ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ | 09-04-2018

ಮೇಷ ರಾಶಿ :- ಉನ್ನತ ಅಧಿಕಾರಿಗಳ ಕೃಪಾದೃಷ್ಟಿಯಿಂದ ಪದೋನ್ನತಿ ದೊರೆಯಲಿದೆ. ವ್ಯಾಪಾರದಲ್ಲೂ ಲಾಭವಾಗಬಹುದು. ಗೃಹಸ್ಥ ಜೀವನದಲ್ಲಿ ಆನಂದಮಯ ವಾತಾವರಣವಿರಲಿದೆ. ಕುಟುಂಬದಲ್ಲಿ ಪ್ರೀತಿ ಸಿಗುತ್ತದೆ.
ವೃಷಭ ರಾಶಿ :- ಇವತ್ತಿನ ದಿನ ನಿಮಗೆ ಅನುಕೂಲಕರವಾಗಿದೆ. ಕುಟುಂಬದವರೊಂದಿಗೆ ಪ್ರೇಮಮಯ ಸಂಬಂಧ ಹೊಂದಲಿದ್ದೀರಿ. ಸ್ನೇಹಿತರು ಸಂಬಂಧಿಕರಿಂದ ಉಡುಗೊರೆ ದೊರೆಯಲಿದೆ. ಉನ್ನತ ಅಧಿಕಾರಿಗಳು ನಿಮ್ಮ ಕೆಲಸವನ್ನು ಮೆಚ್ಚಿಕೊಳ್ಳುತ್ತಾರೆ. ಇದರಿಂದ ನೀವು ಕೂಡ ಪ್ರಸನ್ನವಾಗಿರುತ್ತೀರಿ.
ಮಿಥುನ ರಾಶಿ :- ಸಮಾಜದಲ್ಲಿ ಗೌರವ ದೊರೆಯಲಿದೆ. ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ಮನರಂಜನಾ ಸ್ಥಳಗಳಿಗೆ ತೆರಳುವ ಸಾಧ್ಯತೆ ಇದೆ. ಉತ್ತಮ ಆಹಾರ ಮತ್ತು ಸುಂದರ ವೇಷಭೂಷಣಗಳಿಂದ ಮನಸ್ಸು ಪ್ರಸನ್ನವಾಗಲಿದೆ. ಆರೋಗ್ಯವೂ ಉತ್ತಮವಾಗಿರಲಿದೆ.
ಕರ್ಕ ರಾಶಿ :- ಒಂದು ಕೆಲಸವನ್ನು ಆರಂಭಿಸಲು ಪ್ರೇರಣೆ ಸಿಗಲಿದೆ, ಅದನ್ನು ನೀವು ಯಶಸ್ವಿಯಾಗಿ ಆರಂಭಿಸಲಿದ್ದೀರಿ. ಸಮೀಪದ ಸ್ಥಳಕ್ಕೆ ಪ್ರವಾಸ ಹೋಗುವ ಸಾಧ್ಯತೆ ಇದೆ. ಇವತ್ತು ಬೌದ್ಧಿಕ ಮತ್ತು ತಾರ್ಕಿಕ ವಿಚಾರಗಳ ವಿನಿಮಯ ಮಾಡಿಕೊಳ್ಳಲಿದ್ದೀರಿ.
ಸಿಂಹ ರಾಶಿ :- ಇವತ್ತು ನಿಮಗೆ ಶುಭ ಫಲವಿದೆ. ಕೃಷಿಕರಿಗೆ ಲಾಭದಾಯಕ ದಿನ. ಹಣಕಾಸು ವಹಿವಾಟು ನಡೆಸುವವರಿಗೂ ದಿನ ಉತ್ತಮವಾಗಿದೆ. ಆರ್ಥಿಕ ಸಮಸ್ಯೆ ಬಗೆಹರಿಯಲಿದೆ.
ಕನ್ಯಾ ರಾಶಿ :- ಹಿರಿಯರ ಸಹಕಾರ ದೊರೆಯುತ್ತದೆ. ಅದರಿಂದ ಸಂತೋಷವೂ ವೃದ್ಧಿಸುತ್ತದೆ. ವಿದೇಶದಲ್ಲಿ ನೆಲೆಸಿರುವ ಮಕ್ಕಳಿಂದ ಶುಭ ಸಮಾಚಾರ ದೊರೆಯಲಿದೆ.
