ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ


ಮೇಷ 


ಇಂದು ಅತ್ಯಂತ ಸಮಾಧಾನದಿಂದಿರಿ. ಸರ್ಕಾರ ವಿರೋಧಿ ಕೆಲಸಗಳಿಂದ ದೂರವಿರಿ. ದುರ್ಘಟನೆಯಿಂದ ಪಾರಾಗಿ. ಮಕ್ಕಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ.
ವೃಷಭ 


ಆತ್ಮೀಯ ಮಿತ್ರರು ಮತ್ತು ಸಂಬಂಧಿಕರೊಂದಿಗೆ ಸುತ್ತಾಡಲಿದ್ದೀರಿ. ಇದರಿಂದ ಮನಸ್ಸಿಗೆ ಅತೀವ ಆನಂದ ದೊರೆಯಲಿದೆ. ಸುಂದರ ವಸ್ತ್ರ, ಆಭರಣ, ರುಚಿಕರ ಭೋಜನ ಸವಿಯುವ ಯೋಗವೂ ಇದೆ. ಖರ್ಚು ಹೆಚ್ಚಾಗಲಿದೆ.
ಮಿಥುನ 


ಇವತ್ತು ನಿಮ್ಮ ಕುಟುಂಬದಲ್ಲಿ ಉಲ್ಲಾಸದ ವಾತಾವರಣವಿರುತ್ತದೆ. ಶಾರೀರಿಕ ಸ್ಪೂರ್ತಿ ಮತ್ತು ಮಾನಸಿಕ ಪ್ರಸನ್ನತೆಯ ಅನುಭವವಾಗಲಿದೆ. ಅಪೂರ್ಣ ಕಾರ್ಯ ಪೂರ್ಣಗೊಳ್ಳುವುದರಿಂದ ಆನಂದ ವೃದ್ಧಿಸಲಿದೆ.
ಕರ್ಕ 


ಭವಿಷ್ಯಕ್ಕಾಗಿ ಆರ್ಥಿಕ ಯೋಜನೆ ರೂಪಿಸಲು ಸಮಯ ಉತ್ತಮವಾಗಿದೆ. ಮಾಡುವ ಕೆಲಸಗಳಲ್ಲಿ ಏಕಾಗ್ರತೆ ಇರಲಿ. ಇದರಿಂದ ನೀವು ಕೈಗೊಂಡ ಕಾರ್ಯಗಳು ಯಶಸ್ವಿಯಾಗಲಿವೆ.
ಸಿಂಹ 


ಶಾರೀರಿಕ ಮತ್ತು ಮಾನಸಿಕವಾಗಿ ಅಸ್ವಸ್ಥರಾಗಿರುತ್ತೀರಿ. ತಾಯಿಯ ಆರೋಗ್ಯದ ಬಗ್ಗೆ ಚಿಂತೆ ಕಾಡಲಿದೆ. ಆರ್ಥಿಕ ಹಾನಿಯಾಗುವ ಸಾಧ್ಯತೆ ಇದೆ. ಆಸ್ತಿ, ಮನೆ, ವಾಹನ ಇತ್ಯಾದಿ ಖರೀದಿಯ ದಸ್ತಾವೇಜುಗಳಿಗೆ ಸಹಿ ಹಾಕಬೇಡಿ.
ಕನ್ಯಾ 


ನಿಗೂಢ ರಹಸ್ಯ ಮತ್ತು ಆಧ್ಯಾತ್ಮಿಕತೆಯ ಕಡೆಗೆ ಹೆಚ್ಚು ಒಲವು ಮೂಡಲಿದೆ. ಇಂದು ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ. ಹೊಸ ಕಾರ್ಯವನ್ನು ಆರಂಭಿಸಲು ಇದು ಶುಭ ಸಮಯ.
ತುಲಾ 


ದಿನದ ಆರಂಭದಲ್ಲೇ ನಿಮ್ಮ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಕೋಪವನ್ನು ನಿಯಂತ್ರಿಸಿಕೊಳ್ಳಿ. ಕುಟುಂಬ ಸದಸ್ಯರೊಂದಿಗೆ ಸೌಹಾರ್ದಪೂರ್ಣವಾಗಿ ವರ್ತಿಸಿ.
ವೃಶ್ಚಿಕ 


ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಕುಟುಂಬದಲ್ಲಿ ಹರ್ಷೋಲ್ಲಾಸ ತುಂಬಿರುತ್ತದೆ. ಕೋಪವನ್ನು ನಿಯಂತ್ರಿಸಿಕೊಳ್ಳಿ. ಮಾತಿನ ಮೇಲೂ ಹಿಡಿತವಿರಲಿ.
ಧನು 


ಮಾತು ಮತ್ತು ಕೋಪ ನಿಮ್ಮ ಹಿಡಿತದಲ್ಲಿರಲಿ. ಕುಟುಂಬ ಸದಸ್ಯರೊಂದಿಗೆ ಬಾಂಧವ್ಯ ಹದಗೆಡಬಹುದು. ಶಾರೀರಿಕ ಮತ್ತು ಮಾನಸಿಕವಾಗಿ ಅಸ್ವಸ್ಥರಾಗಿರುತ್ತೀರಿ.
ಮಕರ 


ಸಾಮಾಜಿಕವಾಗಿ ಪ್ರಸಿದ್ಧಿ ದೊರೆಯಲಿದೆ. ಆರ್ಥಿಕ ಮತ್ತು ಸಾಮಾಜಿಕವಾಗಿ ಲಾಭದಾಯಕ ದಿನ. ಮಧ್ಯಾಹ್ನದ ನಂತರ ಅತ್ಯಂತ ಸಮಾಧಾನವಾಗಿರಿ.
ಕುಂಭ 


ನಿಮ್ಮ ಗೌರವ-ಪ್ರತಿಷ್ಠೆ ವೃದ್ಧಿಸಲಿದೆ. ಆರ್ಥಿಕ ಲಾಭದ ಸಾಧ್ಯತೆ ಇದೆ. ಪ್ರತಿ ಕಾರ್ಯವೂ ಸರಳವಾಗಿ ಪೂರ್ಣಗೊಳ್ಳಲಿದೆ. ಆದಾಯ ವೃದ್ಧಿಸುವ ಸಾಧ್ಯತೆ ಇದೆ.
ಮೀನ 


ಕೃಷಿಕರಿಗೆ ಮತ್ತು ವ್ಯಾಪಾರಿಗಳಿಗೆ ಬೆಳಗಿನ ಸಮಯ ಉತ್ತಮವಾಗಿದೆ. ಹಿರಿಯ ಅಧಿಕಾರಿಗಳು ಮತ್ತು ಪ್ರತಿಸ್ಪರ್ಧಿಗಳಿಂದ ದೂರವಿರಿ. ವೃಥಾ ಚರ್ಚೆಯಲ್ಲಿ ತೊಡಗಿಕೊಳ್ಳಬೇಡಿ.

Leave a Reply