ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ | 26-03-2018 | Daily Astrology

ಮೇಷ ರಾಶಿ : ಇವತ್ತು ನಿಮ್ಮಲ್ಲಿ ತಾಜಾತನ ಮತ್ತು ಸ್ಪೂರ್ತಿಯ ಅಭಾವವಿರುತ್ತದೆ. ಅದರ ಜೊತೆಗೆ ಕೋಪ ಕೂಡ ಹೆಚ್ಚಾಗಿರುತ್ತದೆ. ಇದರಿಂದಾಗಿ ನಿಮ್ಮ ಕೆಲಸ ಕಾರ್ಯಗಳಿಗೆ ಅಡಚಣೆಯಾಗಬಹುದು.

ವೃಷಭ ರಾಶಿ : ಅಧಿಕ ಕೆಲಸದ ಒತ್ತಡ ಮತ್ತು ಊಟ ತಿಂಡಿ ಕಡೆಗೆ ಗಮನ ಹರಿಸದೇ ಇರುವುದರಿಂದ ನಿಮ್ಮ ಆರೋಗ್ಯ ಹದಗೆಡುತ್ತದೆ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದೇ ಇರುವುದು ಹಾಗೂ ನಿದ್ದೆಯ ಅಭಾವದಿಂದ ಆಯಾಸದ ಅನುಭವವಾಗುತ್ತದೆ.

ಮಿಥುನ ರಾಶಿ : ಮೋಜು ಮಸ್ತಿ ಮತ್ತು ಮನರಂಜನೆಯ ಬಗ್ಗೆ ವಿಶೇಷ ಆಸಕ್ತಿ ಮೂಡುತ್ತದೆ. ಪ್ರಿಯ ವ್ಯಕ್ತಿಗಳೊಂದಿಗೆ ಹೊರಗೆ ಸುತ್ತಾಡಲು ತೆರಳಲಿದ್ದೀರಿ. ಸಾರ್ವಜನಿಕ ಜೀವನದಲ್ಲಿ ಗೌರವ ಪ್ರತಿಷ್ಠೆ ವೃದ್ಧಿಸಲಿದೆ.

ಕರ್ಕ ರಾಶಿ : ಇಂದು ಅತ್ಯಂತ ಖುಷಿ ಮತ್ತು ಸಫಲತೆಯ ದಿನ. ಕುಟುಂಬದಲ್ಲಿ ಸುಖ-ಶಾಂತಿ ತುಂಬಿರುತ್ತದೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಅನುಕೂಲಕರ ವಾತಾವರಣವಿರುತ್ತದೆ. ಸಹೋದ್ಯೋಗಿಗಳಿಂದ ಲಾಭವಾಗಲಿದೆ.

ಸಿಂಹ ರಾಶಿ : ಇವತ್ತು ಶಾರೀರಿಕ ಮತ್ತು ಮಾನಸಿಕ ಅಸ್ವಸ್ಥತೆ ಕಾಣಿಸಿಕೊಳ್ಳಬಹುದು. ಸೃಜನಾತ್ಮಕ ಕಾರ್ಯಗಳಲ್ಲಿ ವಿಶೇಷಾ ಆಸಕ್ತಿ ಮೂಡುತ್ತದೆ. ಸಾಹಿತ್ಯ ಮತ್ತು ಕಲೆಯ ಕ್ಷೇತ್ರದಲ್ಲಿ ಹೊಸ ಪ್ರಯೋಗ ಮಾಡಲು ಪ್ರೇರಣೆ ಸಿಗಲಿದೆ.

ಕನ್ಯಾ ರಾಶಿ : ಇವತ್ತು ಪ್ರತಿಕೂಲ ಪರಿಸ್ಥಿತಿಗಳು ಎದುರಾಗಿವೆ. ಅದನ್ನು ನಿಭಾಯಿಸಲು ಸನ್ನದ್ಧರಾಗಿರಿ. ಶಾರೀರಿಕ ಆರೋಗ್ಯ ಹದಗೆಡುವ ಸಾಧ್ಯತೆಯೂ ಇದೆ.
ತುಲಾ ರಾಶಿ : ಭಾಗ್ಯವೃದ್ಧಿಯ ಯೋಗವಿದೆ. ಇದರಿಂದ ಸಾಹಸಮಯ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಉತ್ಸಾಹ ಮೂಡಲಿದೆ. ಹೊಸ ಕೆಲಸ ಆರಂಭಿಸಲು ಶುಭ ದಿನ.

ವೃಶ್ಚಿಕ ರಾಶಿ : ನಕಾರಾತ್ಮಕ ಆಲೋಚನೆಗಳನ್ನು ದೂರ ಮಾಡಿಕೊಳ್ಳಿ. ಅತಿಯಾಗಿ ಮಾತನಾಡಬೇಡಿ. ಮನೆಯಲ್ಲಿ ಉದ್ಭವವಾಗುವ ಸಮಸ್ಯೆಗಳನ್ನೆಲ್ಲ ನಿಭಾಯಿಸಿ.

ಧನು ರಾಶಿ : ನಿಗದಿತ ಕೆಲಸಗಳಲ್ಲಿ ಸಫಲತೆ ಸಿಗಲಿದೆ. ಆರ್ಥಿಕ ಲಾಭವಾಗಲಿದೆ. ಕುಟುಂಬದಲ್ಲಿ ಮಂಗಳ ಕಾರ್ಯಗಳು ಜರುಗಲಿವೆ. ಪ್ರವಾಸ ಅದರಲ್ಲೂ ತೀರ್ಥಯಾತ್ರೆ ಕೈಗೊಳ್ಳುವ ಸಾಧ್ಯತೆ ಇದೆ.

ಮಕರ ರಾಶಿ : ಇಂದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ಪೂಜೆ ಹಾಗೂ ಧಾರ್ಮಿಕ ಕೆಲಸಗಳಿಗಾಗಿ ಹಣ ಕೂಡ ಖರ್ಚಾಗಲಿದೆ.

ಕುಂಭ ರಾಶಿ : ಹೊಸ ಕಾರ್ಯವನ್ನು ಕೈಗೆತ್ತಿಕೊಳ್ಳಲಿದ್ದೀರಿ. ದೇವರ ಕೃಪೆ ನಿಮ್ಮ ಮೇಲಿದೆ. ನೌಕರಿ ಮತ್ತು ವ್ಯಾಪಾರದಲ್ಲಿ ಅಧಿಕ ಧನಲಾಭವಾಗಲಿದೆ. ಸ್ತ್ರೀ ಮಿತ್ರರಿಂದ ವಿಶೇಷ ಲಾಭವಿದೆ.

ಮೀನ ರಾಶಿ : ಇವತ್ತು ನಿಮಗೆ ಶುಭ ದಿನ. ಹಿರಿಯ ಅಧಿಕಾರಿಗಳ ಪ್ರೋತ್ಸಾಹ ದೊರೆಯಲಿದೆ. ಇದರಿಂದ ನಿಮ್ಮ ಉತ್ಸಾಹ ದುಪ್ಪಟ್ಟಾಗುತ್ತದೆ. ವ್ಯಾಪಾರಿಗಳ ಆದಾಯದಲ್ಲೂ ವೃದ್ಧಿಯಾಗುತ್ತದೆ.

Leave a Reply