ತುಲಾ ರಾಶಿ :- ದಿನವಿಡೀ ಮಾನಸಿಕ ಮತ್ತು ಶಾರೀರಿಕವಾಗಿ ಅಸ್ವಸ್ಥತೆ ಕಾಡುತ್ತದೆ. ಕೋಪವನ್ನು ನಿಯಂತ್ರಿಸಿಕೊಳ್ಳಿ. ಇಲ್ಲದೇ ಹೋದಲ್ಲಿ ಯಾರೊಂದಿಗಾದರೂ ಜಗಳ ಏರ್ಪಡಬಹುದು.
ವೃಶ್ಚಿಕ ರಾಶಿ :- ಕೋರ್ಟ್ – ಕಚೇರಿ ವ್ಯವಹಾರದಲ್ಲಿ ಇಂದು ತೊಡಗಿಕೊಳ್ಳಬೇಡಿ. ಇಂದು ಎಲ್ಲಾ ಕಾರ್ಯದಲ್ಲೂ ಏಕಾಗ್ರತೆಯ ಕೊರತೆ ಇರುವುದಿಲ್ಲ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಧನು ರಾಶಿ :- ವಾದ-ವಿವಾದಗಳಿಂದ ದೂರವಿರುವ ಮೂಲಕ ಮನೆಯ ವಾತಾವರಣ ಹದಗೆಡದಂತೆ ಎಚ್ಚರವಹಿಸಿ. ಧನ ಪ್ರತಿಷ್ಠೆಗೆ ಹಾನಿಯಾಗಬಹುದು. ಮಹಿಳೆಯರ ಜೊತೆಗಿನ ವ್ಯವಹಾರದಲ್ಲಿ ಜಾಗರೂಕರಾಗಿರಿ. ಅತಿಯಾಗಿ ಭಾವುಕರಾಗಬೇಡಿ.
ಮಕರ ರಾಶಿ :- ದಿನವಿಡೀ ಮಾನಸಿಕ ಮತ್ತು ಶಾರೀರಿಕವಾಗಿ ಅಸ್ವಸ್ಥತೆ ಕಾಡುತ್ತದೆ. ಕೋಪವನ್ನು ನಿಯಂತ್ರಿಸಿಕೊಳ್ಳಿ. ಇಲ್ಲದೇ ಹೋದಲ್ಲಿ ಯಾರೊಂದಿಗಾದರೂ ಜಗಳ ಏರ್ಪಡಬಹುದು.
ಕುಂಭ ರಾಶಿ :- ಬೆಳಗಿನ ಸಮಯ ಹೊಸ ಕೆಲಸ ಆರಂಭಿಸಲು ಶುಭವಾಗಿದೆ. ಇಂದು ಸರ್ಕಾರದಿಂದ ಪ್ರಯೋಜನ ದೊರೆಯುವ ಸಂಭವ ಇದೆ. ವ್ಯಾಪಾರದಲ್ಲಿ ಲಾಭವಾಗಲಿದೆ. ಉನ್ನತ ಅಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ನಿಮ್ಮ ಅಲೋಚನೆಗಳೂ ಬದಲಾಗಲಿವೆ.
ಮೀನ ರಾಶಿ :- ಸಮಾಜದಲ್ಲಿ ಗೌರವ ದೊರೆಯಲಿದೆ. ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ಮನರಂಜನಾ ಸ್ಥಳಗಳಿಗೆ ತೆರಳುವ ಸಾಧ್ಯತೆ ಇದೆ. ಉತ್ತಮ ಆಹಾರ ಮತ್ತು ಸುಂದರ ವೇಷಭೂಷಣಗಳಿಂದ ಮನಸ್ಸು ಪ್ರಸನ್ನವಾಗಲಿದೆ. ಆರೋಗ್ಯವೂ ಉತ್ತಮವಾಗಿರಲಿದೆ.

Leave a Reply