ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ | 11-04-2018 – ದಿನ ಭವಿಷ್

ಮೇಷ ರಾಶಿ :- ನೀವು ಅನೇಕ ದಿನಗಳಿಂದ ಕೆಲಸದಲ್ಲಿ ಹೆಣಗಾಡುತ್ತಿದ್ದಲ್ಲಿ, ಇಂದು ನಿಜವಾಗಿಯೂ ಒಳ್ಳೆಯ ದಿನವಾಗಲಿದೆ. ನಿಮ್ಮ ಯೋಜನೆಗಳಿಗೆ ಕೊನೆಯ ಕ್ಷಣದಲ್ಲಿ ಬದಲಾವಣೆಗಳನ್ನು ಮಾಡಬೇಕಾದ ದಿನ. ನಿಮ್ಮ ಸಂಗಾತಿಯ ಆರೋಗ್ಯ ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಹುದು, ಆದರೆ ನೀವು ಹೇಗಾದರೂ ಮಾಡಿ ಎಲ್ಲವನ್ನೂ ನಿರ್ವಹಿಸುತ್ತೀರಿ.
ವೃಷಭ ರಾಶಿ :- ನೀವು ಯಾವುದೇ ಹೊಸ ಯೋಜನೆಯನ್ನು ತೆಗೆದುಕೊಳ್ಳುವ ಮೊದಲು ಎರಡು ಬಾರಿ ಆಲೋಚಿಸಿ. ತೆರಿಗೆ ಮತ್ತು ವಿಮೆ ವಿಷಯಗಳ ಬಗ್ಗೆ ಗಮನ ನೀಡುವ ಅಗತ್ಯವಿದೆ. ವಿದ್ಯುತ್ ಇಲ್ಲದಿರುವುದರಿಂದ ಅಥವಾ ಬೇರೆ ಯಾವುದೋ ಕಾರಣಕ್ಕಾಗಿ ತಯಾರಾಗಲು ತಡವಾಗಬಹುದು, ಆದರೆ ನಿಮ್ಮ ಸಂಗಾತಿ ನಿಮ್ಮ ನೆರವಿಗೆ ಬರುತ್ತಾರೆ.
ಮಿಥುನ ರಾಶಿ :- ನಿಮ್ಮ ಸಂಗಾತಿ ನಿಮ್ಮ ಸ್ಥಾನವನ್ನು ತಿಳಿದುಕೊಳ್ಳುವಂತೆ ಮಾಡಲು ನೀವು ತೊಂದರೆ ಹೊಂದಿರುತ್ತೀರಿ. ಹೊಸ ಯೋಜನೆಗಳು ಮತ್ತು ಉದ್ಯಮಗಳನ್ನು ಅನುಷ್ಠಾನಕ್ಕೆ ತರಲು ಒಳ್ಳೆಯ ದಿನ. ಅನ್ಯ ಮೂಲದ ಸುದ್ದಿಯನ್ನು ಪರಿಶೀಲಿಸಬೇಕು. ನೀವು ಮತ್ತು ನಿಮ್ಮ ಸಂಗಾತಿ ಇಂದು ನಿಮ್ಮ ವೈವಾಹಿಕ ಜೀವನದ ಅತ್ಯುತ್ತಮ ನೆನಪುಗಳನ್ನು ರಚಿಸುತ್ತೀರಿ.
ಕರ್ಕ ರಾಶಿ :- ಇವತ್ತು ನಿಮಗೆ ಅನುಕೂಲಕರ ದಿನ. ಮಾನಸಿಕ ಮತ್ತು ಶಾರೀರಿಕ ಆರೋಗ್ಯ ಚೆನ್ನಾಗಿರಲಿದೆ. ಕುಟುಂಬದವರೊಂದಿಗೆ ಆನಂದ ಮತ್ತು ಉಲ್ಲಾಸದಿಂದ ಸಮಯ ಕಳೆಯಲಿದ್ದೀರಿ.
ಸಿಂಹ ರಾಶಿ :- ಇವತ್ತು ಧಾರ್ಮಿಕ ಕೆಲಸಗಳಲ್ಲಿ ಸಮಯ ಕಳೆಯಲಿದ್ದೀರಿ. ಸ್ನೇಹಿತರೊಂದಿಗೆ ಧಾರ್ಮಿಕ ಪ್ರವಾಸಕ್ಕೆ ತೆರಳುವ ಅವಕಾಶ ಕೂಡಿ ಬರಬಹುದು. ಕೋಪದ ಮೇಲೆ ನಿಯಂತ್ರಣ ಇಟ್ಟುಕೊಳ್ಳಿ. ವ್ಯಾಪಾರದಲ್ಲಿ ವಿಘ್ನಗಳು ಎದುರಾಗಬಹುದು.
