗ ಬಹಿರಂಗವಾಗಿದೆ. ಶ್ರೀದೇವಿಯವರು ತಮ್ಮ 70% ಭಾಗದ ಆಸ್ತಿ ತನ್ನ ಇಬ್ಬರು ಮಕ್ಕಳಿಗೆ ಸೇರಬೇಕು, ಇನ್ನುಳಿದ 30% ಗಂಡನಿಗೆ ಸೇರಬೇಕು ಎಂದು ವಿಲ್ ಬರೆದಿದ್ದಾರೆ.
ಗಂಡ ಬೋನಿ ಕಪೂರ್ ಗೂ ಅವರ ತಂದೆಯಿಂದ ಹಾಗು ಅವರು ಸಂಪಾದಿಸಿದ ಆಸ್ತಿಗಳಿದ್ದು, ಅವರೂ ಕೂಡ ವಿಲ್ ಬರೆದಿದ್ದಾರಂತೆ, ಅದರ ಪ್ರಕಾರ ತಮ್ಮ ಆಸ್ತಿಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ, ತಮ್ಮ ನಾಲ್ಕು ಮಕ್ಕಳಿಗೆ ಹಂಚಿದ್ದಾರೆ.
ತನ್ನ ಮೊದಲ ಹೆಂಡತಿಯ ಇಬ್ಬರು ಮಕ್ಕಳಿಗೂ ಸಮಾನವಾಗಿ ಹಂಚಿದ್ದಾರೆ. ಹಾಗು 235 ಕೋಟಿ ಬೆಲೆಯ ತನ್ನ ಮನೆ ಶ್ರೀದೇವಿಗೆ ಸಲ್ಲುತ್ತದೆ ಎಂದು ವಿಲ್ ಬರೆದಿದ್ದರು ಬೋನಿ, ಆದ್ರೆ ಶ್ರೀದೇವಿ ಮೊದಲು ತೀರಿಕೊಂಡ ಕಾರಣ ಅವರು ಮತ್ತೆ ವಿಲ್ ಬರೆಯಲಿದ್ದಾರೆ.
ಶ್ರೀದೇವಿ ತನ್ನ ಆಸ್ತಿಯಲ್ಲಿ 30% ಬೋನಿ ಕಪೂರ್ ಗೆ ಕೊಟ್ಟಿದ್ದು, ಬೋನಿ ತನ್ನೆಲ್ಲಾ ಆಸ್ತಿಯನ್ನು ನಾಲ್ಕು ಭಾಗಗಳಾಗಿ ಮಾಡಿರುವುದರಿಂದ, ಶ್ರೀದೇವಿ ಆಸ್ತಿ ಮಲ ಮಗ ಹಾಗು ಮಗಳಿಗೂ ಸಹ ಸ್ವಲ್ಪ ಸಿಗಲಿದೆ.