ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ | 10-04-2018

ಮೇಷ ರಾಶಿ :- ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರಲಿದೆ. ಇವತ್ತು ಎಲ್ಲಾ ಕೆಲಸ ಕಾರ್ಯಗಳಲ್ಲೂ ಯಶಸ್ಸು ಸಿಗಲಿದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರುತ್ತದೆ.

ವೃಷಭ ರಾಶಿ :- ಇವತ್ತು ನಿಮಗೆ ಶುಭದಿನ. ಧನವೃದ್ಧಿ ಹಾಗೂ ಪದೋನ್ನತಿಯ ಯೋಗವಿದೆ. ಉದ್ಯಮದಲ್ಲಿ ಮಾಡಿಕೊಂಡ ಒಪ್ಪಂದಗಳಿಂದ ಲಾಭವಾಗಲಿದೆ. ಮನಸ್ಸು ಕೂಡ ಚಿಂತೆರಹಿತವಾಗಿರಲಿದೆ. ಆಕಸ್ಮಿಕ ಧನಲಾಭವಾಗುವ ಸಾಧ್ಯತೆ ಇದೆ.

WhatsApp Group Join Now
Telegram Group Join Now

ಮಿಥುನ ರಾಶಿ :- ಮಹತ್ವಪೂರ್ಣ ಕಾರ್ಯವನ್ನು ಇವತ್ತು ಪೂರ್ಣಗೊಳಿಸಿ. ಧನಲಾಭದ ಸಂಭವ ಇದೆ. ಮನಸ್ಸಿನ ಉದಾಸೀನತೆ ನಿಮ್ಮಲ್ಲಿ ನಕಾರಾತ್ಮಕ ಭಾವನೆಯನ್ನು ಉಂಟು ಮಾಡಬಹುದು ಎಚ್ಚರ ವಹಿಸಿ.

ಕರ್ಕ ರಾಶಿ :- ಇಂದು ಮಾನಸಿಕವಾಗಿ ಮತ್ತು ಶಾರೀರಿಕವಾಗಿ ಉತ್ಸಾಹದಿಂದ ಇರುತ್ತೀರಿ. ಕುಟುಂಬದವರೊಂದಿಗೆ ಆನಂದವಾಗಿ ಸಮಯ ಕಳೆಯುತ್ತೀರಿ. ಅಪೂರ್ಣವಾಗಿದ್ದ ಕೆಲಸಗಳೆಲ್ಲ ಪೂರ್ಣಗೊಳ್ಳಲಿವೆ. ಮಿತ್ರರೊಂದಿಗೆ ಉಪಹಾರ ಮಾಡಲಿದ್ದೀರಿ.

WhatsApp Group Join Now
Telegram Group Join Now

ಸಿಂಹ ರಾಶಿ :- ಮನಸ್ಸು ಮತ್ತು ದೇಹಕ್ಕೆ ಸ್ಪೂರ್ತಿಯ ಕೊರತೆಯಿಲ್ಲ. ಮನೆಯಲ್ಲಿ ಸಂತಸದ ವಾತಾವರಣವಿರುತ್ತದೆ. ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ಮಿತ್ರರಿಂದ ಲಾಭವಿದೆ. ಶುಭ ಕಾರ್ಯ ಆರಂಭಕ್ಕೆ ಸಮಯ ಅನುಕೂಲಕರವಾಗಿದೆ.

ಕನ್ಯಾ ರಾಶಿ :- ವಸ್ತ್ರಾಭರಣಗಳ ಖರೀದಿ ನಿಮಗೆ ರೋಮಾಂಚಕ ಹಾಗೂ ಆನಂದದಾಯಕವಾಗಿರುತ್ತದೆ. ಕಲೆಯ ಬಗ್ಗೆ ವಿಶೇಷ ಆಸಕ್ತಿ ಮೂಡಲಿದೆ. ವ್ಯಾಪಾರ ವೃದ್ಧಿಯಿಂದ ಮನಸ್ಸಿಗೆ ಸಂತೋಷ ಸಿಗಲಿದೆ.
ತುಲಾ ರಾಶಿ :- ದುರ್ಘಟನೆಯ ಬಗ್ಗೆ ಎಚ್ಚರಿಕೆಯಿಂದಿರಿ. ಖರ್ಚು ಹೆಚ್ಚಾಗಲಿದೆ. ಯಾರೊಂದಿಗಾದ್ರೂ ಉಗ್ರ ಚರ್ಚೆಯಾಗಬಹುದು. ಹಾಗಾಗಿ ಮಾತಿನ ಮೇಲೆ ನಿಯಂತ್ರಣವಿರಲಿ. ಕೋರ್ಟ್-ಕಚೇರಿ ವ್ಯವಹಾರದಲ್ಲಿ ಎಚ್ಚರವಿರಲಿ.
ವೃಶ್ಚಿಕ ರಾಶಿ :- ಇಂದು ನಿಮಗೆ ಲಾಭದಾಯಕ ದಿನ. ನೌಕರಿ ಮತ್ತು ವ್ಯಾಪಾರದಲ್ಲಿ ಲಾಭವಾಗುತ್ತದೆ. ಮಿತ್ರರನ್ನು ಭೇಟಿಯಾಗಲಿದ್ದೀರಿ. ಸುಂದರ ತಾಣಕ್ಕೆ ಪ್ರವಾಸ ತೆರಳುವ ಸಾಧ್ಯತೆ ಇದೆ. ಮಕ್ಕಳು ಮತ್ತು ಸಂಗಾತಿಯಿಂದ ಲಾಭವಾಗಲಿದೆ.

ಧನು ರಾಶಿ :- ಶಾರೀರಿಕ ಮತ್ತು ಮಾನಸಿಕವಾಗಿ ಅಸ್ವಸ್ಥತೆ ಉಂಟಾಗಲಿದೆ. ಇದರಿಂದ ವ್ಯಗ್ರತೆ ಹೆಚ್ಚಾಗುತ್ತದೆ. ಹಣ ಮತ್ತು ಕೀರ್ತಿಗೆ ಹಾನಿಯಾಗಬಹುದು.

WhatsApp Group Join Now
Telegram Group Join Now

ಮಕರ ರಾಶಿ :- ಇಂದು ಮಿಶ್ರಫಲವಿದೆ. ಅನಾವಶ್ಯಕವಾಗಿ ಹಣ ಖರ್ಚಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಇರುವುದಿಲ್ಲ.

ಕುಂಭ ರಾಶಿ :- ಆರ್ಥಿಕ ದೃಷ್ಟಿಯಿಂದ ಇಂದು ಲಾಭದಾಯಕ ದಿನ. ಮನೆಯಲ್ಲಿ ಆನಂದದ ವಾತಾವರಣ ಇರುತ್ತದೆ. ಸ್ನೇಹಿತರನ್ನು ಭೇಟಿಯಾಗಲಿದ್ದೀರಿ.

ಮೀನ ರಾಶಿ :- ಕೋರ್ಟ್ – ಕಚೇರಿ ವ್ಯವಹಾರದಲ್ಲಿ ಇಂದು ತೊಡಗಿಕೊಳ್ಳಬೇಡಿ. ಇಂದು ಎಲ್ಲಾ ಕಾರ್ಯದಲ್ಲೂ ಏಕಾಗ್ರತೆಯ ಕೊರತೆ ಇರುವುದಿಲ್ಲ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

Leave a Reply