ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ | 06-04-2018

ಮೇಷ ರಾಶಿ :- ಮಧ್ಯಾಹ್ನದ ನಂತರ ಕುಟುಂಬ ಸದಸ್ಯರು ಮತ್ತು ಒಡಹುಟ್ಟಿದವರೊಂದಿಗೆ ಆನಂದದಾಯಕವಾಗಿ ಸಮಯ ಕಳೆಯುತ್ತೀರಿ. ಪ್ರತಿಸ್ಪರ್ಧಿಯನ್ನು ಸೋಲಿಸುತ್ತೀರಿ. ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರಲಿದೆ. ಪ್ರವಾಸ ಯೋಗವಿದೆ.

ವೃಷಭ ರಾಶಿ :- ಇವತ್ತು ನಿಮಗೆ ಶುಭದಿನ. ಕಾರ್ಯಸಿದ್ಧಿಯಾಗಲಿದೆ, ಲಕ್ಷ್ಮಿ ಕಟಾಕ್ಷ ನಿಮ್ಮ ಮೇಲಿದೆ. ಶಾರೀರಿಕ ಮತ್ತು ಮಾನಸಿಕ ಸ್ಥಿತಿ ಉತ್ಸಾಹಮಯ ಮತ್ತು ಪ್ರಫುಲ್ಲತೆಯಿಂದ ಕೂಡಿರಲಿದೆ. ಹಾಗಾಗಿ ಪ್ರತಿ ಕಾರ್ಯವನ್ನೂ ಉತ್ಸಾಹದಿಂದ್ಲೇ ಮಾಡುತ್ತೀರಾ.

ಮಿಥುನ ರಾಶಿ :- ಮನಸ್ಸು ವ್ಯಗ್ರವಾಗಿರಲಿದೆ. ಹಾಗಾಗಿ ಆಧ್ಯಾತ್ಮದ ಕಡೆಗೆ ಮನಸ್ಸು ಹರಿಸಿ, ಶಾಂತವಾಗಿರಿ. ಮಧ್ಯಾಹ್ನದ ನಂತರ ಸ್ಪೂರ್ತಿ ಹಾಗೂ ಉಲ್ಲಾಸದ ಅನುಭವವಾಗುತ್ತದೆ. ಕುಟುಂಬದಲ್ಲೂ ಆನಂದದ ವಾತಾವರಣವಿರಲಿದೆ. ಶುಭ ಸಂದರ್ಭಗಳಿಗೆ ಭೇಟಿ ಮಾಡುವ ಅವಕಾಶವಿದೆ.

ಕರ್ಕ ರಾಶಿ :- ಇವತ್ತಿನ ದಿನ ಎಲ್ಲಾ ವಿಧದಿಂದ್ಲೂ ಲಾಭ ತರಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯರಾಗಿರುತ್ತೀರಿ. ಅದರ ಪ್ರತಿಫಲವಾಗಿ ನಿಮ್ಮ ಪ್ರತಿಷ್ಠೆ ಹೆಚ್ಚಲಿದೆ. ಅವಿವಾಹಿತರಿಗೆ ಸೂಕ್ತ ಜೀವನ ಸಂಗಾತಿ ದೊರೆಯುವ ಸಾಧ್ಯತೆ ಇದೆ.

ಸಿಂಹ ರಾಶಿ :-ಇವತ್ತು ನಿಮಗೆ ಶುಭದಿನ. ಪರೋಪಕಾರಿ ಕಾರ್ಯವನ್ನು ಮಾಡಲಿದ್ದೀರಿ. ವ್ಯಾಪಾರದಲ್ಲೂ ವೃದ್ಧಿಯಾಗುವ ಸಂಭವ ಇದೆ. ನಿಮ್ಮ ಕಾರ್ಯದ ಮೂಲಕ ಉನ್ನತ ಅಧಿಕಾರಿಗಳನ್ನು ಸಂತುಷ್ಟಪಡಿಸಲಿದ್ದೀರಿ, ಕಚೇರಿಯಲ್ಲೂ ಗೌರವ ಹೆಚ್ಚಲಿದೆ.

