ಟ್ರಾಫಿಕ್ ಪೊಲೀಸರ ಜಾಹೀರಾತಿನಲ್ಲೂ ಕಣ್ಸನ್ನೆ ಬೆಡಗಿ | ಪ್ರಿಯಾ ವಾರಿಯರ್

ದಿನೇ ದಿನೇ ಹೆಚ್ಚುತ್ತಿರುವ ಅಪಘಾತ, ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳನ್ನು ತಡೆಯಲು ಟ್ರಾಫಿಕ್ ಪೊಲೀಸರು ಹೊಸ ಹೊಸ ವಿಧಾನವನ್ನು ಅನುಸರಿಸುತ್ತಿದ್ದಾರೆ. ಇದೀಗ ಇಂಟರ್ನೆಟ್ ನಲ್ಲಿ ಸಂಚಲನ ಮೂಡಿಸಿದ್ದ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್ ಪೋಸ್ಟರ್ ಮೂಲಕ ವಾಹನ ಸವಾರರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಪ್ರಿಯಾ ಫೋಟೋ ಹಾಕಿ, ಅದರ ಕೆಳಗಡೆ ‘ಕಣ್ಮುಚ್ಚಿ ತೆರೆಯುವುದರಲ್ಲಿ ಅಪಘಾತ ಸಂಭವಿಸಬಹುದು, ಹಾಗಾಗಿ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ’ ಅಂತಾ ಬರೆದಿದ್ದಾರೆ. ವಡೋದರಾದಲ್ಲಿ ಹಾಕಿರೋ ಟ್ರಾಫಿಕ್ ಪೊಲೀಸರ ಈ ಜಾಹೀರಾತು ವಾಹನ ಸವಾರರ ಗಮನ ಸೆಳೆದಿದೆ.
ಸ್ವಲ್ಪ ತಮಾಷೆಯಾಗಿ, ದೈನಂದಿನ ಬದುಕಿಗೆ ಅತ್ಯಂತ ಹತ್ತಿರವಾಗುವ ರೀತಿಯಲ್ಲಿ ಜಾಹೀರಾತು ನೀಡಿ, ಜನರಲ್ಲಿ ಸಂಚಾರ ನಿಯಮ ಪಾಲನೆ ಬಗ್ಗೆ ಅರಿವು ಮೂಡಿಸುವುದು ಪೊಲೀಸ್ ಇಲಾಖೆಯ ಉದ್ದೇಶ. ಇಂತಹ ಜಾಹೀರಾತುಗಳಿಗೆ ಸಾಮಾಜಿಕ ಜಾಲತಾಣಗಳಲ್ಲಂತೂ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

Leave a Reply