ಮೇಷ ರಾಶಿ : ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಯಲಿದೆ. ನಿಮ್ಮ ಯೋಜನೆಗಳೆಲ್ಲ ಯಶಸ್ವಿಯಾಗುತ್ತವೆ. ಸರ್ಕಾರದಿಂದ್ಲೂ ನೆರವು ದೊರೆಯುವ ಸಾಧ್ಯತೆ ಇದೆ.
ವೃಷಭ ರಾಶಿ : ಇವತ್ತು ನಿಮಗೆ ಮಿಶ್ರ ಫಲವಿದೆ. ವ್ಯಾಪಾರಿಗಳು ಹೆಚ್ಚಿನ ಹಣ ಹೂಡಿಕೆ ಮಾಡಿ ಹೊಸ ಕಾರ್ಯ ಆರಂಭಿಸಲಿದ್ದಾರೆ. ಭವಿಷ್ಯಕ್ಕಾಗಿಯೂ ಆರ್ಥಿಕ ಯೋಜನೆಗಳನ್ನು ರೂಪಿಸಬಹುದು.
ಮಿಥುನ ರಾಶಿ : ಕೋಪ ನಿಮ್ಮನ್ನು ಅಪಾಯಕ್ಕೆ ಸಿಲುಕಿಸುವ ಸಾಧ್ಯತೆ ಇದೆ. ಹಾಗಾಗಿ ಅತ್ಯಂತ ಸಮಾಧಾನ ಚಿತ್ತದಿಂದಿರಿ. ಯಾವುದೇ ವ್ಯಕ್ತಿಯಿಂದ ನಿಮಗೆ ಅವಮಾನ ಆಗದಂತೆ ಎಚ್ಚರಿಕೆ ವಹಿಸಿ.
ಕರ್ಕ ರಾಶಿ : ಇಂದು ನಿಮ್ಮ ಮನಸ್ಸು ಅತ್ಯಂತ ಸಂವೇದನಾಶೀಲವಾಗಿರುತ್ತದೆ. ಹೆಚ್ಚು ಭಾವುಕರಾಗಲಿದ್ದೀರಿ. ಮೋಜು ಮಸ್ತಿ, ಹೊಸ ಬಟ್ಟೆ, ಆಭರಣ, ಹಾಗೂ ವಾಹನ ಖರೀದಿ ಯೋಗವಿದೆ.
ಸಿಂಹ ರಾಶಿ : ಇಂದು ಅತ್ಯಂತ ಉದಾಸೀನರಾಗಿರುತ್ತೀರಾ. ಕ್ರಿಯಾಶೀಲತೆಯ ಕೊರತೆ ಇರುತ್ತದೆ. ಇದರಿಂದ ಮನಸ್ಸು ಕೂಡ ಆತಂಕಗೊಳ್ಳುತ್ತದೆ. ದಿನದ ಕಾರ್ಯಗಳು ಕೂಡ ವಿಳಂಬವಾಗಲಿವೆ.
ಕನ್ಯಾ ರಾಶಿ : ಇವತ್ತು ಚಿಂತೆ ಮತ್ತು ಉದ್ವೇಗ ಹೆಚ್ಚಾಗಿರುತ್ತದೆ. ಉದರ ಬಾಧೆಯಿಂದ ಆರೋಗ್ಯ ಹದಗೆಡಬಹುದು. ವಿದ್ಯಾರ್ಥಿಗಳಿಗೆ ಓದಿನಲ್ಲಿ ಅಡ್ಡಿ ಆತಂಕಗಳು ಎದುರಾಗುತ್ತವೆ.
ತುಲಾ ರಾಶಿ : ಇವತ್ತು ನೀವು ಅತ್ಯಂತ ಜಾಗರೂಕರಾಗಿರಿ. ಅಧಿಕ ಆಲೋಚನೆಯಿಂದ ಮಾನಸಿಕವಾಗಿ ಹತಾಶರಾಗುತ್ತೀರಿ. ತಾಯಿ ಮತ್ತು ಸ್ತ್ರೀವರ್ಗಕ್ಕೆ ಸಂಬಂಧಿಸಿದಂತೆ ಚಿಂತೆ ಕಾಡುತ್ತದೆ.
ವೃಶ್ಚಿಕ ರಾಶಿ : ಇಂದು ನಿಮಗೆ ಲಾಭದಾಯಕ ದಿನ. ಆರ್ಥಿಕ ಲಾಭದ ಜೊತೆ ಜೊತೆಗೆ ಭಾಗ್ಯವೃದ್ಧಿಯ ಯೋಗವೂ ಇದೆ. ಅಂದುಕೊಂಡ ಕೆಲಸಗಳು ಕೈಗೂಡಲಿವೆ.
ಧನು ರಾಶಿ : ಹಿರಿಯರು ಮತ್ತು ಕುಟುಂಬಸ್ಥರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ತಪ್ಪು ತಿಳುವಳಿಕೆ ಮೂಡದಂತೆ ಎಚ್ಚರ ವಹಿಸಿ. ವ್ಯರ್ಥವಾಗಿ ಹಣ ಖರ್ಚಾಗುವ ಸಾಧ್ಯತೆ ಇದೆ.
ಮಕರ ರಾಶಿ : ಇಂದು ಈಶ್ವರನ ಧ್ಯಾನ ಹಾಗೂ ಪೂಜಾ ಪಾಠ ಮಾಡಿದರೆ ಒಳಿತಾಗುತ್ತದೆ. ಮನೆಯಲ್ಲಿ ಮಂಗಳಕರ ವಾತಾವರಣ ಇರುತ್ತದೆ. ಸ್ನೇಹಿತರು ಸಂಬಂಧಿಕರ ಭೇಟಿ ಮತ್ತು ಉಪಹಾರ ದೊರೆಯಲಿದೆ.
ಕುಂಭ ರಾಶಿ : ಹಣಕಾಸಿನ ಕೊಡು ಕೊಳ್ಳುವಿಕೆಯಲ್ಲಿ ನಿಮಗೆ ಮೋಸವಾಗಬಹುದು. ಹಾಗಾಗಿ ಎಚ್ಚರಿಕೆಯಿಂದಿರಿ. ಏಕಾಗ್ರತೆಯ ಅಭಾವ ಉಂಟಾಗಲಿದೆ. ಇದರಿಂದ ಮಾನಸಿಕ ಸ್ವಾಸ್ಥ್ಯ ಹದಗೆಡಬಹುದು.
ಮೀನ ರಾಶಿ : ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ದೊರೆಯಲಿದೆ. ಸಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ಹಿರಿಯರು ಮತ್ತು ಮಿತ್ರರಿಂದ ಸಹಕಾರ ದೊರೆಯುತ್ತದೆ. ಆದಾಯ ವೃದ್ಧಿಯಾಗಲಿದೆ.