ಕನ್ಯಾ ರಾಶಿ :- ಹೊಸ ಕಾರ್ಯ ಆರಂಭಿಸಲಿದ್ದೀರಿ. ದೂರದಲ್ಲಿ ನೆಲೆಸಿರುವ ಸ್ನೇಹಿತರು ಮತ್ತು ಸಂಬಂಧಿಕರಿಂದ ಶುಭ ಸಮಾಚಾರ ಸಿಗಲಿದೆ. ವಿದೇಶಕ್ಕೆ ತೆರಳುವ ಅವಕಾಶ ಒದಗಿ ಬರಬಹುದು. ಉದ್ಯಮದಲ್ಲಿ ಆರ್ಥಿಕ ಲಾಭ ದೊರೆಯಲಿದೆ.
ತುಲಾ ರಾಶಿ :- ಇವತ್ತಿನ ದಿನ ನಿಮಗೆ ಮಧ್ಯಮ ಫಲದಾಯಕವಾಗಿದೆ. ಕುಟುಂಬ ಸದಸ್ಯರೊಂದಿಗೆ ಮಿತವಾಗಿ ಮಾತನಾಡಿ. ನಿತ್ಯದ ಕೆಲಸಗಳಿಗೆ ಅಡಚಣೆ ಉಂಟಾಗಬಹುದು. ಅಧಿಕ ಪರಿಶ್ರಮದ ನಂತರವೂ ತಕ್ಕ ಪ್ರತಿಫಲ ದೊರೆಯದೇ ಇರುವುದರಿಂದ ಹತಾಶೆಯ ಅನುಭವವಾಗುತ್ತದೆ.
ವೃಶ್ಚಿಕ ರಾಶಿ :- ಇವತ್ತಿನ ದಿನ ನಿಮಗೆ ಮಿಶ್ರ ಫಲವಿದೆ. ಕಚೇರಿ ಅಥವಾ ಉದ್ಯಮದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಚರ್ಚೆ ನಡೆಸಲಿದ್ದೀರಿ. ಸರ್ಕಾರದಿಂದ ಲಾಭ ದೊರೆಯುವ ಸಾಧ್ಯತೆ ಇದೆ. ಕಚೇರಿ ಕೆಲಸಕ್ಕಾಗಿ ಪ್ರಯಾಣ ಮಾಡಬೇಕಾಗುತ್ತದೆ.
ಧನು ರಾಶಿ :- ಕೆಲಸ ಪೂರ್ಣಗೊಳ್ಳದೇ ಇದ್ದಲ್ಲಿ ಹೆಚ್ಚು ನಿರಾಶರಾಗಬೇಡಿ. ಇವತ್ತು ಸಾಹಿತ್ಯ ಮತ್ತು ಕಲೆಯ ಬಗ್ಗೆ ಹೆಚ್ಚು ಆಸಕ್ತಿ ಮೂಡಲಿದೆ. ಪ್ರಣಯ ಸಂಬಂಧಕ್ಕೆ ಇವತ್ತಿನ ದಿನ ಯೋಗ್ಯವಾಗಿದೆ.
ಮಕರ ರಾಶಿ :- ಕುಟುಂಬದಲ್ಲಿನ ಘರ್ಷಣೆಯ ವಾತಾವರಣದಿಂದ ಮನಸ್ಸು ಖಿನ್ನತೆ ಅನುಭವಿಸಲಿದೆ. ದೇಹದಲ್ಲೂ ಸ್ಪೂರ್ತಿ ಮತ್ತು ಪ್ರಫುಲ್ಲತೆಯ ಅಭಾವ ಉಂಟಾಗಲಿದೆ. ನಿದ್ದೆಯ ಕೊರತೆ ಕಾಡಲಿದೆ. ಮಾನಹಾನಿ ಉಂಟಾಗುವ ಸಾಧ್ಯತೆ ಇದೆ.
ಕುಂಭ ರಾಶಿ :- ನಿಮ್ಮ ಮನಸ್ಸು ಹಗುರವಾಗಲಿದೆ. ಮನಸ್ಸಿನಲ್ಲಿ ಮೂಡಿದ್ದ ಚಿಂತೆಗಳೆಲ್ಲಾ ಮಾಯವಾಗಿ ಉತ್ಸಾಹ ವೃದ್ಧಿಸಲಿದೆ. ಭಾಗ್ಯ ವೃದ್ಧಿಯಾಗಲಿದೆ. ವೈವಾಹಿಕ ಬದುಕು ಆನಂದವಾಗಿರಲಿದೆ.
ಮೀನ ರಾಶಿ :- ಇವತ್ತು ಖರ್ಚಿನ ಮೇಲೆ ಸಂಯಮ ಇಟ್ಟುಕೊಳ್ಳಿ. ಕೋಪ ಮತ್ತು ಮಾತಿನ ಮೇಲೂ ಹಿಡಿತವಿರಲಿ. ಹಣ ಕೊಡು-ಕೊಳ್ಳುವಿಕೆಯಲ್ಲಿ ಜಾಗರೂಕರಾಗಿರಿ. ನಕಾರಾತ್ಮಕ ವಿಚಾರ ಮನಸ್ಸಿನಲ್ಲಿ ಬರದಂತೆ ಎಚ್ಚರ ವಹಿಸಿ.

Leave a Reply