ಕನ್ಯಾ ರಾಶಿ :- ಪ್ರವಾಸಕ್ಕೆ ಇಂದು ಅನುಕೂಲಕರ ದಿನ. ವ್ಯಾಪಾರ ಸಂಬಂಧಿ ಕೆಲಸಗಳಿಂದ್ಲೂ ಲಾಭವಾಗಲಿದೆ. ಮನೆಯಲ್ಲಿ ಶುಭ ಕಾರ್ಯಗಳ ಆಯೋಜನೆಯಾಗಲಿದೆ. ಆರ್ಥಿಕ ಲಾಭ ದೊರೆಯುವ ಸಾಧ್ಯತೆ ಇದೆ.
ತುಲಾ ರಾಶಿ :- ಇಂದು ನಿಮಗೆ ಮಿಶ್ರಫಲವಿದೆ, ಅನುಕೂಲತೆ ಪ್ರತಿಕೂಲತೆ ಎರಡೂ ಸಂದರ್ಭಗಳು ಎದುರಾಗುತ್ತವೆ. ಹೊಸ ಯೋಜನೆಗಳ ಬಗ್ಗೆ ಚಿಂತನೆ ನಡೆಸುತ್ತೀರಿ. ಆಲಸ್ಯ ಮತ್ತು ವ್ಯಗ್ರತೆ ಮನಸ್ಸಿನಲ್ಲಿ ತುಂಬಿರುತ್ತದೆ.
ವೃಶ್ಚಿಕ ರಾಶಿ :- ವಾಹನ ಚಾಲನೆ ಸಂದರ್ಭದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಇದೆ, ಜಾಗರೂಕರಾಗಿರಿ. ಆಕಸ್ಮಿಕವಾಗಿ ಹಣ ಖರ್ಚಾಗಲಿದೆ. ಮಧ್ಯಾಹ್ನದ ನಂತರ ಬೌದ್ಧಿಕ ಮತ್ತು ಸಾಹಿತ್ಯ ಪ್ರವೃತ್ತಿಗಳ ಬಗ್ಗೆ ಆಸಕ್ತಿ ಮೂಡಲಿದೆ.

ಧನು ರಾಶಿ :- ಆಕಸ್ಮಿಕವಾಗಿ ಹಣ ಖರ್ಚಾಗಲಿದೆ. ಪಾಲುದಾರರೊಂದಿಗೆ ಭಿನ್ನಾಭಿಪ್ರಾಯ ಮೂಡಲಿದೆ. ಉದ್ಯೋಗ ಮತ್ತು ಉದ್ಯಮದಲ್ಲಿ ಅನುಕೂಲಕರ ಪರಿಸ್ಥಿತಿ ಇದೆ. ಕೋಪವನ್ನು ನಿಯಂತ್ರಿಸಿಕೊಳ್ಳಿ.

ಮಕರ ರಾಶಿ :- ಪ್ರಬಲ ಲಾಭದ ಯೋಗವಿದೆ. ಆಕಸ್ಮಿಕವಾಗಿ ಹಣವೂ ಖರ್ಚಾಗಲಿದೆ. ಪಾಲುದಾರರೊಂದಿಗೆ ಜಗಳವಾಗಬಹುದು. ಕೋಪದ ಮೇಲೆ ನಿಯಂತ್ರಣ ಇಟ್ಟುಕೊಳ್ಳಿ. ಇಂದು ಹೊಸ ಕಾರ್ಯ ಆರಂಭಿಸಬೇಡಿ.

ಕುಂಭ ರಾಶಿ :- ಮನಸ್ಸು ವಿಚಲಿತವಾಗಿರುತ್ತದೆ. ಹೊಟ್ಟೆಗೆ ಸಂಬಂಧಿಸಿದ ವ್ಯಾಧಿಯಿಂದ ನೋವು ಅನುಭವಿಸುತ್ತೀರಿ. ವಿದ್ಯಾಭ್ಯಾಸ ಮಾಡುವವರಿಗೆ ವಿಘ್ನಗಳು ಎದುರಾಗಬಹುದು. ಆಕಸ್ಮಿಕವಾಗಿ ಹಣ ಖರ್ಚಾಗುವ ಸಾಧ್ಯತೆ ಇದೆ.

ಮೀನ ರಾಶಿ :- ಇವತ್ತು ನಿಮಗೆ ಮಧ್ಯಮ ಫಲದಾಯಕ ದಿನ. ಶಾರೀರಿಕ ಸ್ಪೂರ್ತಿ ಮತ್ತು ಮಾನಸಿಕ ಪ್ರಸನ್ನತೆಯ ಅಭಾವವಾಗಲಿದೆ. ಮನೆಯಲ್ಲಿ ಉಗ್ರ ವಾತಾವರಣವಿರುತ್ತದೆ. ವ್ಯಾವಹಾರಿಕ ಬದುಕಿನಲ್ಲಿ ಮಾನಹಾನಿಯಾಗದಂತೆ ಎಚ್ಚರ ವಹಿಸಿ.

Leave a Reply