‘ನಾವು ಐದು ಮಂದಿಯೊಂದಿಗೆ ಸಹಕರಿಸಿದರೆ’ ಸ್ಯಾಂಡಲ್ವುಡ್ ನಟಿಯ ಹೊಸ ಬಾಂಬ್

ಸ್ಯಾಂಡಲ್ವುಡ್ ಸೇರಿದಂತೆ ಬಹುಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರುವ ಖ್ಯಾತ ನಟಿ ಶ್ರುತಿ ಹರಿಹರನ್, ತಮಗೆ ನಿರ್ಮಾಪಕರೊಬ್ಬರು ಲೈಂಗಿಕ ಕಿರುಕುಳ ನೀಡಿದ್ದ ವಿಷಯವನ್ನು ಬಹಿರಂಗಪಡಿಸಿದ್ದಾರೆ. 

ಹೈದರಾಬಾದ್ ನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಶ್ರುತಿ ಹರಿಹರನ್ ತಮಗಾದ ಅನುಭವವನ್ನು ಹೇಳಿಕೊಂಡಿದ್ದು, 18ನೇ ವಯಸ್ಸಿನಲ್ಲಿ ನಡೆದ ಘಟನೆಯನ್ನು ಮೆಲುಕು ಹಾಕಿದ್ದಾರೆ.
ಆಗಿನ್ನೂ ಶ್ರುತಿ ಹರಿಹರನ್ ನೃತ್ಯಗಾತಿಯಾಗಿದ್ದರು. ಆಗ ನಿರ್ಮಾಪಕರೊಬ್ಬರು ಮಂಚಕ್ಕೆ ಕರೆದಿದ್ದಾರೆ. ತಾವು 5 ಮಂದಿ ಇದ್ದು ನಮ್ಮೊಂದಿಗೆ ಸಹಕರಿಸಿದರೆ, ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಆಮಿಷವೊಡ್ಡಿದ್ದಾರೆ. ಇದಕ್ಕೆ ಶ್ರುತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಂತರದಲ್ಲಿ ನಿರ್ಮಾಪಕನೊಬ್ಬ ಇದೇ ರೀತಿ ಮಂಚಕ್ಕೆ ಕರೆದಿದ್ದು, ನಟಿ ಎಂದರೆ ವಾವ್ ಎನ್ನುವಂತಿರಬೇಕು ಎಂದು ಹೇಳಿದ್ದು, ಇದಕ್ಕೆ ಆಕ್ರೋಶಗೊಂಡ ಶ್ರುತಿ ಹರಿಹರನ್, ಚಪ್ಪಲಿಯಲ್ಲಿ ಹೊಡೆಯುವುದಾಗಿ ನಿರ್ಮಾಪಕನಿಗೆ ನೀರಿಳಿಸಿದ್ದಾರೆ.
ಇದೆಲ್ಲವನ್ನು ಶ್ರುತಿ ಅವರೇ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ಶ್ರುತಿ ಹರಿಹರನ್ ತಮಗಾದ ಲೈಂಗಿಕ ಕಿರುಕುಳದ ಕುರಿತಾಗಿ ಹೇಳಿಕೊಂಡಿದ್ದು, ಸ್ಯಾಂಡಲ್ವುಡ್ ನಲ್ಲಿ ಭಾರೀ ಸಂಚಲನ ಮೂಡಿಸಿದೆ.

Leave a Reply